ವಿವಿಧ ಸ್ವಭಾವದೋಷಗಳ ವಿಶ್ಲೇಷಣೆ

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕೆಲವು ಗುಣಗಳು ಮತ್ತು ಕೆಲವು ಸ್ವಭಾವದೋಷಗಳಿರುತ್ತವೆ. ಮುಂದೆ ಕೆಲವು ಸ್ವಭಾವದೋಷಗಳ ವಿವೇಚನೆಯನ್ನು ಮಾಡಲಾಗಿದೆ.

ಇಲ್ಲಿ ನೀಡಿರುವ ಸ್ವಭಾವದೋಷಗಳ ಸಂಕ್ಷಿಪ್ತ ವಿಶ್ಲೇಷಣೆಯಿಂದ ಅಧ್ಯಯನದಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡುವಾಗ ನಮ್ಮಲ್ಲಿರುವ ಸ್ವಭಾವದೋಷಗಳು ಯಾವುವು ಎಂದು ಗುರುತಿಸಲು ಸಹಾಯವಾಗಲಿ ಎಂದು ನಾವು ಆಶಿಸುತ್ತೇವೆ.

ಸರ್ವೇಸಾಮಾನ್ಯವಾಗಿ ಕಾಣಿಸುವ ಕೆಲವು ಪ್ರಮುಖ ದೋಷಗಳ ಬಗ್ಗೆ ಮಾಹಿತಿ ಇಲ್ಲಿ ನೀಡಿದ್ದು ಮುಂದೆ ಇತರ ದೋಷಗಳ ಬಗ್ಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.

ಅ. ಪ್ರತಿಕ್ರಿಯೆಗಳು ಬರುವುದು

೧. ನಮ್ಮಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರುವವರೆಗೆ ನಮ್ಮ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಮತ್ತು ನಕಾರಾತ್ಮಕ ವಿಚಾರಗಳು ಬರುವವು.

೨. ನಮ್ಮ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಬರುವುದರ ಅಥವಾ ವ್ಯಕ್ತವಾಗುವುದರ ಹಿಂದೆ ಮೇಲ್ನೋಟಕ್ಕೆ ಯಾವುದಾದರೊಂದು ಸ್ವಭಾವದೋಷ ಅಥವಾ ಅಹಂನ ಲಕ್ಷಣ ಕಾರಣವೆನಿಸಿದರೂ, ಹೆಚ್ಚಿನ ಸಲ ಅದರ ಮೂಲದಲ್ಲಿ ಇತರ ಸ್ವಭಾವದೋಷಗಳು ಅಥವಾ ಅಹಂನ ಲಕ್ಷಣಗಳೂ ಇರುತ್ತವೆ.

ಉದಾಹರಣೆ : ಸೌ. ಅಲಕಾ ಇವರ ಸಂಬಂಧಿಕರೊಬ್ಬರು ತಮ್ಮ ಮಗನ ವಿವಾಹದ ಆಮಂತ್ರಣವನ್ನು ಅವರಿಗೆ ಕೊಡಲಿಲ್ಲ, ಆಗ ಅವರಿಗೆ ಕೋಪ ಬಂದಿತು ಮತ್ತು ಅವರು ಅದರ ಬಗ್ಗೆ ಯಜಮಾನರಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಇಲ್ಲಿ ಸೌ. ಅಲಕಾ ಇವರಲ್ಲಿರುವ ‘ಕೋಪ ಬರುವುದು’ ಎಂಬ ದೋಷವು ಪ್ರಬಲವಾಗಿದೆ; ಆದರೆ ಅದರ ಮೂಲದಲ್ಲಿ ‘ವಿವಾಹದ ಆಮಂತ್ರಣ ನೀಡಿ ನನಗೆ ಮಹತ್ವ ಕೊಡಬೇಕಾಗಿತ್ತು’ ಎಂಬ ಅಪೇಕ್ಷೆಯೂ ತೀವ್ರವಾಗಿದೆ.

೩. ಪ್ರತಿಯೊಂದು ವಿಷಯವು ನನ್ನ ಮನಸ್ಸಿನಂತೆಯೇ ಆಗಬೇಕು, ಎಂದು ನಮ್ಮ ಪ್ರಯತ್ನಗಳು ಆಗುತ್ತಿದ್ದರೆ ಮತ್ತು ಅದರಂತೆ ಇತರರಿಂದ ಅಪೇಕ್ಷೆಯಿದ್ದರೆ ನಮ್ಮ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳ ಪ್ರಮಾಣ ಹೆಚ್ಚಿರುತ್ತದೆ.

೪. ನಮ್ಮ ಮನಸ್ಸಿನ ವಿರುದ್ಧ ಏನಾದರೂ ಘಟಿಸಿದರೆ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಬರುತ್ತವೆ.

೫. ನಮ್ಮ ಮನಸ್ಸಿನಲ್ಲಿ ಪದೇಪದೇ ಪ್ರತಿಕ್ರಿಯೆಗಳು ಬಂದರೆ ನಮ್ಮಲ್ಲಿ ಪೂರ್ವಾಗ್ರಹ ನಿರ್ಮಾಣವಾಗಬಹುದು.

ಆ. ಸ್ವಂತದ ಬಗ್ಗೆ ಮತ್ತು ಇತರರ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಮಾಡುವುದು

೧. ‘ನನಗೆ ಮಾಡಲು ಆಗುವುದಿಲ್ಲ’ ಎಂಬ ನಕಾರಾತ್ಮಕ ವಿಚಾರವನ್ನು ಮಾಡದೇ ಕಲಿಯುವ ಸ್ಥಿತಿಯಲ್ಲಿದ್ದು ತಮ್ಮಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಭಾಗವನ್ನು ಹೆಚ್ಚಿಸಬೇಕು. ಯಾವುದು ಸಾಧ್ಯವಾಗುವುದಿಲ್ಲವೋ, ಅದನ್ನು ಮಾಡಲು ಪ್ರಯತ್ನಿಸಬೇಕು, ಹಾಗೆಯೇ ತನ್ನ ಸುತ್ತಲೂ ನಾವೇ ಹಾಕಿಕೊಂಡ ವಿಶಿಷ್ಟ ಮಿತಿಯ ಚೌಕಟ್ಟನ್ನು ಮುರಿಯಬೇಕು.

೨. ನಾವು ನಕಾರಾತ್ಮಕ ವಿಚಾರಗಳನ್ನು ಮಾಡುತ್ತಿದ್ದರೆ, ಈಶ್ವರೀ ತತ್ತ್ವ ಕಾರ್ಯನಿರತವಾಗುವುದಿಲ್ಲ ಅಥವಾ ನಮ್ಮ ಕಡೆ ಬರುವ ಈಶ್ವರೀ ಕೃಪೆಯ ಪ್ರವಾಹ ಭಂಗವಾಗುತ್ತದೆ.

೩. ನಮ್ಮ ನಕಾರಾತ್ಮಕತೆ ತುಂಬಾ ಹೆಚ್ಚಾದರೆ, ನಮಗೆ ಇತರರಿಂದ ಸಹಾಯ ಪಡೆಯಲು ಆಗುವುದಿಲ್ಲ.

೪. ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದರೆ, ನಮಗೆ ನೀಡಿದ ಮಾರ್ಗದರ್ಶನ / ದೃಷ್ಟಿಕೋನ ನಮ್ಮ ಅಂತರ್ಮನಸ್ಸಿನವರೆಗೆ ಹೋಗುವುದಿಲ್ಲ.

೫. ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳನ್ನು ನಾವು ಯಾರಿಗೂ ಹೇಳದಿದ್ದರೆ ಅಥವಾ ಅದಕ್ಕೆ ಪರಿಹಾರ ಕಂಡುಹಿಡಿಯದಿದ್ದರೆ ನಮ್ಮ ಮನಸ್ಸು ಮತ್ತು ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ಹೆಚ್ಚಾಗುತ್ತದೆ ಮತ್ತು ನಮ್ಮ ಸಾಧನೆಯ ಪರಿಣಾಮಕಾರತೆ ಕಡಿಮೆಯಾಗುತ್ತದೆ.

೬. ನಮ್ಮ ಮನಸ್ಸಿನಲ್ಲಿ ಯಾರದಾದರೊಬ್ಬರ ಬಗ್ಗೆ ನಕಾರಾತ್ಮಕ ವಿಚಾರಗಳು ಬರುತ್ತಿದ್ದರೆ, ಕಾಲಾಂತರದಲ್ಲಿ ಆ ವ್ಯಕ್ತಿಯ ಬಗ್ಗೆ ನಕಾರಾತ್ಮಕವಾಗಿ ಮಾತನಾಡತೊಡಗುತ್ತೇವೆ ಮತ್ತು ನಂತರ ಅವನನ್ನು ನಿಂದಿಸುತ್ತೇವೆ. ಇದರಿಂದ ಪಾಪ ತಗಲುತ್ತದೆ.

ಇ. ಆಲಸ್ಯ

೧. ನಮ್ಮಲ್ಲಿ ‘ಆಲಸ್ಯ’ ಸ್ವಭಾವದೋಷವು ಪ್ರಬಲವಾಗಿರುವುದರಿಂದ ‘ನಾವು ನಮ್ಮ ಮನಸ್ಸಿನಂತೆ ನಡೆದುಕೊಳ್ಳುತ್ತೇವೆಯೇ ?’ ಎಂಬುದನ್ನು ನೋಡಬೇಕು.

೨. ನಮ್ಮಲ್ಲಿರುವ ಆಲಸ್ಯ ಎಂಬ ಸ್ವಭಾವದೋಷದಿಂದಾಗಿ ‘ನಾವು ಯೋಗ್ಯ ಕೃತಿ ಮಾಡುವುದಿಲ್ಲವೇ ? ಎಂಬುದನ್ನು ನೋಡಬೇಕು.

೩. ಆಲಸ್ಯದಿಂದಾಗಿ ನಾವು ರಿಯಾಯಿತಿ ಪಡೆಯುತ್ತೇವೆಯೇ ? ಎಂಬುದನ್ನು ನೋಡಬೇಕು, ಉದಾ. ಆಲಸ್ಯದಿಂದ ನಾವು ‘ಇವತ್ತು ವ್ಯಾಯಾಮ ಮಾಡುವುದು ಬೇಡ / ಇವತ್ತು ಬಟ್ಟೆಗಳನ್ನು ತೊಳೆಯುವುದು ಬೇಡ’ ಎಂದು ನಿರ್ಧರಿಸುತ್ತೇವೆ.

೪. ದೇವರು ಸೋಮಾರಿ ಮನುಷ್ಯನಿಗೆ ಸಹಾಯ ಮಾಡುವುದಿಲ್ಲ, ಪ್ರಯತ್ನ ಮಾಡುವವನಿಗೆ ಸಹಾಯ ಮಾಡುತ್ತಾನೆ !

ಈ. ಅವ್ಯವಸ್ಥಿತತನ

ನಮ್ಮಲ್ಲಿ ಅವ್ಯವಸ್ಥಿತತನ ಸ್ವಭಾವದೋಷವು ಪ್ರಬಲವಾಗಿದ್ದರೆ, ನಾವು ನಮ್ಮ ವಸ್ತುಗಳನ್ನು ಅವ್ಯವಸ್ಥಿತವಾಗಿ ಇಡುತ್ತೇವೆ.

ಉ. ಮಾತನಾಡುವುದರ ಸಂದರ್ಭದಲ್ಲಿನ ಸ್ವಭಾವದೋಷಗಳು

ಇ ೧. ಅನಾವಶ್ಯಕ ಮಾತನಾಡುವುದು

ಇ ೨. ಮನಬಿಚ್ಚಿ ಮಾತನಾಡದಿರುವುದು

ಇ ೩. ಅರ್ಧಂಬರ್ಧ ಹೇಳುವುದು : ಅರ್ಧಂಬರ್ಧ ಹೇಳುವುದೆಂದರೆ ತಮ್ಮ ಅನುಕೂಲತೆಗೆ ತಕ್ಕಂತೆ ಹೇಳುವುದು.

ಇ ೪. ಅಯೋಗ್ಯ ಪದ್ಧತಿಯಿಂದ ವಿಷಯಗಳನ್ನು ಹೇಳುವುದು : ಉದಾ. ಪ್ರತಿಕ್ರಿಯಾತ್ಮಕವಾಗಿ ಮಾತನಾಡುವುದು

ಇ ೫. ಅತಿವಿಮರ್ಶಕತೆಯಿಂದಾಗಿ ಅನಾವಶ್ಯಕ ಪ್ರಶ್ನೆಗಳನ್ನು ಕೇಳುವುದು

ಇ ೬. ಇತರರಿಗೆ ಅನಾವಶ್ಯಕ ಸಲಹೆಗಳನ್ನು ಕೊಡುವುದು

ಇ ೭. ಇತರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಮತ್ತು ಇತರರನ್ನು ನಿಂದಿಸುವುದು :

ಊ.ಭಾವನಾಪ್ರಧಾನತೆ

ನಾವು ಭಾವನೆಯ ಸ್ತರದಲ್ಲಿದ್ದರೆ, ನಮ್ಮ ಮನಸ್ಸಿನಲ್ಲಿ ಭಾವನಾಶೀಲ ವಿಚಾರಗಳಿರುತ್ತವೆ. ನಾವು ಯಾವುದಾದರೊಂದು ಪ್ರಸಂಗದ ಬಗ್ಗೆ ಭಾವನೆಯ ಸ್ತರದಲ್ಲಿ ವಿಚಾರ ಮಾಡುತ್ತಿದ್ದರೆ ನಮ್ಮ ಮನಸ್ಸಿನಲ್ಲಿ ನಾವು ಆ ಪ್ರಸಂಗದ ಬಗ್ಗೆ ಒಂದೇ ಬದಿಯಿಂದ ವಿಚಾರ ಮಾಡುತ್ತೇವೆ.

ಎ. ಒತ್ತಡವಾಗುವುದು

೧. ಎದುರಾಗಿರುವ ಪರಿಸ್ಥಿತಿಯನ್ನು ನಾವು ಮನಸ್ಸಿನಿಂದ ಸ್ವೀಕರಿಸದಿದ್ದರೆ ನಮ್ಮ ಮನಸ್ಸಿನ ಮೇಲೆ ಒತ್ತಡ ಬರುತ್ತದೆ.

೨. ನಮ್ಮ ಅಪೇಕ್ಷೆಗನುಸಾರ ಏನಾದರೂ ಆಗದಿದ್ದರೆ ನಮ್ಮ ಮನಸ್ಸಿನ ಮೇಲೆ ಒತ್ತಡ ಬರುತ್ತದೆ.

೩. ಕರ್ತೃತ್ವದಿಂದಾಗಿ ಒತ್ತಡ ಬರುತ್ತದೆ.

 ಏ. ಅನಾವಶ್ಯಕ ವಿಚಾರ ಮಾಡುವುದು

೧. ಯಾವುದಾದರೊಬ್ಬ ವ್ಯಕ್ತಿಯ ಬಗ್ಗೆ ಕಾರಣವಿಲ್ಲದೇ ವಿಚಾರ ಮಾಡುವುದು, ಇದು ಅನಾವಶ್ಯಕ ವಿಚಾರ ಮಾಡುವುದರ ಉದಾಹರಣೆಯಾಗಿದೆ.

ಐ. ಬಹಿರ್ಮುಖತೆ

ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ಬಹಿರ್ಮುಖತೆ’ ಎಂದರೆ ನಮ್ಮ ನಡತೆ, ಮಾತು, ತಪ್ಪುಗಳು ಅಥವಾ ಮನಸ್ಸಿನಲ್ಲಿನ ವಿಚಾರಪ್ರಕ್ರಿಯೆಗಳ ಕಡೆ ಗಮನ ಕೊಡದೆ ಇತರರ ನಡತೆ, ಮಾತು, ತಪ್ಪುಗಳು ಅಥವಾ ಪರಿಸ್ಥಿತಿಯ ಕಡೆ ಗಮನ ಕೊಡುವುದು.

ನಮ್ಮಲ್ಲಿರುವ ಬಹಿರ್ಮುಖತೆಯಿಂದಾಗಿ ನಾವು ನಮ್ಮ ಸುತ್ತಲೂ ಸಂಕುಚಿತ ವಿಚಾರಗಳ ಒಂದು ಚೌಕಟ್ಟನ್ನು ಹಾಕಿಕೊಳ್ಳುತ್ತೇವೆ ಮತ್ತು ನಾವು ‘ಪ್ರಸಂಗಗಳಿಂದ ಮತ್ತು ವ್ಯಕ್ತಿಗಳಿಂದ ಕಲಿಯಬೇಕು’ ಎಂಬುದನ್ನು ಮರೆತುಬಿಡುತ್ತೇವೆ. ‘ನಮಗೆ ಏನನ್ನು ಹೇಳುತ್ತಿದ್ದಾರೆ ಎಂಬುದರ ಬದಲು ಯಾರು ಹೇಳುತ್ತಿದ್ದಾರೆ ?’ ಎಂಬುದರ ಕಡೆಗೆ ಗಮನವಿರುತ್ತದೆ.

ಉದಾಹರಣೆ : ಕು. ಅಂಜಲಿ ಇವಳಿಗೆ ಗಣಕಯಂತ್ರವನ್ನು ಉಪಯೋಗಿಸುವಬಗ್ಗೆ ಅವಳ ತಮ್ಮ ಏನಾದರೂ ಹೇಳುತ್ತಿದ್ದರೆ ಅವಳಿಗೆ ಅದು ಮನಸ್ಸಿನಿಂದ ಒಪ್ಪಿಗೆಯಾಗುವುದಿಲ್ಲ; ಏಕೆಂದರೆ ‘ಅವನು ನನಗಿಂತ ಸಣ್ಣವನು, ನನಗೇ ಕಲಿಸಲು ಬರುತ್ತಾನೆ’ ಎಂದು ಅನಿಸುತ್ತದೆ. ಕು. ಅಂಜಲಿ ‘ನನಗೆ ಯಾರು ಹೇಳುತ್ತಿದ್ದಾರೆ ಎಂಬುದಕ್ಕಿಂತ ಏನು ಹೇಳುತ್ತಿದ್ದಾರೆ’ ಎಂಬುದರ ಕಡೆಗೆ ಗಮನ ಕೊಡುವುದು ಹೆಚ್ಚು ಸೂಕ್ತವಾಗಿದೆ. ಹೀಗೆ ಮಾಡಿದರೆ ಅವಳು ತಮ್ಮನಿಂದಲೂ ಕಲಿಯಬಹುದು.

ಒ. ಇತರರ ಜೊತೆಗೆ ತುಲನೆ ಮಾಡುವುದು

ನಮಗೆ ದೇವರು ಏನು ಕೊಟ್ಟಿದ್ದಾನೆಯೋ ಅದರ ಕಡೆಗೆ ನಮ್ಮ ಗಮನ ಕಡಿಮೆಯಿದ್ದರೆ ‘ನಮಗೆ ಇನ್ನೂ ಹೆಚ್ಚು ಸಿಗಬೇಕು’ ಎಂದು ಅನಿಸುತ್ತದೆ ಮತ್ತು ಇತರರೊಂದಿಗೆ ತುಲನೆಯಾಗಿ ‘ನಮಗೆ ಇಂತಹ ವಸ್ತು ಬೇಕು’ ಅಥವಾ ‘ನಮ್ಮ ಸಂದರ್ಭದಲ್ಲಿ ಇಂತಹದೊಂದು ನಡೆಯಬೇಕು’ ಎಂದು ಅನಿಸತೊಡಗುತ್ತದೆ.

ಉದಾಹರಣೆ : ಕು. ವಿಶಾಲನ ದೊಡ್ಡಮ್ಮನ ಮಗನಿಗೆ ಅವನ ತಂದೆ ದುಬಾರಿ ‘ಸ್ಮಾರ್ಟ್ ಫೋನ್’ ತಂದುಕೊಟ್ಟರು. ಅದನ್ನು ನೋಡಿವಿಶಾಲನ ಮನಸ್ಸಿನಲ್ಲಿ ತುಲನೆಯ ವಿಚಾರಗಳು ಬಂದು ‘ನನಗೂ ನನ್ನ ತಂದೆ ಅಂತಹ ವಸ್ತುಗಳನ್ನು ಖರೀದಿಸಿ ಕೊಡಬೇಕು ಎಂದೆನಿಸತೊಡಗಿತು. ಈ ವಿಚಾರ ಮಾಡುವಾಗ ಅವನ ತಂದೆ ಅವನಿಗೆ ಓದಲು ರಾಷ್ಟ್ರಪುರುಷರ ಮತ್ತು ಸಂತರ ಅನೇಕ ಚರಿತ್ರೆಗಳನ್ನು ಖರೀದಿಸಿ ಕೊಟ್ಟಿದ್ದರು, ಅನೇಕ ಕೋಟೆಗಳನ್ನು ತೋರಿಸಿದ್ದರು ಈ ವಿಷಯಗಳ ಬಗ್ಗೆ ಅವನು ಯಾವುದೇ ವಿಚಾರ ಮಾಡಲಿಲ್ಲ.

ಓ. ತಮ್ಮ ತಪ್ಪುಗಳನ್ನು ಇತರರ ಮೇಲೆ ಹಾಕುವುದು

ನಾವು ಯಾವುದಾದರೊಂದು ಪ್ರಸಂಗದಲ್ಲಿ ನಮ್ಮಿಂದ ತಪ್ಪಾದಾಗ ಅದರ ಕಡೆ ಸಕಾರಾತ್ಮಕವಾಗಿ ನೋಡದಿದ್ದರೆ, ನಾವು ನಮ್ಮ ತಪ್ಪನ್ನು ಇತರರ ಮೇಲೆ ಹಾಕಲು ಪ್ರಯತ್ನಿಸುತ್ತೇವೆ.

ಔ. ಸತತವಾಗಿ ಇತರರಿಗೆ ತಪ್ಪುಗಳನ್ನು ಹೇಳುವುದು

ಕೆಲವರು ಯಾವಾಗಲೂ ಇತರರ ದೋಷಗಳನ್ನು ನೋಡಿ ಇತರರಿಗೆ ತಪ್ಪುಗಳನ್ನು ಹೇಳುತ್ತಿರುತ್ತಾರೆ. ನಾವು ಇತರರಿಗೆ ಸಹಾಯ ಮಾಡಬೇಕೆಂದು ಅವರ ತಪ್ಪುಗಳನ್ನು ಹೇಳದೆ ಕೇವಲ ತಪ್ಪುಗಳನ್ನು ಹೇಳಬೇಕೆಂದು ಹೇಳುತ್ತಿದ್ದರೆ, ನಮ್ಮಲ್ಲಿ ‘ಇತರರಿಗೆ ತಪ್ಪುಗಳನ್ನು ಹೇಳುವುದು’ ಎಂಬ ಸ್ವಭಾವದೋಷ ಪ್ರಬಲವಾಗಿದೆ ಎಂದು ತಿಳಿದುಕೊಳ್ಳಬೇಕು.

ಅಂ. ಇತರರನ್ನು ದೂಷಿಸುವುದು

೧. ವ್ಯಕ್ತಿ ಅಥವಾ ವಸ್ತುಗಳನ್ನು ದೂಷಿಸುವುದು : ವ್ಯಕ್ತಿ ಅಥವಾ ವಸ್ತುಗಳನ್ನು ದೂಷಿಸುವುದು ನಮ್ಮಲ್ಲಿನ ಬಹಿರ್ಮುಖತೆ, ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದಿರುವುದು, ಇತರರ ದೋಷಗಳನ್ನು ನೋಡುವುದು, ಇತರರನ್ನು ಟೀಕಿಸುವುದು, ತನ್ನನ್ನು ಇತರರಿಗಿಂತ ಶ್ರೇಷ್ಠವೆಂದು ತಿಳಿದುಕೊಳ್ಳುವುದು ಇತ್ಯಾದಿಗಳಿಂದಾಗುತ್ತದೆ.

೨. ಪರಿಸ್ಥಿತಿಗೆ ದೋಷವನ್ನು ನೀಡುವುದು : ಪರಿಸ್ಥಿತಿಗೆ ದೋಷವನ್ನು ನೀಡಿ ಒತ್ತಡ ಮಾಡಿಕೊಳ್ಳುವುದು ಅಥವಾ ಪರಿಸ್ಥಿತಿಯ ಬಗ್ಗೆ ತಕರಾರು ಮಾಡುವುದು ಅಯೋಗ್ಯವಾಗಿದೆ.

ಅಃ. ಕೇಳುವ ವೃತ್ತಿ ಇಲ್ಲದಿರುವುದು

ನಮಗೆ ಯಾರಾದರೂ ಏನಾದರೂ ಹೇಳುತ್ತಿದ್ದರೆ ಮತ್ತು ನಾವು ಅವರು ಹೇಳಿದ್ದನ್ನು ಕೇಳದೇ ಇದ್ದರೆ, ಅದರ ಕಾರಣವನ್ನು ಹುಡುಕಬೇಕು. ಹೆಚ್ಚಿನವರಲ್ಲಿ ಅಹಂನಿಂದಾಗಿ ಕೇಳುವ ವೃತ್ತಿ ಇರುವುದಿಲ್ಲ.

ಕ. ಕಲಿಯುವ ವೃತ್ತಿ ಇಲ್ಲದಿರುವುದು

ಇದರಿಂದ ನಮ್ಮಲ್ಲಿ ನಕಾರಾತ್ಮಕತೆ ಮತ್ತು ಬಹಿರ್ಮುಖತೆ ಹೆಚ್ಚಾಗುತ್ತದೆ.

ಖ. ಇತರರು ಮಾತನಾಡಿದ್ದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು

ಕೆಲವರು ನಮ್ಮೊಂದಿಗೆ ನಮ್ಮ ಮನಸ್ಸು ನೋಯಿಸುವಂತೆ ಮಾತನಾಡುತ್ತಾರೆ. ಇಂತಹ ಪ್ರತಿಯೊಬ್ಬರು ಮಾತನಾಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡರೆ ಸಾಧನೆಯನ್ನು ಸರಿಯಾಗಿ ಮಾಡಲು ಆಗುವುದಿಲ್ಲ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ ಮತ್ತು ಅಹಂ ಇವುಗಳ ವಿವಿಧ ಲಕ್ಷಣಗಳ ವಿಶ್ಲೇಷಣೆ’ ಗ್ರಂಥ)

Leave a Comment