ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಕಠಿಣ ಪ್ರಸಂಗಗಳನ್ನು ನೋಡಲು ಕಲಿಸುವ ಆ ೨ ಈ ಸ್ವಯಂಸೂಚನೆ ಪದ್ಧತಿ !

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಠಿಣ ಪ್ರಸಂಗಗಳು ಘಟಿಸುತ್ತವೆ. ಇಂತಹ ಪ್ರಸಂಗದಲ್ಲಿ ಅಸಹಾಯಕರಾದರೆ ಮನಸ್ಸು ದುರ್ಬಲವಾಗುತ್ತದೆ. ತೀವ್ರ ವೇದನೆ ಅಥವಾ ತೀವ್ರ ಅನಾರೋಗ್ಯ, ಅಪಘಾತ, ನಿಧನ, ನೈಸರ್ಗಿಕ ವಿಪತ್ತುಗಳು, ಅಸಹಾಯಕತೆ ಇತ್ಯಾದಿ ಕಠಿಣ ಪ್ರಸಂಗಗಳನ್ನು ಅಥವಾ ಒತ್ತಡವನ್ನು ನಿರ್ಮಿಸುವ ಕೆಲವು ಪ್ರಸಂಗಗಳಲ್ಲಿ ನಮ್ಮಿಂದ ಏನೂ ಮಾಡಲು ಆಗದಿದ್ದಾಗ, ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಆ ಸಮಸ್ಯೆಗಳನ್ನು ನೋಡುವುದೇ ಉಪಾಯವಾಗಿರುತ್ತದೆ. ಇದಕ್ಕಾಗಿ ‘ಆ ೨ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡುವುದು ಆವಶ್ಯಕವಾಗಿದೆ.

ಈ ಸ್ವಯಂಸೂಚನೆ ಪದ್ಧತಿಯಿಂದ ಸಿದ್ಧಪಡಿಸಲಾಗಿರುವ ಸ್ವಯಂಸೂಚನೆಗಳ ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

೧. ತನಗೆ ಅತ್ಯಂತ ತೀವ್ರ ಅನಾರೋಗ್ಯವಾಗುವುದು

೧ ಅ. ಪ್ರಸಂಗ : ನನಗೆ ತೀವ್ರ ಅನಾರೋಗ್ಯದಿಂದ ಅಸಹನೀಯ ವೇದನೆಯಾಗುತ್ತಿದೆ.

೧ ಆ. ಸ್ವಯಂಸೂಚನೆ : ಯಾವಾಗ ತೀವ್ರ ಅನಾರೋಗ್ಯದಿಂದ ನನಗೆ ಅಸಹನೀಯ ವೇದನೆಯಾಗುವುದೋ, ಆಗ ‘ದೇವರು ಈ ಮಾಧ್ಯಮದಿಂದ ನನ್ನ ಪ್ರಾರಬ್ಧಭೋಗವನ್ನು ಮುಗಿಸುತ್ತಿದ್ದಾರೆ’, ಎನ್ನುವುದು ನನ್ನ ಗಮನಕ್ಕೆ ಬರುವುದು ಮತ್ತು ‘ಈ ಪ್ರಾರಬ್ಧವನ್ನು ಸಹಿಸಲು ಶಕ್ತಿ ನೀಡು’ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.

೨. ಸಂಬಂಧಿಕರು ತೀವ್ರ ಅನಾರೋಗ್ಯದಿಂದ ಮರಣಶಯ್ಯೆಯಲ್ಲಿರುವುದು

೨ ಅ. ಪ್ರಸಂಗ : … ಇವರು ತೀವ್ರ ಅನಾರೋಗ್ಯದಿಂದ ಮರಣಶಯ್ಯೆಯಲ್ಲಿದ್ದಾರೆ.

೨ ಆ. ಸ್ವಯಂಸೂಚನೆ :

‘ಯಾವಾಗ … ಇವರಿಗೆ ತೀವ್ರ ಅನಾರೋಗ್ಯವಿರುವುದು ನನಗೆ ತಿಳಿಯುವುದೋ, ಆಗ ನನಗೆ ‘ಎಲ್ಲವೂ ಪ್ರಾರಬ್ಧಕ್ಕನುಸಾರ ಮತ್ತು ಈಶ್ವರೇಚ್ಛೆಯಂತೆ ನಡೆಯುತ್ತದೆ’, ಎನ್ನುವುದು ಗಮನಕ್ಕೆ ಬರುವುದು ಮತ್ತು ನಾನು ಅವರಿಗೆ ಈ ಭೋಗವನ್ನು ಸಹಿಸಲು ಸಾಧ್ಯವಾಗಬೇಕೆಂದು ನಾಮಜಪ ಮಾಡುವಂತೆ ಆಗಾಗ ನೆನಪಿಸುವೆನು ಮತ್ತು ಅವರಿಗಾಗಿ ನಾನೂ ನಾಮಜಪ ಮಾಡುತ್ತೇನೆ’.

೩. ಆಪ್ತೇಷ್ಟರ ನಿಧನವಾಗುವುದು.

೩ ಅ. ಪ್ರಸಂಗ : ಕುಟುಂಬದ ಒಬ್ಬ ಸದಸ್ಯನ ಆಕಸ್ಮಿಕ ನಿಧನವಾಗಿರುವುದು ತಿಳಿದಾಗ ನನಗೆ ಭಾವನಾಶೀಲತೆಯಿಂದ ಅಳು ತಡೆಯಲು ಆಗಲಿಲ್ಲ.

೩ ಆ. ಸ್ವಯಂಸೂಚನೆ : ‘ಯಾವಾಗ … ಇವರು ನಿಧನರಾಗಿರುವುದು ನನಗೆ ತಿಳಿಯುವುದೋ, ಆಗ ನಾನು ‘ಜನಿಸುವ ಪ್ರತಿಯೊಂದು ಜೀವಕ್ಕೂ ಮೃತ್ಯು ನಿಶ್ಚಿತವಾಗಿರುತ್ತದೆ; ಆದರೆ ಈಶ್ವರನು ಮಾತ್ರ ಜನ್ಮಜನ್ಮಾಂತರಗಳ ವರೆಗೆ ನಮ್ಮೊಂದಿಗಿರುತ್ತಾನೆ’, ಎನ್ನುವುದು ನನ್ನ ಗಮನಕ್ಕೆ ಬರುವುದು. ಆಗ ನಾನು ಸ್ಥಿರವಾಗಿದ್ದುಕೊಂಡು ಮೃತ ವ್ಯಕ್ತಿಯ ಮುಂದಿನ ಮಾರ್ಗಕ್ರಮಣಕ್ಕಾಗಿ ದತ್ತನ ನಾಮಜಪವನ್ನು ಮಾಡುವೆನು ಮತ್ತು ಸ್ಥಿರವಾಗಿರಲು ಪ್ರಾರ್ಥಿಸುತ್ತೇನೆ’.

ಇಂತಹ ಪ್ರಸಂಗಗಳಲ್ಲಿ … ಇವರಿಗೆ ಒಳ್ಳೆಯ ಗತಿ ದೊರಕಲು ನಾನು ‘ಶ್ರೀ ಗುರುದೇವ ದತ್ತ | ಈ ನಾಮಜಪವನ್ನು ಮಾಡುವೆನು ಎಂದೂ ಸ್ವಯಂಸೂಚನೆಯನ್ನು ನೀಡಬಹುದಾಗಿದೆ.

ಮೃತಮಟ್ಟ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೬೦ ಕ್ಕಿಂತ ಅಧಿಕವಿದ್ದರೆ, ‘…ಇವರು ಜನನ-ಮರಣದ ಚಕ್ರದಿಂದ ಮುಕ್ತರಾಗಿದ್ದು, ಅವರಿಗೆ ಮೃತ್ಯು ವಿನ ನಂತರ ಒಳ್ಳೆಯ ಗತಿ ದೊರಕಲಿದೆ ಎಂದು ಅರಿತು ನಾನು ದುಃಖಿಸದೇ ನಿಶ್ಚಿಂತಳಾಗಿರುವೆನು, ಎನ್ನುವ ದೃಷ್ಟಿಕೋನವನ್ನೂ ನೀಡಬಹುದಾಗಿದೆ.

ಮೃತ್ಯುಶಯ್ಯೆಯಲ್ಲಿರುವ ವ್ಯಕ್ತಿಯ ವಿಷಯದಲ್ಲಿ ಅಥವಾ ಯಾವುದೇ ವ್ಯಕ್ತಿಯ ಮೃತ್ಯುವಿನ ವಿಷಯದಲ್ಲಿ ದುಃಖಿಸುತ್ತಿದ್ದರೆ, ಆ ವ್ಯಕ್ತಿಯ ಜೀವ ಕುಟುಂಬದವರಲ್ಲಿ ಸಿಲುಕುವ ಸಾಧ್ಯತೆಯಿರುತ್ತದೆ. ಆದುದರಿಂದ ಕುಟುಂಬದವರು ಇಂತಹ ಪ್ರಸಂಗದಲ್ಲಿ ಭಾವನಾಶೀಲರಾಗದೇ ಮೃತ್ಯುವನ್ನು ಸಾಕ್ಷಿಭಾವದಿಂದ ನೋಡಲು ಪ್ರಯತ್ನಿಸಬೇಕು. ಇದರಿಂದ ಕಠಿಣ ಪರಿಸ್ಥಿತಿಯಲ್ಲಿಯೂ ಅವರ ಸಾಧನೆಯಾಗುವುದು.

(ಈ ವಿಷಯದ ಹೆಚ್ಚಿನ ಮಾಹಿತಿ ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ (ಭಾಗ ೨) ಈ ಗ್ರಂಥದಲ್ಲಿದೆ)

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨.೧.೨೦೧೮)

Leave a Comment