ಸ್ವಭಾವದೋಷ ನಿರ್ಮೂಲನೆಯ ಬಗೆಗಿನ ತಪ್ಪು ತಿಳುವಳಿಕೆಗಳು 

ಸ್ವಭಾವದೋಷಗಳ ನಿರ್ಮೂಲನೆಯ ಪ್ರಕ್ರಿಯೆ ಬಗ್ಗೆ ಮುಂದಿನ ತಪ್ಪು ವಿಚಾರಗಳು ಇರುವುದು ಕಂಡುಬರುತ್ತದೆ.

ಅ. ಸ್ವಭಾವದೋಷಗಳ ವಿಚಾರವನ್ನು ಏಕೆ ಮಾಡಬೇಕು ? : ವ್ಕಕ್ತಿಯೆಂದರೆ ಅವನಲ್ಲಿ ಗುಣ ಮತ್ತು ದೋಷಗಳೆರಡೂ ಇರುತ್ತವೆ; ಹಾಗಾದರೆ ನಮ್ಮಲ್ಲಿರುವ ದೋಷಗಳ ವಿಚಾರವನ್ನು ಏಕೆ ಮಾಡಬೇಕು, ಗುಣಗಳ ವಿಚಾರವನ್ನೇ ಮಾಡೋಣ’ ಎಂದು ಕೆಲವರಿಗೆ ಅನಿಸುತ್ತದೆ.

ಆ. ಸ್ವಭಾವವನ್ನು ಬದಲಿಸಲು ಸಾಧ್ಯವಿದೆಯೇ ? : ‘ಸ್ವಭಾವಗಳಿಗೆ ಔಷಧವಿಲ್ಲ. ವ್ಯಕ್ತಿಯ ಸ್ವಭಾವವೆಂದರೆ ನಾಯಿಯ ಬಾಲವಿದ್ದಂತೆ’. ಹಾಗಾದರೆ ‘ಸ್ವಭಾವ ದೋಷ ನಿರ್ಮೂಲನ ಪ್ರಕ್ರಿಯೆ’ಯನ್ನು ಮಾಡಿ ಏನು ಉಪಯೋಗ’ ಎಂದು ಸಮಾಜದಲ್ಲಿನ ಬಹಳಷ್ಟು ವ್ಯಕ್ತಿಗಳಿಗೆ ಅನಿಸುತ್ತದೆ.

ಇ. ಸಮಾಜದಲ್ಲಿ ಚೆನ್ನಾಗಿ ವರ್ತಿಸಿದರಾಯಿತು, ಅದಕ್ಕಾಗಿ ದೋಷಗಳನ್ನು ಏಕೆ ದೂರಗೊಳಿಸಬೇಕು ? : ಸ್ವಭಾವದೋಷಗಳೆಂದರೆ ಗುಣಗಳಂತೆಯೇ ಸ್ವಭಾವದ ಒಂದು ಘಟಕಗಳೇ ಆಗಿರುವುದರಿಂದ ಅವು ಪ್ರಸಂಗಕ್ಕನುಸಾರ ಉಕ್ಕಿಬರುತ್ತವೆ. ಆದುದರಿಂದ ಸಮಾಜದಲ್ಲಿನ ವ್ಯಕ್ತಿಗಳೊಂದಿಗೆ ಮೇಲುಮೇಲಿನಿಂದ ಒಳ್ಳೆಯ ರೀತಿಯಿಂದ ವರ್ತಿಸಲು ಎಷ್ಟೇ ಪ್ರಯತ್ನಿಸಿದರೂ ವೃತ್ತಿಯಲ್ಲಿ ಬದಲಾವಣೆಯಾಗುವುದಿಲ್ಲ, ಇದರಿಂದ ದೋಷಗಳು ಹಾಗೆಯೇ ಉಳಿಯುತ್ತವೆ.

ಈ. ಸಾಧನೆ ಮಾಡುವಾಗ ದೋಷಗಳು ಉಕ್ಕಿ ಬರದಿರುವುದರಿಂದ ಅವುಗಳ ನಿರ್ಮೂಲನೆಯ ಆವಶ್ಯಕವಾಗಿಲ್ಲ : ಇಂತಹವರಿಗೆ ‘ಸಾಧನೆ’ ಎಂದರೆ ವ್ಯವಹಾರದಲ್ಲಿ ಅಧ್ಯಾತ್ಮವನ್ನು ಜೀವಿಸುವುದು, ಎಂಬುದು ತಿಳಿಯದೇ ಇದ್ದುದರಿಂದ ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನಿಸಬೇಕೆಂದೆನಿಸುವುದಿಲ್ಲ.

ಸ್ವಭಾವದೋಷ ನಿರ್ಮೂಲನೆಯ ಬಗೆಗಿನ ತಪ್ಪು ತಿಳುವಳಿಕೆಗಳ ಹಿಂದಿನ ಕಾರಣಗಳು

ಅ. ಅಜ್ಞಾನ : ಸ್ವಭಾವದೋಷಗಳಿಂದ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಜ್ಞಾನವಿರುವುದರಿಂದ ಸ್ವಭಾವದೋಷ ನಿರ್ಮೂಲನೆಯ ಮಹತ್ವವು ತಿಳಿಯುವುದಿಲ್ಲ.

ಇ. ಅಹಂನಿಂದಾಗಿ ದೋಷಗಳನ್ನು ಸ್ವೀಕರಿಸದಿರುವುದು : ಕೆಲವರಿಗೆ ಅಹಂನಿಂದಾಗಿ ‘ನನ್ನಲ್ಲಿ ಸ್ವಭಾವದೋಷಗಳೇ ಇಲ್ಲ’, ಎಂಬ ತಪ್ಪು ತಿಳುವಳಿಕೆಯಿರುತ್ತದೆ.

ಈ. ಬಹಿರ್ಮುಖತೆ : ಬಹಿರ್ಮುಖತೆಯಿಂದಾಗಿ ಬಹಳಷ್ಟು ಸಲ ಪ್ರತಿಕೂಲ ಪ್ರಸಂಗದಲ್ಲಿ ಪರಿಸ್ಥಿತಿ ಅಥವಾ ಪ್ರಸಂಗಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳಿಗೆ ದೋಷವನ್ನು ಕೊಡಲಾಗುತ್ತದೆ.

ಉ. ದುರ್ಲಕ್ಷ  : ಬಹಳಷ್ಟು ಸಲ ತನ್ನಲ್ಲಿನ ಸ್ವಭಾವದೋಷಗಳಿಂದ ತನಗೆ, ಹಾಗೆಯೇ ಇತರರಿಗೆ ತೊಂದರೆಯಾಗುತ್ತಿದೆ ಎಂಬುದು ಗಮನಕ್ಕೆ ಬಂದರೂ, ಸ್ವಭಾವದೋಷಗಳ ಕಡೆಗೆ ದುರ್ಲಕ್ಷಿಸಲಾಗುತ್ತದೆ.

ಊ. ಸಾಧನೆಯಿಂದ ಸ್ವಭಾವದೋಷಗಳು ದೂರವಾಗುತ್ತವೆ, ಎಂಬುದಕ್ಕಿಂತ ಸ್ವಭಾವದೋಷಗಳನ್ನು ದೂರಗೊಳಿಸಿದ ನಂತರ ಸಾಧನೆಯು ಒಳ್ಳೆಯ ರೀತಿಯಿಂದಾಗುತ್ತದೆ ಎಂಬ ದೃಷ್ಟಿಕೋನದ ಅಭಾವ.

ಎ. ಸ್ವಭಾವದೋಷಗಳಿಂದ ನಾಮಜಪಾದಿ ಸಾಧನೆಯ ಶಕ್ತಿಯು ಖರ್ಚಾಗುತ್ತದೆ ಎಂಬುದನ್ನು ಅರಿತುಕೊಳ್ಳದಿರುವುದು :  ಸ್ವಭಾವದೋಷಗಳ ನಿರ್ಮೂಲನ ಮಾಡದೆ ನಾಮಜಪವನ್ನು ಮಾಡುವುದೆಂದರೆ ಮೂವತ್ತು ಪೈಸೆ ಉತ್ಪನ್ನವಿರುವಾಗ ಒಂದು ರೂಪಾಯಿ ಖರ್ಚು ಮಾಡಿದಂತಾಗಿದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ’ ಗ್ರಂಥ)

Leave a Comment