ಕೃತಿ ಮತ್ತು ವಿಚಾರ ಸ್ತರದ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು ಉಪಯೋಗಿಸುವ ‘ಅ ೧’ ಸ್ವಯಂಸೂಚನಾ ಪದ್ಧತಿ !

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಳಿಗೆ ಕಾಲಾನುಸಾರ ಅತ್ಯಧಿಕ ಮಹತ್ವವಿದೆ. ಈ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಮಾಡಲು ನಿಯಮಿತ ಪ್ರಯತ್ನಗಳ ಪೈಕಿ ಮಹತ್ವದ ಘಟಕವೆಂದರೆ ಸ್ವಯಂಸೂಚನೆಗಳನ್ನು ತಯಾರಿಸುವುದು !

ಸ್ವಯಂಸೂಚನೆಗಳನ್ನು ಯೋಗ್ಯ ಸ್ವಯಂಸೂಚನಾ ಪದ್ಧತಿಯಂತೆ ನೀಡಿದರೆ ಸ್ವಭಾವದೋಷ ಮತ್ತು ಅಹಂಗಳ ತೀವ್ರತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಆನಂದ ಹೆಚ್ಚಾಗುತ್ತದೆ. ಅದಕ್ಕಾಗಿ ವಿವಿಧ ಸ್ವಯಂಸೂಚನಾ ಪದ್ಧತಿಗಳ ಸವಿಸ್ತಾರ ಮಾಹಿತಿ ಮತ್ತು ಮಾರ್ಗದರ್ಶಕ ಅಂಶಗಳನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನದಲ್ಲಿ ಅ ೧ ಈ ಸ್ವಯಂಸೂಚನಾ ಪದ್ಧತಿಯನ್ನು ನೋಡೋಣ.

ಅನೇಕ ಸಾಧಕರು ಅ ೧ ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸುತ್ತಾರೆ. ವಿಚಾರ, ಕೃತಿ ಮತ್ತು ಭಾವನೆಯ ಸ್ತರದಲ್ಲಿ ಆಗುವ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಸ್ವಯಂಸೂಚನೆಯ ಸ್ವರೂಪ

ಅಯೋಗ್ಯ ವಿಚಾರ, ಅಯೋಗ್ಯ ಕೃತಿ ಮತ್ತು ಅಯೋಗ್ಯ ಭಾವನೆಯ ಅರಿವು / ಯೋಗ್ಯ ಕೃತಿಗಾಗಿ ದೃಷ್ಟಿಕೋನ ಅಥವಾ ಪರಿಣಾಮ / ಉಪಾಯಯೋಜನೆ (ಪ್ರಸಂಗಕ್ಕನುಸಾರ ಯೋಗ್ಯ ಕೃತಿ ಅಥವಾ ಯೋಗ್ಯ ವಿಚಾರ)

ಈ ಸ್ವಯಂಸೂಚನೆಯ ಪದ್ಧತಿಯನ್ನು ಉಪಯೋಗಿಸಿ ಮುಂದಿನ ಸ್ವಭಾವದೋಷಗಳನ್ನು ಮತ್ತು ಅಯೋಗ್ಯ ಕೃತಿಗಳನ್ನು ದೂರಗೊಳಿಸಬಹುದು

ಏಕಾಗ್ರತೆ ಇಲ್ಲದಿರುವುದು, ಮನೋರಾಜ್ಯದಲ್ಲಿ ವಿಹರಿಸುವುದು, ಅತೀ ಚಂಚಲತೆ (ಅವಸರ ಪಡುವುದು, ಗಡಿಬಿಡಿ), ಬೇಜವಾಬ್ದಾರಿತನ, ಆಲಸ್ಯ, ಅವ್ಯವಸ್ಥಿತ, ಸಮಯ ಪಾಲನೆಯ ಅಭಾವ, ಅತೀ ಚಿಕಿತ್ಸಕ ವೃತ್ತಿ, ಇತರರ ಗಮನವನ್ನು ಸೆಳೆಯುವುದು, ಸ್ವಾರ್ಥಿತನ, ವಿಶ್ವಾಸಾರ್ಹತೆ ಇಲ್ಲದಿರುವುದು, ಸಂಶಯಪಡುವುದು, ಗರ್ವಯುತ ವರ್ತನೆ, ದರ್ಪಯುಕ್ತ ವರ್ತನೆ, ಅತೀಮಹತ್ವಾಕಾಂಕ್ಷೆ ಇರುವುದು, ಅತಿ ಶಿಸ್ತು, ನಿರ್ಣಯ ಕ್ಷಮತೆಯ ಅಭಾವ, ರೂಢಿಪ್ರಿಯತೆ, ಭ್ರಷ್ಟತನ, ನೈತಿಕತೆ ಇಲ್ಲದಿರುವುದು ಇತ್ಯಾದಿ ಸ್ವಭಾವದೋಷಗಳು; ಧೂಮ್ರಪಾನ ಮಾಡುವುದು (ಸಿಗರೇಟ ಸೇದುವುದು) ಮದ್ಯಪಾನ ಮಾಡುವುದು ಇತ್ಯಾದಿ ಚಟಗಳು (ಅಭ್ಯಾಸಗಳು); ಉಗುರು ಕಚ್ಚುವುದು, ತೊದಲುವಿಕೆ, ೮ ವರ್ಷಗಳ ಬಳಿಕವೂ ಹಾಸಿಗೆಯಲ್ಲಿ ಮೂತ್ರ ಮಾಡುವುದು ಇತ್ಯಾದಿ ಅಯೋಗ್ಯ ಕೃತಿಗಳು.

ಅ ೧ ಈ ಸ್ವಯಂಸೂಚನೆಯ ಪದ್ಧತಿಗನುಸಾರ ಸಿದ್ಧಪಡಿಸಿದ ಯೋಗ್ಯ ಸ್ವಯಂಸೂಚನೆಗಳ ಉದಾಹರಣೆಗಳು

ಅ. ಕೃತಿಯ ಸ್ತರದಲ್ಲಿ ಸ್ವಯಂಸೂಚನೆ : ಯಾವಾಗ ಪ್ರಥಮೇಶನಿಂದ ಸಾಪ್ತಾಹಿಕ ಸನಾತನ ಪ್ರಭಾತದ ಪರಿಶೀಲನೆಯ ವರದಿಯು ತಿಂಗಳಿನ ೨೫ ನೇ ದಿನಾಂಕದ ಬಳಿಕವೂ ಬರಲು ತಡವಾಗುತ್ತಿರುವಾಗ ನಾನು ಬೆಂಬತ್ತುವಿಕೆ ಮಾಡಲು ಮೈಗಳ್ಳತನ ಮಾಡುತ್ತಿರುವೆನೋ, ಆಗ ಸಹ ಸಾಧಕನಿಂದ ಪರಿಶೀಲನೆಯನ್ನು ಪೂರ್ಣಗೊಳಿಸಿಕೊಳ್ಳುವುದು, ನನ್ನ ಸೇವೆಯೇ ಆಗಿದೆ ಎಂಬುದು ನನಗೆ ಅರಿವಾಗುವುದು ಮತ್ತು ನಾನು ೨೬ ನೇ ತಾರೀಕಿನಿಂದ ಬೆಂಬತ್ತುವಿಕೆಯನ್ನು ಮಾಡಲು ಪ್ರಾರಂಭಿಸಿ ಪರಿಶೀಲನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವೆನು.
(ಈ ಸ್ವಯಂಸೂಚನೆಯಲ್ಲಿ ಪ್ರಥಮೇಶ ಎಂಬ ಹೆಸರನ್ನು ಉಲ್ಲೇಖಿಸಲಾಗಿದೆ. ಸಾಧಕರು ಸ್ವಯಂಸೂಚನೆ ತಯಾರಿಸುವಾಗ ತಮಗೆ ಸಂಬಂಧಪಟ್ಟ ಸಾಧಕರ ಹೆಸರನ್ನು ಉಲ್ಲೇಖಿಸಬೇಕು. ಸ್ವಯಂಸೂಚನೆಯಲ್ಲಿ ನಿಗದಿತ ಸಮಯದೊಳಗೆ ಎಂದು ಬರೆಯುವಾಗ ನಿರ್ದಿಷ್ಟ ದಿನಾಂಕವನ್ನು ಉಲ್ಲೇಖಿಸಬೇಕು)

ಆ. ವಿಚಾರಗಳ ಸ್ತರದಲ್ಲಿ ಸ್ವಯಂಸೂಚನೆ : ‘ಯಾವಾಗ ನನ್ನ ವ್ಯಷ್ಟಿ ಸಾಧನೆಯ ಪ್ರಯತ್ನಗಳು ಸರಿಯಾಗಿ ಆಗಲಿಲ್ಲವೆಂದು ನನಗೆ ವರದಿಯನ್ನು ನೀಡಲು ಒತ್ತಡವಾಗುತ್ತಿರುವುದೋ, ಆಗ ಸಕಾರಾತ್ಮಕವಾಗಿದ್ದು ವರದಿಯನ್ನು ನೀಡುವುದರಿಂದ ನನ್ನಿಂದ ಆಗದಿರುವ ಪ್ರಯತ್ನಗಳನ್ನು ಮಾಡಲು ನನಗೆ ಸೂಕ್ತ ಮಾರ್ಗದರ್ಶನ ಸಿಗುವುದು ಮತ್ತು ನನ್ನ ಪ್ರಯತ್ನಗಳು ನಿಯಮಿತವಾಗಿ ಆಗುವವು, ಎಂಬುದರ ಅರಿವಾಗುವುದು ಮತ್ತು ನಾನು ಮುಕ್ತ ಮನಸ್ಸಿನಿಂದ ವರದಿಯನ್ನು ಕೊಡುವೆನು.

೪. ನಾಲ್ಕು ಹಂತಗಳಲ್ಲಿ ಸ್ವಯಂಸೂಚನೆಯನ್ನು ನೀಡುವುದು

ಈ ಸ್ವಯಂಸೂಚನಾ ಪದ್ಧತಿಯಲ್ಲಿ ೧. ತಪ್ಪಾದ ನಂತರ, ೨. ತಪ್ಪು ಆಗುತ್ತಿರುವಾಗ, ೩. ತಪ್ಪು ಆಗುವ ಮೊದಲು ಮತ್ತು ೪. ಯೋಗ್ಯ ಕೃತಿ ಆಗಲು ಸ್ವಯಂಸೂಚನೆ ಹೀಗೆ ೪ ಹಂತಗಳಲ್ಲಿ ಸ್ವಯಂಸೂಚನೆಯನ್ನು ಕೊಡಬೇಕಾಗುತ್ತದೆ. ಯಾವ ಹಂತದಲ್ಲಿ ಅಯೋಗ್ಯ ಕೃತಿಯ ಅರಿವಾಗುತ್ತದೆಯೋ, ಆಗ ಅದರ ಮುಂದಿನ ಹಂತದ ಸ್ವಯಂಸೂಚನೆಯನ್ನು ಕೊಡುವುದು ಆವಶ್ಯಕವಾಗಿರುತ್ತದೆ.

ಭಾವದ ಸ್ತರದಲ್ಲಿ ಸ್ವಯಂಸೂಚನೆಗಳನ್ನು ನೀಡುವುದರ ಮಹತ್ವ ಮತ್ತು ಉದಾಹರಣೆಗಳು

ಸ್ವಯಂಸೂಚನೆಯಲ್ಲಿ ಮಾನಸಿಕ ಸ್ತರದ ದೃಷ್ಟಿಕೋನದೊಂದಿಗೆ ಭಾವದ ಸ್ತರದ ಪ್ರಯತ್ನಗಳನ್ನು ಜೊತೆಗೂಡಿಸಿದರೆ ಸ್ವಯಂಸೂಚನೆಯು ಹೆಚ್ಚು ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಅನೇಕ ಸಾಧಕರು ಅನುಭವಿಸಿದ್ದಾರೆ. ಸ್ವಯಂಸೂಚನೆಯಲ್ಲಿ ಕೇವಲ ಮಾನಸಿಕ ಸ್ತರದ ದೃಷ್ಟಿಕೋನವನ್ನು ನೀಡಬೇಕೋ ಅಥವಾ ಭಾವದ ಸ್ತರದ ಪ್ರಯತ್ನಗಳನ್ನು ಸೇರಿಸಿಕೊಳ್ಳಬೇಕೋ ಎಂಬುದನ್ನು ತಮ್ಮ ಸ್ಥಿತಿಗನುಸಾರ ಜವಾಬ್ದಾರ ಸಾಧಕರಿಗೆ ಕೇಳಿಕೊಂಡು ನಿರ್ಧರಿಸಬೇಕು. ಎರಡೂ ರೀತಿಯ ಸ್ವಯಂಸೂಚನೆಗಳ ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

ಅ. ಮಾನಸಿಕ ಸ್ತರದ ಸ್ವಯಂಸೂಚನೆ : ಯಾವಾಗ ಅಂಜಲಿಯು ನನಗೆ ಶ್ರುತಿಗೆ ಕರಪತ್ರಗಳನ್ನು ನೀಡಲು ಹೇಳುವಳೋ, ಆಗ ನನ್ನ ಮರೆವು ಸ್ವಭಾವದಿಂದಾಗಿ ಈ ಸೇವೆಯನ್ನು ಬರೆದಿಟ್ಟುಕೊಳ್ಳಲು ಮರೆಯಬಹುದು, ಎಂಬುದರ ಅರಿವಾಗಿ ನಾನು ಅದನ್ನು ತಕ್ಷಣವೇ ಸೇವೆಯ ವಹಿಯಲ್ಲಿ ಬರೆದಿಡುವೆನು ಮತ್ತು ಶ್ರುತಿಗೆ ಸಮಯಕ್ಕೆ ಸರಿಯಾಗಿ ಕರಪತ್ರಗಳನ್ನು ಕೊಡುವೆನು.
(ಶ್ರುತಿಗೆ ಸರಿಯಾದ ಸಮಯಕ್ಕೆ ಕರಪತ್ರಗಳನ್ನು ನೀಡುವೆನು, ಈ ವಾಕ್ಯದಲ್ಲಿ ನಿರ್ದಿಷ್ಟ ಸಮಯವನ್ನು ಬರೆಯಬೇಕು. ಉದಾ. ಮಧ್ಯಾಹ್ನ ೨ ಗಂಟೆಯ ಮೊದಲು, ಸಾಯಂಕಾಲ ೭ ಗಂಟೆಯ ಮೊದಲು ಇತ್ಯಾದಿ)

ಆ. ಭಾವದ ಸ್ತರದಲ್ಲಿ ಸ್ವಯಂಸೂಚನೆ : ಯಾವಾಗ ಅಂಜಲಿ ನನಗೆ ಶ್ರುತಿಗೆ ಕರಪತ್ರಗಳನ್ನು ಕೊಡಲು ಹೇಳುವಳೋ, ಆಗ ನನ್ನ ಮರೆವು ಸ್ವಭಾವದಿಂದಾಗಿ ನಾನು ಅದನ್ನು ಮರೆಯಬಹುದು ಎಂಬುದರ ಅರಿವಾಗಿ ನಾನು ತಕ್ಷಣವೇ ಸೇವೆಯ ವಹಿಯಲ್ಲಿ ಅದನ್ನು ಬರೆದಿಟ್ಟುಕೊಳ್ಳುವೆನು ಮತ್ತು ಈಶ್ವರನೇ, ನೀನೆ ಈ ಸೇವೆಯನ್ನು ನನ್ನಿಂದ ನಿಗದಿತ ಸಮಯದಲ್ಲಿ ಮಾಡಿಸಿಕೊ, ಎಂದು ಪ್ರಾರ್ಥನೆಯನ್ನು ಮಾಡುವೆನು.
(ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೧೨.೨೦೧೭)

(ಈ ವಿಷಯದ ಹೆಚ್ಚಿನ ಮಾಹಿತಿಯನ್ನು ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ (ಭಾಗ ೨) ಈ ಗ್ರಂಥದಲ್ಲಿ ನೀಡಲಾಗಿದೆ)

Leave a Comment