ಅಹಂಭಾವ ಕಡಿಮೆಯಾದ ನಂತರದ ಆಧ್ಯಾತ್ಮಿಕ ಉನ್ನತಿಯ ಲಕ್ಷಣಗಳು

ಅ. ಶ್ವಾಸೋಚ್ಛ್ವಾಸವು ಕಡಿಮೆಯಾಗುವುದು

ಅಹಂಭಾವವು ತಾಮಸಿಕ, ರಾಜಸಿಕ ಮತ್ತು ಸಾತ್ತ್ವಿಕ ಹೀಗೆ ರೂಪಾಂತರವಾಗುತ್ತಾ ಹೋಯಿತೆಂದರೆ ಶ್ವಾಸೋಚ್ಛ್ವಾಸದ ವೇಗವು ಕಡಿಮೆಯಾಗುತ್ತದೆ. ಒಂದು ನಿಮಿಷಕ್ಕೆ ಸುಮಾರು ನಾಲ್ಕರಿಂದ ಐದು ಬಾರಿ ಮಾತ್ರ ಶ್ವಾಸೋಚ್ಛ್ವಾಸವು ನಡೆಯತೊಡಗಿದರೆ ಶುದ್ಧ ಸಾತ್ತ್ವಿಕ ಅಹಂನ ಅರಿವು ಮಾತ್ರ ಉಳಿಯುತ್ತದೆ.

ಪ್ರಶ್ನೆ : ವಿಜ್ಞಾನಕ್ಕನುಸಾರ ಶ್ವಾಸೋಚ್ಛ್ವಾಸವು ಒಂದು ನಿಮಿಷಕ್ಕೆ ೧೪ ರಿಂದ ೨೦ ಸಲ ಆಗುತ್ತದೆ. ಹೀಗಿದ್ದಾಗ ನಿಮಿಷಕ್ಕೆ ಕೇವಲ ನಾಲ್ಕು ಅಥವಾ ಐದು ಸಲ ಮಾತ್ರ ಶ್ವಾಸೋಚ್ಛ್ವಾಸ ವಾಗುವುದು ಹೇಗೆ ಸಾಧ್ಯವಿದೆ ?

ಉತ್ತರ : ವಿಜ್ಞಾನಿಗಳು ಸಾಮಾನ್ಯ ವ್ಯಕ್ತಿಗಳ ನಿರೀಕ್ಷಣೆ ಮಾಡಿ ಮೇಲಿನ ನಿಷ್ಕರ್ಷವನ್ನು ಹೇಳುತ್ತಾರೆ. ಸಾಮಾನ್ಯ ವ್ಯಕ್ತಿಗಳ ಅಹಂಭಾವವು ಶೇ. ೩೦ ರಷ್ಟಿರುವುದರಿಂದ ಅವರ ಶ್ವಾಸೋಚ್ಛ್ವಾಸವು ನಿಮಿಷಕ್ಕೆ ೧೪ ರಿಂದ ೨೦ ಸಲ ಆಗುತ್ತದೆ. ಅಹಂಭಾವವು ಕಡಿಮೆಯಾದಾಗ ಮನಸ್ಸು ಮತ್ತು ಬುದ್ಧಿಯ ಎಲ್ಲ ಕ್ರಿಯೆಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಮನಸ್ಸು ಮತ್ತು ಬುದ್ಧಿಯ ಕ್ರಿಯೆಗಳಿಗೆ ಖರ್ಚಾಗುವ ಶಕ್ತಿಯು ಉಳಿತಾಯವಾಗುತ್ತದೆ. ಸಹಜವಾಗಿಯೇ ಶ್ವಾಸೋಚ್ಛ್ವಾಸದ ಆವಶ್ಯಕತೆಯು ಕಡಿಮೆಯಾಗುತ್ತದೆ. ದೇಹದ ಕ್ರಿಯೆಗಾಗಿ ಶಕ್ತಿಯು ಅವಶ್ಯಕತೆಯಿರುತ್ತದೆ, ಹಾಗೆಯೇ ದೇಹಧಾರಣೆಗಾಗಿ ಸ್ವಲ್ಪವಾದರೂ ಅಹಂ ಇರಬೇಕಾಗುತ್ತದೆ, ಅದಕ್ಕನುಸಾರ ಶ್ವಾಸೋಚ್ಛ್ವಾಸದ ಆವಶ್ಯಕತೆ ಮತ್ತು ಗತಿ ಬದಲಾಗುತ್ತದೆ. ಪ್ರಜಾಪಿತಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪ.ಪೂ. ದಾದೀ ಪ್ರಕಾಶಮಣಿಜಿಯವರ ಮೇಲೆ ಅಮೇರಿಕಾದ ಪಂಡಿತರು ಪ್ರಯೋಗ ನಡೆಸಿದ್ದರು. ಅದರಲ್ಲಿ ದಾದೀಜಿಯವರು ಮನಶೂನ್ಯ ಅವಸ್ಥೆಯಲ್ಲಿ (ನೋ ಮೈಂಡ್ ಸ್ಟೇಟ್) ಇರುವುದು ಅವರಿಗೆ ಕಂಡುಬಂದಿತ್ತು.

ಆ. ಜಡ, ಚೈತನ್ಯ ಮತ್ತು ಅಹಂ

ಒಬ್ಬ ವ್ಯಕ್ತಿಯು ‘ನಾನು’ ಎಂದರೆ (ಜಡ) ಶರೀರ’ ಎಂದು ಭಾವಿಸಿದಾಗ ಅವನಿಗೆ ಇತರ ಎಲ್ಲವೂ ಜಡವೇ ಎಂದೆನಿಸುತ್ತದೆ. ಇದಕ್ಕೆ ವಿರುದ್ಧವಾಗಿ ‘ನಾನು’ ಎಂದರೆ ‘ಚೈತನ್ಯಮಯ ಆತ್ಮ’ ಎನ್ನುವುದರ ಅನುಭೂತಿ ಬಂದಾಗ ಎಲ್ಲವೂ ಚೈತನ್ಯಮಯ ವೆನಿಸುತ್ತದೆ. ಅಂದರೆ ‘ನಾನು’ ಹೋಗದ ಹೊರತು ಇತರ ಜಡ ಸಂಗತಿಗಳೂ ಹೋಗುವುದಿಲ್ಲ.

ಇ. ಪ್ರೀತಿ ನಿರ್ಮಾಣವಾಗುವುದು

ಶುದ್ಧ ಅಹಂಭಾವಕ್ಕೆ ವ್ಯಾಪಕತೆ ಬಂದಿತೆಂದರೆ ಅದನ್ನೇ ಪ್ರೀತಿ ಎನ್ನುತ್ತಾರೆ. (ಪ್ರೀತಿಗೆ ಆಕಾರ ಬಂದಿತೆಂದರೆ ಅದನ್ನು ಅಹಂ ಎನ್ನುತ್ತಾರೆ.)

ಈ. ಅದ್ವೈತದ ಅನುಭೂತಿ

ಅಹಂ ಯಾವುದರ ಮೇಲಾದರೂ ಸಾಪೇಕ್ಷವಾಗಿರುತ್ತದೆ. ಹಾಗಾಗಿ ಯಾವುದರ ಸಾಪೇಕ್ಷವಾಗಿದೆಯೋ ಆ ವಿಷಯವೂ ಹೋದರೆ ‘ಅಹಂ’ ಸಹ ಉಳಿಯುವುದಿಲ್ಲ. ಇದರ ವಿರುದ್ಧವೂ ಆಗುತ್ತದೆ. ‘ಅಹಂ’ ಹೋದ ನಂತರ ಬೇರೇನೂ ಉಳಿದುಕೊಳ್ಳುವುದಿಲ್ಲ. ಅಂದರೆ ಅದ್ವೈತದ ಅನುಭೂತಿ ಬರುತ್ತದೆ.

ಉ. ಅಹಂ ಸಂಪೂರ್ಣವಾಗಿ ನಾಶವಾದ ನಂತರದ ಅನಿಸಿಕೆ

ಜೋ ಕುಛ ಕಿಯೋ ಸೋ ತುಮ ಕಿಯೋ, ಮೈಂ ಕುಛ ಕಿಯೋ ನಾಹೀಂ |
ಕಹೀಂ ಕಹೋ ಜೋ ಮೈಂ ಕಿಯೋ, ತುಮ ಹೀ ಥೇ ಮುಝ ಮಾಹೀಂ ||

– ಸಂತ ಕಬೀರ

ಅರ್ಥ : ಸಂತ ಕಬೀರರು ಹೇಳುತ್ತಾರೆ, ‘ನನ್ನಿಂದ ಏನೇನು ಆಗಿದೆಯೋ ಅದನ್ನು ನೀವೇ ಮಾಡಿದ್ದೀರಿ, ನಾನೇನೂ ಮಾಡಿಲ್ಲ ಮತ್ತು ಎಂದಾದರೂ ನಾನೇನಾದರೂ ಮಾಡಿದ್ದರೆ ಆ ‘ನನ್ನ’ತನದಲ್ಲಿಯೂ ನೀವೇ ಇದ್ದೀರಿ’.

(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)

Leave a Comment