ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಲು ವಿವಿಧ ಸ್ವಯಂಸೂಚನೆ ಪದ್ಧತಿಗಳ ಅಸಾಧಾರಣ ಮಹತ್ವ !

ಕಾಲಾನುಸಾರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಳ ಪ್ರಯತ್ನಗಳಿಗೆ ಅಸಾಧಾರಣ ಮಹತ್ವವಿದೆ. ಈ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಲು ನಿಯಮಿತ ಪ್ರಯತ್ನಗಳಲ್ಲಿ ಮಹತ್ವದ ಭಾಗವೆಂದರೆ ಸ್ವಯಂಸೂಚನೆಯನ್ನು ತಯಾರಿಸುವುದು ! ಸ್ವಯಂಸೂಚನೆಯನ್ನು ಯೋಗ್ಯ ಪದ್ಧತಿಯಂತೆ ನೀಡಿದರೆ ಸ್ವಭಾವದೋಷ ಮತ್ತು ಅಹಂಗಳ ತೀವ್ರತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಅದರಿಂದ ಆನಂದವು ಹೆಚ್ಚಾಗುತ್ತದೆ. ಆದುದರಿಂದ ವಿವಿಧ ಸ್ವಯಂಸೂಚನೆ ನೀಡುವ ಪದ್ಧತಿಗಳನ್ನು ಸವಿಸ್ತಾರವಾಗಿ ನೀಡುತ್ತಿದ್ದೇವೆ

ಸ್ವಯಂಸೂಚನೆ ಎಂದರೇನು ?

ನಮ್ಮಿಂದ ನಡೆದ ಅಯೋಗ್ಯ ಕೃತಿ, ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಅಥವಾ ಭಾವನೆ ಮತ್ತು ವ್ಯಕ್ತಗೊಂಡ ಅಥವಾ ನಮ್ಮ ಮನಸ್ಸಿನಲ್ಲಿ ಬಂದ ಅಯೋಗ್ಯ ಪ್ರತಿಕ್ರಿಯೆಗಳ ಸಂದರ್ಭದಲ್ಲಿ ನಾವೇ ನಮ್ಮ ಅಂತರ್ಮನಸ್ಸಿಗೆ (ಚಿತ್ತಕ್ಕೆ) ಸೂಚನೆ ನೀಡುವುದು ಎಂದರೆ ‘ಸ್ವಯಂಸೂಚನೆ’ ಎಂದರ್ಥ.

ಪ್ರತಿದಿನ ಎಷ್ಟು ಸ್ವಯಂಸೂಚನೆ ಸತ್ರ ಮಾಡಬೇಕು ?

ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಅಂತರ್ಗತ ಸ್ವಯಂ ಸೂಚನೆ ಸತ್ರಗಳನ್ನು ಮಾಡುತ್ತಿರುತ್ತಾರೆ. ಅಲ್ಲದೇ ತಖ್ತೆಯಲ್ಲಿ ತಪ್ಪುಗಳ ಬಗ್ಗೆ ಸ್ವಯಂಸೂಚನೆಯನ್ನು ಬರೆದಿರುತ್ತಾರೆ. ಪ್ರತಿಯೊಂದು ವರ್ತನೆಯ ಬಗ್ಗೆ ನಿಯಮಿತವಾಗಿ ತಾವೇ ತಮ್ಮ ಅಂತರ್ಮನಸ್ಸಿಗೆ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಸ್ವಯಂಸೂಚನೆಗಳನ್ನು ನೀಡುವುದರಿಂದ ಕಡಿಮೆ ಕಾಲಾವಧಿಯಲ್ಲಿ ಅಯೋಗ್ಯ ವರ್ತನೆಗಳಲ್ಲಿ ಸುಧಾರಣೆಯಾಗತೊಡಗುತ್ತದೆ. ಸ್ವಭಾವದೋಷ ಮತ್ತು ಅಹಂ ಲಕ್ಷಣಗಳ ನಿರ್ಮೂಲನೆಗಾಗಿ ಪ್ರತಿದಿನ ೭ ಬಾರಿ ಹಾಗೆಯೇ ಅದರ ತೀವ್ರತೆಯು ಹೆಚ್ಚಿದ್ದರೆ ೮ ರಿಂದ ೨೦ ಸ್ವಯಂಸೂಚನೆ ಸತ್ರಗಳನ್ನು ನೀಡಬೇಕು. ಪ್ರತಿದಿನ ನಿಯಮಿತವಾಗಿ ಮತ್ತು ನಿಗದಿತ ಸಮಯಕ್ಕೆ ಸ್ವಯಂಸೂಚನೆ ಸತ್ರಗಳನ್ನು ಮಾಡಬೇಕು. ಇದನ್ನು ನಿಯಮಿತವಾಗಿ ಮಾಡದಿದ್ದರೆ ಸ್ವಭಾವದಲ್ಲಿ ಅಪೇಕ್ಷಿತ ಬದಲಾವಣೆ ಗಳು ಆಗಲಾರದು.

ಸ್ವಯಂಸೂಚನೆಯನ್ನು ನೀಡುವ ವಿವಿಧ ಸ್ವಯಂಸೂಚನೆಗಳ ಪದ್ಧತಿ

ಮೇಲೆ ನೀಡಿರುವ ಸ್ವಯಂಸೂಚನೆ ಪದ್ಧತಿಯನ್ನು (‘ಅ ೧ ‘ಅ ೨, ‘ಅ ೩, ‘ಆ ೧, ‘ಆ ೨, ‘ಇ ೧ ಮತ್ತು ‘ಇ ೨ ಇವುಗಳಿಗೆ) ಆಂಗ್ಲ ಭಾಷೆಯಲ್ಲಿ ‘ಎ, ಬಿ, ಸಿ ಟೆಕ್ನಿಕ್ ( ABC Technique) ಎಂದು ಹೇಳುತ್ತಾರೆ.

ಸ್ವಭಾವದೋಷ ಮತ್ತು ಅಹಂ ಇವುಗಳಲ್ಲಿ ಶೀಘ್ರವಾಗಿ ಬದಲಾವಣೆ ಕಂಡು ಬರಲು
ಯೋಗ್ಯ ಸೂಚನೆಯ ಪದ್ಧತಿಯನ್ನು ಉಪಯೋಗಿಸುವುದರಿಂದಾಗುವ ಲಾಭಗಳು !

ಮೇಲೆ ತಿಳಿಸಿರುವ ವಿವಿಧ ಸ್ವಯಂಸೂಚನೆಗಳ ಪದ್ಧತಿಗಳಿಂದ ಸ್ವಯಂಸೂಚನೆ ನೀಡಬೇಕಾಗಿರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ತಪ್ಪುಗಳ ವಿಧಗಳಿಗನುಸಾರ ವಿವಿಧ ಸ್ವಯಂಸೂಚನೆ ಪದ್ಧತಿಗಳಂತೆ ಸ್ವಯಂಸೂಚನೆಯನ್ನು ತಯಾರಿಸಿದರೆ ಅಪೇಕ್ಷಿತವಿರುವಂತಹ ಬದಲಾವಣೆ ಶೀಘ್ರವಾಗಿ ಕಂಡುಬರುತ್ತದೆ. ಆದುದರಿಂದ ಸಾಧಕರು ವಿವಿಧ ಸ್ವಯಂಸೂಚನೆಗಳ ಪದ್ಧತಿಗಳನ್ನು ಉಪಯೋಗಿಸಿ ಸ್ವಯಂಸೂಚನೆಯನ್ನು ತಯಾರಿಸಲು ಮತ್ತು ನಿಯಮಿತವಾಗಿ ಹಾಗೂ ಮನಃಪೂರ್ವಕವಾಗಿ ಸ್ವಯಂಸೂಚನೆಯನ್ನು ನೀಡಿ ಸ್ವಭಾವದೋಷ ಮತ್ತು ಅಹಂಗಳಲ್ಲಿ ಬದಲಾವಣೆಗಳಾಗುತ್ತಿರುವುದನ್ನು ಅನುಭವಿಸಬೇಕು.

‘ಅಂತರ್ಮನಸ್ಸಿಗೆ ನೀಡುತ್ತಿರುವ ಸ್ವಯಂಸೂಚನೆ’ಯು ಯೋಗ್ಯವಿದೆಯೇ ಎಂದು ಹೇಗೆ ಗುರುತಿಸುವುದು ?

ನಾವು ನೀಡುತ್ತಿರುವ ಸ್ವಯಂಸೂಚನೆಯು ಯೋಗ್ಯವಿದ್ದರೆ, ಕೆಲವು ಸಮಯದ ನಂತರ ಮನಸ್ಸಿಗೆ ಶಾಂತವೆನಿಸುತ್ತದೆ ಮತ್ತು ಹಗುರವೆನಿಸುತ್ತದೆ. ಹಾಗೆಯೇ ಸ್ವಯಂಸೂಚನೆ ನೀಡಿದಂತೆ ವಿಚಾರ ಮತ್ತು ಕೃತಿಗಳಲ್ಲಿ ಬದಲಾವಣೆಯು ಕಂಡು ಬರುತ್ತದೆ.

ಸಾಧಕರೇ, ಸ್ವಯಂಸೂಚನೆ ಪದ್ಧತಿಯ ಈ ಮಾಹಿತಿಯನ್ನು ತಮ್ಮಲ್ಲಿ ಬರೆದಿಟ್ಟುಕೊಳ್ಳಿರಿ ಅಥವಾ ಈ ಲೇಖನವನ್ನು ಸಂಗ್ರಹಿಸಿಟ್ಟುಕೊಳ್ಳಿರಿ !

ಎಲ್ಲ ಸಾಧಕರು ಸ್ವಯಂಸೂಚನೆ ಪದ್ಧತಿಯ ಈ ಮಾಹಿತಿಯನ್ನು ತಮ್ಮ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿರಿ ಹಾಗೆಯೇ ಮಧ್ಯೆ ಮಧ್ಯೆ ಈ ಅಂಶಗಳನ್ನು ಓದಬೇಕು. ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸಾಧಕರೂ (ವರದಿ ಸೇವಕರೂ) ಮೇಲಿನ ಅಂಶಗಳನ್ನು ತಮ್ಮಲ್ಲಿ ಬರೆದಿಟ್ಟುಕೊಳ್ಳಬೇಕು ಅಥವಾ ಈ ಲೇಖನವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇದರಿಂದ ಇತರರಿಗೆ ಸಹಾಯ ಮಾಡುವಾಗ ಅದರ ಲಾಭವಾಗುವುದು.

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೧೨.೨೦೧೭)

Leave a Comment