ಭಾವನಾಶೀಲತೆ ದೋಷವನ್ನು ಎದುರಿಸಲು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ

ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಭಾವನಶೀಲವಾಗಿ ಅಳು ಬರುತ್ತದೆ. ಆಗ ಮನಸ್ಸಿನ ಶಕ್ತಿಯು ತುಂಬಾ ಖರ್ಚಾಗುತ್ತದೆ. ಇದರ ಪರಿಣಾಮ ಸೇವೆಯ/ನಮ್ಮ ಕೆಲಸದ ಮೇಲಾಗುತ್ತದೆ. ಆಗ ಕಾರ್ಯದ ಕಾಲಾವಧಿಯು ಕಡಿಮೆಯಾಗುತ್ತದೆ. ೨೮ ಜನವರಿ ೨೦೧೭ ರಂದು ನಾನು ಈ ಸ್ಥಿತಿಯಿಂದ ಹೊರಗೆ ಬರಲು ಸದ್ಗುರು (ಸೌ.) ಬಿಂದಾತಾಯಿಯವರು ಮಾರ್ಗದರ್ಶನ ಮಾಡಿದರು. ಅದು ಎಲ್ಲರಿಗೆ ಕಲಿಯಲು ಸಿಗಬೇಕೆಂದು ಎಂದು ಇಲ್ಲಿ ನೀಡುತ್ತಿದ್ದೇನೆ.

೧. ತನ್ನ ತಪ್ಪನ್ನು ಹೇಳಿದಾಗ ಮನಸ್ಸು ಭಾವನಾಶೀಲವಾಗುವುದು, ಮನಸ್ಸು ವಿಚಾರಗಳಲ್ಲಿ ಸಿಲುಕಿರುವುದರಿಂದ ಸೇವೆಯ ಕಾಲಾವಧಿಯು ಕಡಿಮೆಯಾಗುವುದು, ಇತರ ಪ್ರಸಂಗಗಳು ನೆನಪಾಗಿ ವಿಚಾರಗಳು ಹೆಚ್ಚಾಗುವುದುಮತ್ತು ಅಳುವ ಕಾಲಾವಧಿಯು ಹೆಚ್ಚಾಗುವುದರಿಂದ ಮನಸ್ಸಿಗೆ ಆವರಣ ಬಂದು ಆಧ್ಯಾತ್ಮಿಕ ತೊಂದರೆಯು ಹೆಚ್ಚಾಗುವುದು

ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಭಾವನಾಶೀಲವಾಗುತ್ತದೆ, ಆಗ ‘ನನಗೆ ಅವನು ಹೀಗೇಕೆ ಹೇಳಿದನು ? ನಂತರ ಬೇರೆ ರೀತಿಯಲ್ಲಿ ಹೇಳಬಹುದಾಗಿತ್ತು. ಅವರು ನನ್ನನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅದರಲ್ಲಿ ನನ್ನದೇನೂ ತಪ್ಪಿರಲಿಲ್ಲ’, ಮಂತಾದ ವಿಚಾರಗಳು ಮನಸ್ಸಿನಲ್ಲಿ ಬರುತ್ತವೆ. ಕೆಲವೊಮ್ಮೆ ಯಾರಾದರೊಬ್ಬರ ತಪ್ಪು ಇಲ್ಲದಿರುವಾಗ ಅವರ ತಪ್ಪನ್ನು ಹೇಳಲಾಗುತ್ತದೆ ಇದರಿಂದ ತುಂಬಾ ಸಮಯ ಖಿನ್ನರಾಗುತ್ತಾರೆ. ಈ ವಿಚಾರಗಳಲ್ಲಿ ಮನಸ್ಸು ಸಿಲುಕಿಕೊಂಡರೆ ಕಾರ್ಯದ ಕಾಲಾವಧಿ ಕಡಿಮೆಯಾಗುತ್ತದೆ. ಇದರೊಂದಿಗೆ ಇತರ ಪ್ರಸಂಗಗಳೂ ನೆನಪಾಗುತ್ತವೆ ಮತ್ತು ಅದು ಕೂಡ ವಿಚಾರಗಳನ್ನು ಹೆಚ್ಚಿಸುತ್ತವೆ ಮತ್ತು ಖಿನ್ನತೆಯ ಕಾಲಾವಧಿಯು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಮನಸ್ಸಿನ ಮೇಲೆ ಆವರಣ ಬಂದು ಆಧ್ಯಾತ್ಮಿಕ ತೊಂದರೆಯು ಹೆಚ್ಚಾಗುತ್ತದೆ. ನಂತರ ತೊಂದರೆ ಹೆಚ್ಚಾಗಿ ಅದನ್ನು ಕಡಿಮೆ ಮಾಡಲು ತುಂಬಾ ಸಮಯ ತಗಲುತ್ತದೆ.

೨. ಮನಸ್ಸಿನ ಅಧ್ಯಯನ ಮಾಡುವಾಗ ಮುಂದಿನ ಅಂಶಗಳ ವಿಚಾರ ಮಾಡಬೇಕು !

ಅ. ಭಗವಂತನು ನಮಗೆ ನೀಡಿದ ಕೌಶಲ್ಯದ ಸೇವಯ ಮಾಧ್ಯಮದಿಂದ ನಮಗೆ ಸೂಚಿಸುತ್ತಾನೆ ಮತ್ತು ಕಲಿಸುತ್ತಾನೆ; ಆದರೆ ಅರ್ಧ ಶಕ್ತಿ ಮನಸ್ಸಿನ ದ್ವಂದ್ವದಲ್ಲಿ ವ್ಯರ್ಥವಾಗುತ್ತದೆ.

ಆ. ಯಾವುದಾದರೊಂದು ಪ್ರಸಂಗವು ಮನಸ್ಸಿನ ವಿರುದ್ಧ ಘಟಿಸಿದರೆ ಅಥವಾ ಇತರರು ನಮ್ಮ ತಪ್ಪು ಹೇಳಿದಾಗ ‘ಅಹಂ’ಗೆ ಪೆಟ್ಟಾಗುತ್ತದೆ. ಇದರಿಂದ ತಪ್ಪು ಸ್ವೀಕರಿಸಲು ಆಗುವುದಿಲ್ಲ ಮತ್ತು ಮನಸ್ಸು ಅಸ್ಥಿರವಾಗುತ್ತದೆ. ಮನಸ್ಸಿನ ಸಂವೇದನಾಶೀಲತೆ ಹೆಚ್ಚಾಗುವುದರಿಂದ ಭಾವನಾಶೀಲತೆ ಹೆಚ್ಚಾಗುತ್ತದೆ.

ಇ. ನಮ್ಮಲ್ಲಿ ಅಹಂ ಜಾಗೃತವಾದಾಗ ಬುದ್ಧಿಯು ತರ್ಕ ಮಾಡುತ್ತದೆ ಮತ್ತು ತಪ್ಪನ್ನು ಸ್ವೀಕರಿಸಲು ಬಿಡುವುದಿಲ್ಲ.

೩. ಆಧ್ಯಾತ್ಮಿಕ ಸ್ತರದ ಉಪಾಯಯೋಜನೆ

೩ ಅ. ಮನಸ್ಸಿನಲ್ಲಿ ಬರುತ್ತಿರುವ ವಿಚಾರಗಳನ್ನು ಬರೆಯುವುದು : ವಿಚಾರಗಳನ್ನು ಬರೆದಾಗ ಅವು ಸ್ಪಷ್ಟವಾಗುತ್ತವೆ. ಅವುಗಳಲ್ಲಿ ಪೂರ್ವಗ್ರಹದ ಪ್ರಸಂಗಗಳಿದ್ದರೆ ಪ್ರಸಂಗದ ಎದುರು ಆಯಾ ಸಾಧಕರ ಗುಣಗಳನ್ನು ಬರೆಯಬೇಕು. ಇದರಿಂದ ಪೂರ್ವಾಗ್ರಹದ ವಿಚಾರಗಳು ಕಡಿಮೆಯಾಗಲು ಸಹಾಯವಾಗುತ್ತದೆ.

೩ ಆ. ಇತರರ ತಪ್ಪುಗಳಿದ್ದಾಗ ‘ಮನಸ್ಸು ಬಹಿರ್ಮುಖವಾಗಿದೆ’, ಎಂದು ಗಮನಕ್ಕೆ ಬಂದರೆ ಆ ತಪ್ಪನ್ನು ಬರೆದು ಜವಾಬ್ದಾರ ಸಾಧಕರಿಗೆ ಕೊಡಬೇಕು.

೩ ಇ. ಅಂತರ್ಮುಖರಾಗುವುದು : ಆ ಪ್ರಸಂಗದಲ್ಲಿ ‘ದೇವರು ನಮಗೆ ಏನು ಕಲಿಸುತ್ತಿದ್ದಾರೆ’, ಎಂಬುದರ ಅಧ್ಯಯನ ಮಾಡಬೇಕು ಮತ್ತು ಕಲಿಯುವ ವೃತ್ತಿಯನ್ನು ಹೆಚ್ಚಿಸುವುದು. ಇದರಿಂದ ಅಂತರ್ಮುಖರಾಗಲು ಸಹಾಯವಾಗುತ್ತದೆ.

೩ ಈ. ತಮ್ಮ ಮನಸ್ಸು ಅಂತರ್ಮುಖವಾದ ನಂತರ ಸಾಧ್ಯವಿದ್ದಲ್ಲಿ ತಪ್ಪನ್ನು ಹೇಳುವ ಸಾಧಕರೊಂದಿಗೆ ಮಾತನಾಡಬೇಕು.

೩ ಉ. ಪ್ರಸಂಗ ಘಟಿಸಿದ ನಂತರವೂ ಸಾಧಕರೊಂದಿಗೆ ಮಾತನಾಡುವುದನ್ನು ಬಿಡಬಾರದು ! : ಪ್ರಸಂಗ ಘಟಿಸಿದ ಮೇಲೆ ಕೆಲವೊಮ್ಮೆ ನಾವು ಆ ಸಾಧಕರೊಂದಿಗೆ ಮಾತನಾಡುವುದನ್ನು ಬಿಟ್ಟು ಬಿಡುತ್ತೇವೆ, ಹಾಗೆ ಮಾಡಿದರೆ ಸಾಧನೆಯಾಗುವುದಿಲ್ಲ ಮತ್ತು ನಾವು ಮುಂದೆಯೂ ಹೋಗುವುದಿಲ್ಲ. ಆ ಸಾಧಕರೊಂದಿಗೆ ಮಾತನಾಡುವುದನ್ನು ನಿಲ್ಲಿಸಬಾರದು, ದಿನನಿತ್ಯದಂತೆ ಮಾತನಾಡುವುದು. ನಾವು ಸಾಧನೆಯಲ್ಲಿರದಿದ್ದರೆ ಮತ್ತು ಸಮಾಜದಲ್ಲಿದ್ದು ನೌಕರಿ ಮಾಡುತ್ತಿದ್ದರೆ, ಎಷ್ಟು ಜನರು ಮಾತನಾಡುತ್ತಿದ್ದರು. ಸಂಬಂಧಿಕರು, ಅಕ್ಕಪಕ್ಕದವರು ಅಥವಾ ಸಹಸಿಬ್ಬಂದಿಗಳು ಮಾತನಾಡುತ್ತಿದ್ದರು. ಅವರ ವಿಷಯದಲ್ಲಿ ಏನಾದರೂ ಪ್ರಸಂಗಗಳು ಘಟಿಸಿದರೂ ನಾವು ಅವರೊಂದಿಗೆ ಮಾತನಾಡುವುದನ್ನು ಬಿಡುವುದಿಲ್ಲ. ಅವರ ಮನೆಗೂ ಹೋಗುತ್ತೇವೆ. ಹಾಗೆಯೇ ಸಾಧಕರೊಂದಿಗೂ ಮಾತನಾಡುತ್ತಿರಬೇಕು.

೩ ಊ. ಸೇವೆಗೆ ಸಮಯ ನೀಡಿ ಸೇವೆಯ ಕಾಲಾವಧಿಯನ್ನು ಹೆಚ್ಚಿಸಬೇಕು.

೩ ಎ. ದೇವರೊಂದಿಗೆ ಮಾತನಾಡುವುದು : ಪ್ರಸಂಗ ಘಟಿಸಿದ ಮೇಲೆ ದೇವರೊಂದಿಗೆ ಮಾತನಾಡಬೇಕು. ದೇವರ ಭಕ್ತಿ ಮಾಡಬೇಕು ಮತ್ತು ನಮಗೆ ನೀಡಿದ ಸೇವೆಯಲ್ಲಿ ನಮ್ಮ ಮನಸ್ಸನ್ನು ತೊಡಗಿಸಬೇಕು.

೩ ಏ. ಮನಸ್ಸಿನ ಸ್ತರದಲ್ಲಿ ತನ್ನ ಸ್ವಂತದ ಅಧ್ಯಯನ ಮಾಡಬೇಕು ಮತ್ತು ಅದರಿಂದ ಹೊರಗೆ ಬರಲು ಮಾಡಿದ ಪ್ರಯತ್ನದ ಬಗ್ಗೆ ನಂತರ ಜವಾಬ್ದಾರಿ ಸಾಧಕರಿಗೆ ಹೇಳಬೇಕು.

೩ ಐ. ನಿರ್ಲಕ್ಷ್ಯ ಮಾಡುವುದು : ಕೆಲವು ವಿಷಯಗಳನ್ನು ಬಿಟ್ಟು ಬಿಡಲು ಮತ್ತು ಅದರ ಕಡೆಗೆ ನಿರ್ಲಕ್ಷ ಮಾಡಲು ಕಲಿಯಬೇಕು.

೩ ಒ. ಸ್ವಯಂಸೂಚನೆಯನ್ನು ನೀಡುವುದು

೧. ನಮಗೆ ಯಾರ ಬಗ್ಗೆಯೂ ಭಯವೆನಿಸುತ್ತಿದ್ದಲ್ಲಿ ಮೊದಲಿಗೆ ಮನಸ್ಸನ್ನು ಸ್ಥಿರವಾಗಿಡಲು ಪ್ರಯತ್ನಿಸಬೇಕು. ಅದಕ್ಕಾಗಿ ಸ್ವಯಂಸೂಚನೆ ನೀಡಬೇಕು. ಇದರಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗುವುದಿಲ್ಲ.

೨. ಯಾವ ವಿಚಾರಗಳನ್ನು ಕೆಟ್ಟ ಶಕ್ತಿ ಹಾಕುತ್ತದೆ, ಎಂಬುದರ ಅಧ್ಯಯನ ಮಾಡಬೇಕು. ಅದರಿಂದ ಹೊರ ಬರಲು ಸ್ವಯಂಸೂಚನೆಯನ್ನು ನೀಡಬೇಕು ಮತ್ತು ಇತರರ ಸಹಾಯ ಪಡೆಯಬೇಕು. ಅದರೊಂದಿಗೆ ಆಧ್ಯಾತ್ಮಿಕ ಉಪಾಯ ಮಾಡಬೇಕು.

೩. ತುಂಬಾ ಸ್ವಯಂಸೂಚನೆ ನೀಡಿದರೂ ಬದಲಾವಣೆಯಾಗದಿದ್ದರೆ, ಮನಃಪೂರ್ವಕ ತನ್ನ ದೋಷವನ್ನು ಸ್ವೀಕರಿಸಬೇಕು, ಆತ್ಮನಿವೇದನೆಯನ್ನು ಮಾಡಬೇಕು ಮತ್ತು ದೇವರಿಗೆ ಹೇಳಬೇಕು.

೪. ಯಾವುದಾದರೊಂದು ಪ್ರಸಂಗದಲ್ಲಿ ಕಾಳಜಿಯೆನಿಸುತ್ತಿದ್ದರೆ ಆಗ ದೇವರ ಬಗ್ಗೆ ಶ್ರದ್ಧೆ ಕಡಿಮೆಯಾಗುತ್ತದೆ. ಆಗ ಸ್ವಯಂಸೂಚನೆಯನ್ನು ನೀಡುವುದು ಹಾಗೆಯೇ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡಿದರೆ ದೋಷವು ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದ ಆಧ್ಯಾತ್ಮಿಕ ತೊಂದರೆಯೂ ಕಡಿಮೆಯಾಗುತ್ತದೆ.

೩ ಓ. ಶರಣಾಗತಿ : ಒಳಗಿನಿಂದ ಪಾಶ್ಚತ್ತಾಪವಾಗದಿದ್ದಾಗ ಅಥವಾ ಹೊಳೆಯದಿದ್ದಾಗ ಶರಣಾಗಲು ಪ್ರಯತ್ನಿಸಬೇಕು ಮತ್ತು ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು. ಪ್ರಾಯಶ್ಚಿತ್ತ ತೆಗೆದುಕೊಂಡರೆ ದೋಷವು ದೂರವಾಗಲು ಸಹಾಯವಾಗುತ್ತದೆ.

೩ ಔ. ಬೇರೆಯವರ ಮನಸ್ಸಿನಲ್ಲಿರುವುದು ನಮಗೆ ತಿಳಿಯುವುದಿಲ್ಲ. ಆದುದರಿಂದ ಅದರ ಬಗ್ಗೆ ವಿಚಾರ ಮಾಡಬಾರದು.

೩ ಅಂ. ತಮ್ಮ ಮನಸ್ಸನ್ನು ಸಂತೈಸಬಾರದು, ಅದಕ್ಕೆ ಪೆಟ್ಟು ಕೊಡಬೇಕು. ಮನಸ್ಸಿಗೆ ಶಿಸ್ತನ್ನು ಕಲಿಸಿದರೆ ಮಾತ್ರ ಬದಲಾವಣೆಯಾಗುತ್ತದೆ.

Leave a Comment