ಮನುಕುಲದ ಹಿತಕ್ಕಾಗಿ ವಿಶ್ವದಾದ್ಯಂತ ಹಿಂದೂ ಧರ್ಮವನ್ನು ಪ್ರಸಾರ ಮಾಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ

ಅಖಿಲ ಮನುಕುಲಕ್ಕಾಗಿ ಕಾರ್ಯ

‘ಕೇವಲ ಭಾರತದಲ್ಲಿ ಮಾತ್ರ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದರೆ ಧರ್ಮ ಸಂಸ್ಥಾಪನೆಯಾಗುವುದಿಲ್ಲ, ಬದಲಾಗಿ ಮನುಕುಲದ ಹಿತಕ್ಕಾಗಿ ವಿಶ್ವದಾದ್ಯಂತ ಹಿಂದೂ ಧರ್ಮವನ್ನು ಪ್ರಸ್ಥಾಪಿಸುವುದು ಆವಶ್ಯಕವಾಗಿದೆ’ ಎಂಬ ವಿಚಾರವನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಂಡಿಸಿದರು. ೧೯೯೫ ರಲ್ಲಿ ಅವರಿಗೆ ಪ.ಪೂ. ಭಕ್ತರಾಜ ಮಹಾರಾಜರು ‘ಜಗತ್ತಿನಾದ್ಯಂತ ಅಧ್ಯಾತ್ಮ ಪ್ರಸಾರ ಮಾಡಿ’ ಎಂದು ಆಶೀರ್ವದಿಸಿದ್ದರು. ಅದನ್ನು ಅನುಸರಿಸಿ ಜಗತ್ತಿನೆಲ್ಲೆಡೆಯ ಮನುಕುಲದ ಹಿತಕ್ಕಾಗಿ ವಿವಿಧ ಮಾಧ್ಯಮಗಳ ಮೂಲಕ ಹಿಂದೂ ಧರ್ಮ, ಅಧ್ಯಾತ್ಮಶಾಸ್ತ್ರ, ಸಾಧನೆ ಇತ್ಯಾದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ.

ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್

ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯದಿಂದ ಪ್ರೇರಿತರಾಗಿ ಆಸ್ಟ್ರೇಲಿಯಾ, ಯುರೋಪ್ ಮತ್ತು ಅಮೇರಿಕಾ ಖಂಡಗಳಲ್ಲಿ ‘ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಎಂಬ ಸಂಸ್ಥೆಯು ಸ್ಥಾಪನೆಗೊಂಡಿದೆ. ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಆಧ್ಯಾತ್ಮಿಕ ಸಂಶೋಧನೆಗಳು ಹಿಂದಿ, ಫಾರ್ಸಿ, ಆಂಗ್ಲ, ಚೈನೀಸ್, ಫ್ರೆಂಚ್, ಜರ್ಮನ್, ಡಚ್, ಸ್ಪ್ಯಾನಿಶ್, ಕ್ರೋಯೇಶಿಯನ್, ಸರ್ಬಿಯನ್, ರಷ್ಯನ್, ಸ್ಲೋವೇನಿಯನ್, ಮಲೇಷ್ಯನ್, ಹಂಗೇರಿಯನ್, ಪೋರ್ಚುಗೀಸ್, ಇಂಡೋನೇಷ್ಯನ್, ಮ್ಯಾಸೆಡೋನಿಯನ್, ಬಲ್ಗೇರಿಯನ್ ಈ ೧೮ ಭಾಷೆಗಳಲ್ಲಿ SSRF.org ಎಂಬ ಜಾಲತಾಣದಲ್ಲಿ ಲಭ್ಯವಿದ್ದು ಪ್ರತೀತಿಂಗಳು ೧೦ ಲಕ್ಷಕ್ಕೂ ಹೆಚ್ಚು ವಾಚಕರನ್ನು ಹೊಂದಿದೆ. ಈ ಸಂಸ್ಥೆಯ ಮಾಧ್ಯಮದಿಂದ ನೂರಾರು ವಿದೇಶಿ ನಾಗರಿಕರು ಹಿಂದೂ ಧರ್ಮಕ್ಕನುಸಾರ ಸಾಧನೆ ಮಾಡತೊಡಗಿದ್ದಾರೆ.

ಫೋರಮ್ ಫಾರ್ ಹಿಂದೂ ಅವೇಕನಿಂಗ್

ಪರಾತ್ಪರ ಗುರು ಡಾ. ಆಠವಲೆಯವರ ಧರ್ಮಜಾಗೃತಿಯ ಕಾರ್ಯದಿಂದ ಪ್ರೇರಿತರಾಗಿ ಅಮೇರಿಕಾದ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಲು ‘ಫೋರಮ್ ಫಾರ್ ಹಿಂದೂ ಅವೇಕನಿಂಗ್’ ಎಂಬ ಸಂಸ್ಥೆ ಸ್ಥಾಪನೆಯಾಗಿದೆ. ForumForHinduAwakening.org ಎಂಬ ಜಾಲತಾಣದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಆಪತ್ಕಾಲದಲ್ಲಿ ಸಂಜೀವನಿಯಾಗಲಿರುವ ಗ್ರಂಥಗಳ ಸಂಕಲನ

ಮುಂಬರುವ ಕಾಲದಲ್ಲಿ ಬಂದೆರಗಲಿರುವ ಮಹಾಯುದ್ಧ, ಪ್ರವಾಹ, ಭೂಕಂಪ ಮುಂತಾದ ಪ್ರಸಂಗಗಳಲ್ಲಿ ವೈದ್ಯರು, ಔಷಧಿ ಇತ್ಯಾದಿ ಲಭ್ಯವಾಗಲು ಕಠಿಣವಾಗುವುದು. ಇಂತಹ ಆಪತ್ತುಗಳಿಂದ ಮನುಕುಲದ ರಕ್ಷಣೆಯಾಗಲು, ಹಾಗೆಯೇ ಬದುಕು ಸಹನೀಯವಾಗಲು ಆಪತ್ಕಾಲದಲ್ಲಿನ ಉಪಚಾರಗಳನ್ನು ಕಲಿಸುವ ಗ್ರಂಥಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿದ್ದಾರೆ. ಈ ಉಪಚಾರಗಳಿಂದ ಅಖಿಲ ಮನುಕುಲಕ್ಕೆ ಲಾಭವಾಗಬೇಕೆಂದು ಮುಂಬರುವ ೨-೩ ವರ್ಷಗಳಲ್ಲಿ ಈ ಗ್ರಂಥಗಳಲ್ಲಿನ ಬರಹವನ್ನು ವಿದೇಶಿ ಭಾಷೆಗಳಲ್ಲಿ ಅನುವಾದಿಸಿ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು.

(ಮಾಹಿತಿಗಾಗಿ ಓದಿ ಸನಾತನದ ‘ಆಪತ್ಕಾಲದಲ್ಲಿನ ಉಪಚಾರಗಳು ಗ್ರಂಥಮಾಲಿಕೆ)

ಪ್ರಾಚೀನ ಹಿಂದೂ ಆರೋಗ್ಯಶಾಸ್ತ್ರವಾದ ‘ಆಯುರ್ವೇದದ ಪ್ರಸಾರ

ವ್ಯಕ್ತಿಯ ರೋಗಗಳ ಹಿಂದೆ ಆಧಿಭೌತಿಕ (ಉದಾ. ಶಾರೀರಿಕ ಮತ್ತು ಮಾನಸಿಕ), ಆಧಿದೈವಿಕ (ಉದಾ. ದೈವೀ ಕೋಪ) ಮತ್ತು ಆಧ್ಯಾತ್ಮಿಕ (ಉದಾ. ಪ್ರಾರಬ್ಧ, ಕೆಟ್ಟ ಶಕ್ತಿ) ಕಾರಣಗಳಿರುತ್ತವೆ. ಕೇವಲ ಆಯುರ್ವೇದದಲ್ಲಿ ಮಾತ್ರ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಈ ಮೂರೂ ಸ್ತರದ ಚಿಕಿತ್ಸೆಗಳ ವಿಚಾರ ಮಾಡಲಾಗಿದೆ; ಆದ್ದರಿಂದ ಆಯುರ್ವೇದದಿಂದ ಎಲ್ಲ ರೋಗಗಳು ಮೂಲಸಹಿತ ನಾಶವಾಗುತ್ತವೆ. ಈ ಆಯುರ್ವೇದೀಯ ಚಿಕಿತ್ಸೆಯಿಂದ ಮಾನವಜಾತಿಗೆ ಲಾಭವಾಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಆಯುರ್ವೇದಾಚಾರ್ಯರು ಸಂಕಲನ ಮಾಡಿದ ಆಯುರ್ವೇದೀಯ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ.

Leave a Comment