ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನೆಗೆ ಜಗತ್ತಿನಾದ್ಯಂತ ದೊರೆಯುತ್ತಿರುವ ಪ್ರಸಿದ್ಧಿ ಮತ್ತು ಬೆಂಬಲ !

              ಶ್ರೀ. ಶಾನ್ ಕ್ಲಾರ್ಕ್

ವಿವಿಧ ವಿಷಯಗಳ ಬಗ್ಗೆ ಮಾಡಿದ ಸಂಶೋಧನೆಯಿಂದ ಸಮಾಜಕ್ಕೆ ಲಾಭವಾಗಬೇಕು, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನ ಮಾಧ್ಯಮಗಳ ಮೂಲಕ ಅದನ್ನು ಸಮಾಜದ ತನಕ ತಲುಪಿಸುತ್ತಾರೆ. ವಿವಿಧ ಮಾಧ್ಯಮಗಳು ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನೆಗೆ ನೀಡಿದ ಪ್ರಸಿದ್ಧಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಗಣ್ಯರು ತೆಗೆದ ಗೌರವೋದ್ಗಾರ ಇವೆಲ್ಲ ಈ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯಕ್ಕೆ ಎಲ್ಲ ಸ್ತರದಲ್ಲಿ ದೊರಕಿದ ರಶೀದಿಯನ್ನೇ ತೋರಿಸುತ್ತದೆ. ಸಂಶೋಧನೆಯ ಪ್ರಸಿದ್ಧಿಯು ಜನಪ್ರಿಯತೆಗಾಗಿ ಮಾಡಿರದೇ ಅಲೌಕಿಕ ಜ್ಞಾನದ ಮೂಲಕ ಸಮಾಜದ ಕಲ್ಯಾಣಕ್ಕಾಗಿ ಮಾಡಿದ ಪ್ರಯತ್ನವಿದೆ.

೧. ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿ ಪ್ರಕಾಶನ

ವಿವಿಧ ಉಪಕರಣಗಳ ಮಾಧ್ಯಮದಿಂದ ಮಾಡಿದ ಪ್ರಯೋಗಗಳಲ್ಲಿ ನಮೂದಿಸಿದ ಮಾಪನಗಳ ವಿಶ್ಲೇಷಣೆ ಮಾಡಿ ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ತಯಾರಿಸಲಾಗುತ್ತವೆ. ಈ ವಿಶ್ಲೇಷಣೆ ಮಾಡುವಾಗ ಸೂಕ್ಷ್ಮ-ಪರೀಕ್ಷಣೆಯನ್ನೂ ಜೊತೆಗೂಡಿಸ ಲಾಗುತ್ತದೆ. ಈ ಲೇಖನಗಳನ್ನು ವಿವಿಧ ಭಾಷೆಗಳಲ್ಲಿನ ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗುತ್ತದೆ.

೨. ಸ್ಪಿರಿಚ್ಯುವಲ್ ಸೈನ್ಸ್ ರೀಸರ್ಚ್ ಫೌಂಡೇಶನ್ (ಎಸ್.ಎಸ್.ಆರ್.ಎಫ್.) ಈ ಜಾಲತಾಣದಿಂದ ಪ್ರಸಿದ್ಧಿ

ಸ್ಪಿರಿಚ್ಯುವಲ್ ಸೈನ್ಸ್ ರೀಸರ್ಚ್ ಫೌಂಡೇಶನ್ (ಎಸ್.ಎಸ್.ಆರ್.ಎಫ್.) ಇದು ಆಸ್ಟ್ರೇಲಿಯಾ, ಯೂರೋಪ್ ಮತ್ತು ಅಮೆರಿಕಾಗಳಲ್ಲಿ ನೋಂದಣೀಕೃತವಾದ ಸ್ವಯಂಸೇವಿ ಸಂಸ್ಥೆಯಾಗಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಾಡಲಾಗಿದ್ದ ಸಂಶೋಧನೆಯನ್ನು ಎಸ್.ಎಸ್.ಆರ್.ಎಫ್. ನ ಜಾಲತಾಣದಲ್ಲಿ ವಿವರವಾಗಿ ಮಂಡಿಸಲಾಗಿದೆ. ಈ ಜಾಲತಾಣದಲ್ಲಿನ ಈ ಮಾಹಿತಿಯು ಹಿಂದಿ ಮತ್ತು ತಮಿಳು ಈ ಭಾರತೀಯ ಭಾಷೆಗಳೊಂದಿಗೆ ನೇಪಾಳಿ, ಆಂಗ್ಲ, ಫ್ರೆಂಚ್, ಜರ್ಮನ್, ಇಟಾಲಿಯನ್, ರಶಿಯನ್, ಸ್ಲೊವೆನಿಯನ್, ರೊಮೆನಿಯನ್, ವಿಯೆತ್ನಾಮಿಜ್, ಕ್ರೊಎಶಿಯನ್, ಸ್ಪ್ಯಾನಿಶ್, ಪೊರ್ತುಗೀಸ್, ಸರ್ಬಿಯನ್, ಡಚ್, ಚೈನೀಸ್, ಮ್ಯಾಸಿಟೊನಿಯನ್, ಬಲ್ಗೇರಿಯನ್, ಮಲಯ (ಮಲೇಶಿಯನ್) ಇಂಡೋನೆಶಿಯನ್ ಮತ್ತು ಹಂಗೇರಿಯನ್ ಎಂಬ ೨೦ ವಿದೇಶಿ ಭಾಷೆಗಳಲ್ಲಿಯೂ ಪ್ರಕಾಶನ ಮಾಡಲಾಗುತ್ತಿದೆ.

೩. ಧ್ವನಿಚಿತ್ರಮುದ್ರಿಕೆಗಳ (ವಿಡಿಯೋಗಳ) ಮೂಲಕ ಸಂಶೋಧನೆಯ ಪ್ರಸಾರ

ಈ ಸಂಶೋಧನೆಯನ್ನು ಸಮಾಜದ ತನಕ ತಲುಪಿಸಲೆಂದು ಸುಲಭ ಭಾಷೆಗಳಲ್ಲಿ ವಿಡಿಯೋಗಳನ್ನು ನಿರ್ಮಿಸಲಾಗುತ್ತವೆ. ಈ ವಿಡಿಯೋ ಗಳನ್ನು ಸನಾತನ, ಎಸ್.ಎಸ್.ಆರ್.ಎಫ್., ಹಿಂದೂ ಜನಜಾಗೃತಿ ಸಮಿತಿ ಇವುಗಳ ಜಾಲತಾಣಗಳಲ್ಲಿ ಹಾಗೂ ವಾಟ್ಸ್‌ಆಪ್‌ಗಳಂತಹ ಸಾಮಾಜಿಕ ಜಾಲತಾಣಗಳಿಂದ (ಸೋಶಿಯಲ್ ಮೀಡಿಯಾ) ಪ್ರಸಾರ ಮಾಡಲಾಗುತ್ತದೆ.

೪. ದೂರಚಿತ್ರವಾಹಿನಿಗಳಲ್ಲಿ ಪ್ರಸಾರ

ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಮಾಡಿದ ಸಂಶೋಧನೆಗೆ ‘ಶ್ರೀಶಂಕರ ಮತ್ತು ‘ಸುದರ್ಶನ ಈ ಅಂತರರಾಷ್ಟ್ರೀಯ ದೂರಚಿತ್ರವಾಹಿನಿಗಳಲ್ಲಿ ಪ್ರಸಿದ್ಧಿ ದೊರಕಿದೆ ಹಾಗೂ ಅನೇಕ ಸ್ಥಳೀಯ ಕೇಬಲ್‌ಚಾಲಕರಿಂದ ಈ ಸಂಶೋಧನೆಗೆ ಅಂತರರಾಜ್ಯ ಪ್ರಸಿದ್ಧಿ ದೊರಕಿದೆ.

೫. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳ ಮೂಲಕ ಈ ಸಂಶೋಧನೆಯನ್ನು  ಜಗತ್ತಿನಾದ್ಯಂತ ಸಂಶೋಧಕರ ವರೆಗೆ ತಲುಪಿಸುವುದು

ಈ ಸಂಶೋಧನೆಯ ಮೇಲಾಧಾರಿತ ಪರಾತ್ಪರ ಗುರು ಡಾ. ಆಠವಲೆಯವರು ಬರೆದ ಶೋಧಪ್ರಬಂಧವನ್ನು ವಿವಿಧ ವೈಜ್ಞಾನಿಕ ಪರಿಷತ್ತುಗಳಲ್ಲಿ ಮಂಡಿಸಲಾಗುತ್ತವೆ. ವೈಜ್ಞಾನಿಕ ಪರಿಷತ್ತುಗಳಲ್ಲಿ ಮಂಡಿಸಲಾದ ವಿಷಯಗಳಲ್ಲಿನ ವೈವಿಧ್ಯವು ಗಮನಕ್ಕೆ ಬರಲೆಂದು ಅದರಲ್ಲಿಯ ಕೆಲವು ವಿಷಯಗಳನ್ನು ಉದಾಹರಣೆಗೆಂದು ಕೊಡಲಾಗುತ್ತಿದೆ.
ಅ. ಇತರ ಭಾಷೆಗಳ ತುಲನೆಯಲ್ಲಿ ಸಂಸ್ಕೃತ ಭಾಷೆಯ ಸೂಕ್ಷ್ಮ ಪರಿಣಾಮ
ಆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಸಂಗೀತ ಮತ್ತು ನೃತ್ಯ
ಇ. ಆಧ್ಯಾತ್ಮಿಕದೃಷ್ಟಿಯಲ್ಲಿ ಹೆಚ್ಚು ಸಾತ್ತ್ವಿಕ ಚಿತ್ರಕಲೆ
ಈ. ರೋಗಗಳ ಕಾರಣಗಳು, ಚಿಕಿತ್ಸೆ ಮತ್ತು ಪ್ರತಿಬಂಧ ಇವುಗಳ ಕುರಿತು ವಿವರವಾದ ದೃಷ್ಟಿಕೋನ
ಉ. ಧಾರ್ಮಿಕ ಪ್ರತೀಕಗಳು ಮತ್ತು ಅವುಗಳ ಸೂಕ್ಷ್ಮ-ಪರಿಣಾಮಗಳ ಬಗೆಗಿನ ಅಧ್ಯಾತ್ಮಶಾಸ್ತ್ರ
ಊ. ವ್ಯಸನಾಧೀನತೆಯ ಹಿಂದಿನ ಆಧ್ಯಾತ್ಮಿಕ ಕಾರಣಗಳು ಮತ್ತು ಅದರ ಮೇಲಿನ ಉಪಾಯ
ಎ. ಲೇಖಕನ ಆಧ್ಯಾತ್ಮಿಕ ಮಟ್ಟ ಮತ್ತು ಆಧ್ಯಾತ್ಮಿಕ ಸ್ಥಿತಿ ಇವುಗಳಿಂದ ಅವನ ವಾಙ್ಮಯದ ಮೇಲಾಗುವ ಪರಿಣಾಮ
ಐ. ಅಂತಿಮಸಂಸ್ಕಾರಗಳಲ್ಲಿ ಮೃತ ದೇಹ ವನ್ನು ಸುಡುವುದು ಮತ್ತು ಅದನ್ನು ಹೂಳುವುದು ಇವುಗಳ ಆಧ್ಯಾತ್ಮಿಕ ಸ್ತರದಲ್ಲಿನ ತುಲನಾತ್ಮಕ ಪರಿಣಾಮ
ಒ. ಪಾರಂಪರಿಕ ಭಾರತೀಯ ಮತ್ತು ಆಧುನಿಕ ರೂಢಿ-ಪರಂಪರೆಗಳ ತುಲನೆ

ಏಪ್ರಿಲ್ ೨೦೧೯ ಕೊನೆಯಲ್ಲಿ ೧೧ ರಾಷ್ಟ್ರೀಯ ಮತ್ತು ೩೫ ಅಂತರರಾಷ್ಟ್ರೀಯ ಹೀಗೆ ಒಟ್ಟು ೪೬ ವೈಜ್ಞಾನಿಕ ಪರಿಷತ್ತುಗಳಲ್ಲಿ ಈ ಸಂಶೋಧನೆಯನ್ನು ಮಂಡಿಸಲಾಗಿದೆ. ಎಲ್ಲೆಡೆ ಈ ಸಂಶೋಧನೆಗೆ ಅತ್ಯುತ್ತಮ ಬೆಂಬಲ ದೊರಕುತ್ತಿದೆ.  ಅಮೇರಿಕಾದ ದಕ್ಷಿಣ ಕೆರೊಲಿನಾದಲ್ಲಿ ನಡೆದ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದ ‘ಸಮಾಜಸೇವೆಯಿಂದಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆಯೇ ?, ಅದೇ ರೀತಿ ಓಡಿಶಾದ ಪುರಿ ಯಲ್ಲಿ ನೆರವೇರಿದ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದ ನಿಜವಾದ ನೇತೃತ್ವ ವನ್ನು ಉಚ್ಚ ಆಧ್ಯಾತ್ಮಿಕ ಮಟ್ಟವುಳ್ಳ ವ್ಯಕ್ತಿಯೇ ಮಾಡಲು ಸಾಧ್ಯ ! ಎಂಬ ಶೋಧಪ್ರಬಂಧಕ್ಕೆ ಸರ್ವೋತ್ಕೃಷ್ಟ ಶೋಧಪ್ರಬಂಧ, ಎಂದು ಘೋಷಿಸಲಾಯಿತು.

– ಶ್ರೀ. ಶಾನ್ ಕ್ಲಾರ್ಕ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. (೨.೫.೨೦೧೯)

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಶೋಧಪ್ರಬಂಧಗಳ ಮಂಡಣೆ ಮತ್ತು ಪಡೆದ ಗೌರವ !

ಹಾಂಗಕಾಂಗ್ ಇಲ್ಲಿಯ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಆಯೋಜಕರಿಂದ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿರುವಾಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪೂ. ರೆನ್ಡಿ ಇಕರಾನ್ತಿಯೊ (ಬಲಗಡೆ)

ಪೋಲಂಡದಲ್ಲಿ ನಿದ್ರೆಯಲ್ಲಿನ ಪಾರ್ಶ್ವವಾಯು (Sleep Paralysis) ಕುರಿತಾದ ಶೋಧಪ್ರಬಂಧ ಮಂಡಿಸುತ್ತಿರುವ ಸೌ. ಡ್ರಾಗಾನಾ ಕಿಸ್ಲೊವ್ಹಸ್ಕಿ

ಅಮೇರಿಕಾದ ದಕ್ಷಿಣ ಕೆರೊಲಿನಾದಲ್ಲಿ ನಡೆದ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದ ‘ಸಮಾಜಸೇವೆಯಿಂದಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆಯೇ ?’, ಎಂಬ ಶೋಧಪ್ರಬಂಧಕ್ಕೆ ಸರ್ವೋತ್ಕೃಷ್ಟ ಶೋಧಪ್ರಬಂಧ ಎಂಬ ಪ್ರಶಸ್ತಿಪತ್ರಕ

ಓಡಿಶಾದ ಪುರಿಯಲ್ಲಿ ನೆರವೇರಿದ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದ ನಿಜವಾದ ನೇತೃತ್ವ ವನ್ನು ಉಚ್ಚ ಆಧ್ಯಾತ್ಮಿಕ ಮಟ್ಟವುಳ್ಳ ವ್ಯಕ್ತಿಯೇ ಮಾಡಲು ಸಾಧ್ಯ ! ಎಂಬ ಶೋಧಪ್ರಬಂಧಕ್ಕೆ ಸರ್ವೋತ್ಕೃಷ್ಟ ಶೋಧಪ್ರಬಂಧ ಎಂಬ ಪ್ರಶಸ್ತಿ

Leave a Comment