ವ್ಯಕ್ತವಾಗುವ ಅಥವಾ ಮನಸ್ಸಿನಲ್ಲಿ ಮೂಡುವ ಅಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಲು ಉಪಯೋಗಿಸಲ್ಪಡುವ ಸ್ವಯಂಸೂಚನೆಯ ಪದ್ಧತಿ ಅ ೨

ದೈನಂದಿನ ಜೀವನದಲ್ಲಿ ಘಟಿಸುವ ವಿವಿಧ ಘಟನೆಗಳ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನಾದರೂ ಪ್ರತಿಕ್ರಿಯೆ ಮೂಡುತ್ತಾ ಇರುತ್ತದೆ ಅಥವಾ ವ್ಯಕ್ತವಾಗುತ್ತಿರುತ್ತದೆ. ಅಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದೋಷ ಮತ್ತು ಅಹಂಗಳಿಂದ ಹಾಗೂ ಯೋಗ್ಯ ಪ್ರತಿಕ್ರಿಯೆಯು ಸದ್ಗುಣಗಳಿಂದ ನಿರ್ಮಾಣವಾಗುತ್ತದೆ. ‘ಮನಸ್ಸಿನಲ್ಲಿರುವ ಅಯೋಗ್ಯ ಪ್ರತಿಕ್ರಿಯೆಯಿಂದ ನಿರ್ಮಾಣವಾಗುವ ಅಸ್ವಸ್ಥತೆಯು ದೂರಗೊಂಡು ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಬೇಕೆಂದು’, ‘ಅ ೨’ ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಸ್ವಯಂಸೂಚನೆಯ ಸ್ವರೂಪ

ಪ್ರಸಂಗ – ಯೋಗ್ಯ ದೃಷ್ಟಿಕೋನ – ಯೋಗ್ಯ ಪ್ರತಿಕ್ರಿಯೆ

ಯಾವ ಯಾವ ಸ್ವಭಾವದೋಷಗಳಿಗೆ ಸ್ವಯಂಸೂಚನೆ ನೀಡಬಹುದು ?

ಇನ್ನೊಬ್ಬರನ್ನು ಟೀಕಿಸುವುದು, ರೇಗುವುದು, ಕೋಪಗೊಳ್ಳುವುದು, ಜಗಳಗಂಟತನ, ಪಶ್ಚಾತ್ತಾಪವಾಗದಿರುವುದು, ಹಠಮಾರಿತನ, ಸಂಶಯ ವೃತ್ತಿ ಇತ್ಯಾದಿ ಸ್ವಭಾವದೋಷಗಳು

‘ಅ ೨’ ಸ್ವಯಂಸೂಚನೆಯ ಪದ್ಧತಿಯಲ್ಲಿ ಸ್ವಯಂಸೂಚನೆಯನ್ನು ತಯಾರಿಸುವಾಗ ಗಮನಿಸಬೇಕಾದ ಅಂಶಗಳು : ತಖ್ತೆಯಲ್ಲಿ ತಪ್ಪುಗಳನ್ನು ಬರೆಯುವಾಗ ಮನಸ್ಸಿನಲ್ಲಿ ಮೂಡಿದ ಅಥವಾ ವ್ಯಕ್ತಪಡಿಸಿದ ಪ್ರತಿಕ್ರಿಯೆಯ ಉಲ್ಲೇಖ ‘ಅಯೋಗ್ಯ ವಿಚಾರ/ಅಯೋಗ್ಯ ಕೃತಿ/ಭಾವನೆ’ ಈ ಕಾಲಂನಲ್ಲಿ ತುಂಬಬೇಕು; ಆದರೆ ಸ್ವಯಂಸೂಚನೆಯ ಕಾಲಂನಲ್ಲಿ ಕೇವಲ ಪ್ರಸಂಗ ಮತ್ತು ಉಪಾಯವನ್ನು ಬರೆಯಬೇಕು. ಸ್ವಯಂ ಸೂಚನೆಯಲ್ಲಿ ಪ್ರತಿಕ್ರಿಯೆಯನ್ನು ಉಲ್ಲೇಖಿಸುವ ಅವಶ್ಯಕತೆಯಿಲ್ಲ.

‘ಅ ೨’ ಈ ಸ್ವಯಂಸೂಚನೆಯ ಪದ್ಧತಿಗನುಸಾರ ತಯಾರಿಸಿದ ಸ್ವಯಂಸೂಚನೆಯ ಉದಾಹರಣೆ

ಅ. ಮನಸ್ಸಿನಲ್ಲಿ ಪ್ರತಿಕ್ರಿಯೆ ಬರುವುದು

ಅ ೧. ಪ್ರಸಂಗ : ಜ್ಯೋತಿಗೆ ‘ಅಡುಗೆಮನೆಯಲ್ಲಿ ಪಾತ್ರೆಗಳನ್ನು ಹೇಗೆ ಇಡಬೇಕು ?’ ಎಂದು ಎರಡು ಸಲ ತಿಳಿಸಿ ಹೇಳಿದೆನು. ಆದರೂ ಅವಳು ಸರಿಯಾದ ಸ್ಥಳದಲ್ಲಿ ಪಾತ್ರೆಗಳನ್ನು ಇಡಲಿಲ್ಲ. ಇದರಿಂದ ‘ಇವಳಿಗೆ ಎರಡು ಸಲ ಹೇಳಿದರೂ ಯಾಕೆ ತಿಳಿಯುವುದಿಲ್ಲ ?’ ಎಂದು ಮನಸ್ಸಿನಲ್ಲಿ ಪ್ರತಿಕ್ರಿಯೆ ಬಂದಿತು.

ಅ ೨. ಸ್ವಯಂಸೂಚನೆ : ಯಾವಾಗ ನಾನು ಜ್ಯೋತಿಗೆ ‘ಪಾತ್ರೆಗಳನ್ನು ಹೇಗೆ ಇಡಬೇಕು ?’ ಎಂದು ಎರಡು ಸಲ ತಿಳಿಸಿ ಹೇಳಿದರೂ ಅವಳು ಸರಿಯಾದ ಸ್ಥಳದಲ್ಲಿ ಪಾತ್ರೆಗಳನ್ನು ಇಡದಿರುವುದು ಗಮನಕ್ಕೆ ಬರುವುದೋ, ಆಗ ನಾನು ‘ಅವಳು ಅಡುಗೆ ಮನೆಯ ಸೇವೆಗೆ ಹೊಸದಾಗಿ ಬಂದಿದ್ದಾಳೆ’ ಎನ್ನುವುದನ್ನು ಗಮನಿಸಿ ನಾನು ಅವಳಿಗೆ ಪಾತ್ರೆಗಳನ್ನು ಇಡುವ ಸರಿಯಾದ ಸ್ಥಳಗಳನ್ನು ಮತ್ತೊಮ್ಮೆ ತಿಳಿಸಿ ಹೇಳುವೆನು/ತೋರಿಸುವೆನು.’

(ಹಳೆಯ ಸಾಧಕರು ಅಥವಾ ಸೇವೆಯಲ್ಲಿ ಕೌಶಲ್ಯವಿರುವ ಸಾಧಕರಿಂದ ಪದೇ ಪದೇ ಒಂದೇ ತರಹದ ತಪ್ಪುಗಳು ಆದಾಗ ಅಥವಾ ಬೌದ್ಧಿಕಸ್ತರದ ಸೇವೆಯಲ್ಲಿ ತಪ್ಪುಗಳಾದರೆ ಮೇಲಿನ ದೃಷ್ಟಿಕೋನದಲ್ಲಿ ಬದಲಾವಣೆಗಳಾಗಬಹುದು)

ಆ. ಪ್ರತಿಕ್ರಿಯೆ ವ್ಯಕ್ತವಾಗುವುದು

ಆ ೧. ಪ್ರಸಂಗ : ‘ಒಂದು ಸೇವೆ ಮಾಡಲು ನನಗೆ ವಿಳಂಬವಾಗುವುದು’ ಎನ್ನುವ ನನ್ನ ಸಂದೇಶವನ್ನು ಜವಾಬ್ದಾರ ಸಾಧಕರಿಗೆ ಹೇಳಲು ಅಕ್ಷಯನಿಗೆ ತಿಳಿಸಿದಾಗ ಅವನು ಮರೆತನು. ಆಗ ನಾನು ‘ನೀನು ಯಾವಾಗಲೂ ಹೀಗೇಕೆ ಮರೆಯುತ್ತೀ ? ನಿನಗೆ ಇಷ್ಟು ಚಿಕ್ಕ ಸೇವೆಯನ್ನು ಸಹ ಸರಿಯಾಗಿ ಮಾಡಲು ಬರುವುದಿಲ್ಲವೇ ?’ ಎನ್ನುವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆನು. ಅದರಿಂದ ಅವನು ನೊಂದುಕೊಂಡನು.

ಆ ೨. ಸ್ವಯಂಸೂಚನೆ : ಯಾವಾಗ ‘ನನಗೆ ಸೇವೆ ಮಾಡಲು ತಡವಾಗುವುದು’ ಎನ್ನುವ ನನ್ನ ಸಂದೇಶವನ್ನು ಜವಾಬ್ದಾರ ಸಾಧಕರಿಗೆ ತಿಳಿಸಲು ಅಕ್ಷಯನು ಮರೆತಿದ್ದಾನೆಂದು ನನಗೆ ತಿಳಿಯುವುದೋ, ಆಗ ನನ್ನ ಸಂದೇಶವನ್ನು ತಲುಪಿಸಲು ಅಕ್ಷಯನು ಮರೆತಿರುವ ಕಾರಣವನ್ನು ಅವನಿಂದ ಕೇಳಿ ತಿಳಿದುಕೊಳ್ಳುವೆನು ಮತ್ತು ಸಂದೇಶವನ್ನು ತಲುಪಿ ಸಲು ವಿಳಂಬವಾಗಿರುವ ಕುರಿತು ಜವಾಬ್ದಾರ ಸಾಧಕರೊಂದಿಗೆ ಮಾತನಾಡುವೆನು, (ಸಾಧಕರು ಸ್ವಯಂಸೂಚನೆಯಲ್ಲಿ ಸಂಬಂಧಿಸಿದ ಜವಾಬ್ದಾರ ಮತ್ತು ಸಹಸಾಧಕರ ಹೆಸರನ್ನು ಉಲ್ಲೇಖಿಸಬೇಕು)

ಮೇಲಿನ ಉದಾಹರಣೆಯಿಂದ ‘ತಪ್ಪು ದೃಷ್ಟಿಕೋನ ಮತ್ತು ಅದಕ್ಕೆ ಉಪಾಯವನ್ನು ಹೇಗೆ ತಯಾರಿಸಬೇಕು ?’ ಎಂಬುದು ತಿಳಿಯುತ್ತದೆ. ಆದರೆ ‘ಪ್ರಸಂಗ, ವ್ಯಕ್ತಿ ಮತ್ತು ಅವರ ಕ್ಷಮತೆಗನುಗುಸಾರ ದೃಷ್ಟಿಕೋನ ಬದಲಾಗಬಹುದು’, ಎನ್ನುವುದನ್ನು ತಿಳಿದುಕೊಳ್ಳಬೇಕು.

ಭಾವದ ಸ್ತರದಲ್ಲಿ ಸ್ವಯಂಸೂಚನೆಯನ್ನು ನೀಡುವ ಮಹತ್ವ ಮತ್ತು ಉದಾಹರಣೆ

‘ಸ್ವಯಂಸೂಚನೆಯಲ್ಲಿ ಮಾನಸಿಕ ಸ್ತರದ ದೃಷ್ಟಿಕೋನದೊಂದಿಗೆ ಭಾವದ ಪ್ರಯತ್ನವನ್ನು ಸಹ ಜೋಡಿಸಿದರೆ ಸೂಚನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂಬುದನ್ನು ಅನೇಕ ಸಾಧಕರು ಅನುಭವಿಸಿದ್ದಾರೆ. ‘ಸ್ವಯಂಸೂಚನೆಯಲ್ಲಿ ಕೇವಲ ಮಾನಸಿಕ ಸ್ತರದ ದೃಷ್ಟಿಕೋನವನ್ನು ನೀಡಬೇಕೆ ಅಥವಾ ಭಾವದ ಸ್ತರದ ಪ್ರಯತ್ನಗಳನ್ನು ಸೇರಿಸಿಕೊಳ್ಳಬೇಕೆ ?’ ಎನ್ನುವುದನ್ನು ತಮ್ಮ ಸ್ಥಿತಿಗನುಸಾರ ಜವಾಬ್ದಾರ ಸಾಧಕರಲ್ಲಿ ಕೇಳಿ ನಿರ್ಧರಿಸಬೇಕು. ಎರಡೂ ರೀತಿಯ ಸ್ವಯಂಸೂಚನೆಗಳ ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

ಅ. ಪ್ರಸಂಗ : ಸಂತರು ಗಣಕಯಂತ್ರವನ್ನು ಕಲಿಯಲು ಹೇಳಿದಾಗ ‘ಅಯ್ಯೋ ! ಗಣಕಯಂತ್ರವನ್ನು ಉಪಯೋಗಿಸುವಾಗ ನನ್ನಿಂದ ಏನಾದರೂ ತಪ್ಪಾದರೆ ?’ ಎನ್ನುವ ನಕಾರಾತ್ಮಕ ಪ್ರತಿಕ್ರಿಯೆ ಮನಸ್ಸಿನಲ್ಲಿ ಮೂಡಿತು.

ಆ. ಮಾನಸಿಕ ಸ್ತರದ ಸೂಚನೆ : ‘ಯಾವಾಗ ಸಂತರು ನನಗೆ ಗಣಕಯಂತ್ರವನ್ನು ಕಲಿಯಲು ಹೇಳಿದರೋ, ಆಗ ನನ್ನ ವಯಸ್ಸಿನ ಅನೇಕ ಜನರು ಗಣಕಯಂತ್ರವನ್ನು ಸಹಜವಾಗಿ ಕಲಿತುಕೊಂಡಿದ್ದಾರೆ. ಆದ್ದರಿಂದ ನಾನು ಸಹ ಸಹಜವಾಗಿ ಕಲಿಯಬಲ್ಲೆನು’, ಎಂಬುದು ನನಗೆ ಅರಿವಾಗುವುದು ಮತ್ತು ನಾನು ಪ್ರತಿದಿನ ನಿಗದಿತ ಸಮಯದಲ್ಲಿ ಉತ್ಸಾಹದಿಂದ ಗಣಕಯಂತ್ರವನ್ನು ಕಲಿಯುವೆನು.

ಇ. ಭಾವದ ಸ್ತರದಲ್ಲಿ ಸೂಚನೆ : ‘ಯಾವಾಗ ಸಂತರು ನನಗೆ ಗಣಕಯಂತ್ರವನ್ನು ಕಲಿಯಲು ಹೇಳುವರೋ, ಆಗ ನನಗೆ ‘ವ್ಯವಹಾರಿಕ ದೃಷ್ಟಿಯಿಂದ ಗಣಕಯಂತ್ರ ಕಲಿಯುವುದು ಸುಲಭವಾಗಿದೆ ಮತ್ತು ಸಂತರ ಸಂಕಲ್ಪದಿಂದ ಅದು ಮತ್ತಷ್ಟು ಶೀಘ್ರವಾಗಿ ಸಾಧ್ಯವಾಗುವುದು’ ಎನ್ನುವುದು ಅರಿವಾಗಿ ನಾನು ಪ್ರತಿದಿನ ನಿಗದಿತ ಸಮಯದಲ್ಲಿ ಉತ್ಸಾಹದಿಂದ ಗಣಕಯಂತ್ರವನ್ನು ಕಲಿಯುವೆನು.’

(ಅದರೊಂದಿಗೆ ಮಾಡಬೇಕಾದ ಪ್ರಾರ್ಥನೆ : ಗುರುದೇವಾ, ಸಂತರು ಹೇಳಿದಂತೆ ನಾನು ಗಣಕಯಂತ್ರವನ್ನು ಕಲಿಯಲು ಸಮಯವನ್ನು ನಿಯೋಜಿಸಿದ್ದೇನೆ. ನೀವೇ ನನಗೆ ಗಣಕಯಂತ್ರವನ್ನು ಕಲಿಯಲು ಶಕ್ತಿ ಮತ್ತು ಬುದ್ಧಿಯನ್ನು ನೀಡಿರಿ)

ಯಾವ ಸೇವೆಯನ್ನು ಕಲಿಯಲು ತೊಂದರೆಯಿದೆಯೋ, ಆ ಸೇವೆಯನ್ನು ಉಲ್ಲೇಖಿಸಿ ಮೇಲಿನ ಸ್ವಯಂಸೂಚನೆ ನೀಡಬಹುದು.

(ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ'(ಭಾಗ ೨) ಈ ಗ್ರಂಥದಲ್ಲಿದೆ.)

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ಗೋವಾ (೨೩.೧೨.೨೦೧೭)

Leave a Comment