ಸೂಕ್ಷ್ಮ ಪರೀಕ್ಷಣೆಯ ಮೂಲಕ ಮಾಡಿದ ಸಂಶೋಧನೆಗೆ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ನೀಡಿದ ಸಂಶೋಧನೆಯ ಜೊತೆ !

ಸದ್ಗುರು (ಸೌ.) ಅಂಜಲಿ ಗಾಡಗೀಳ

ಸೂಕ್ಷ್ಮದಿಂದ ಶೇ. ೧೦೦ ರಷ್ಟು ಸತ್ಯ ಮಾಹಿತಿ ಸಿಗುವ ಕ್ಷಮತೆ ಇರುವಾಗ ಪರಾತ್ಪರ ಗುರು ಡಾ. ಆಠವಲೆ ಇವರು ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದಲೂ ಸಂಶೋಧನೆ ಮಾಡಿದರು. ಇದರ ಕಾರಣವೆಂದರೆ ಈಗಿನ ಕಾಲದಲ್ಲಿ ಅನೇಕ ಜನರಲ್ಲಿ ಸಂತರ ಅನುಭವಸಿದ್ಧ ಜ್ಞಾನಕ್ಕಿಂತ ವೈಜ್ಞಾನಿಕ ಉಪಕರಣಗಳ ಮೂಲಕ ಪಡೆದ ಮಾಹಿತಿಯ ಬಗ್ಗೆ ಹೆಚ್ಚು ವಿಶ್ವಾಸವಿರುತ್ತದೆ. ಆರಂಭದಲ್ಲಿ ಸನಾತನದ ಬಳಿ ಒಂದೂ ವೈಜ್ಞಾನಿಕ ಉಪಕರಣಗಳಿರಲಿಲ್ಲ, ಆದರೂ ಆಶ್ರಮಕ್ಕೆ ಭೇಟಿ ನೀಡಲು ಬಂದ ವ್ಯಕ್ತಿಗಳ ಬಳಿಯಿರುವ ಉಪಕರಣಗಳ ಮಾಧ್ಯಮದಿಂದ ಅವರು ಈ ಸಂಶೋಧನೆಯನ್ನು ಪ್ರಾರಂಭಿಸಿದರು.

೧. ಸಾಧನೆಯ ಅಭ್ಯಾಸವರ್ಗಕ್ಕೆ ಬಂದ ಜಿಜ್ಞಾಸುಗಳ ಬಳಿಯಿರುವ ಉಪಕರಣವನ್ನು ಸಂಶೋಧನೆಗಾಗಿ ಸುನಿಯೋಜಿತವಾಗಿ ಬಳಕೆ ಮಾಡುವುದು

2008 ನೇ ಇಸವಿಯಲ್ಲಿ  ಎಸ್.ಎಸ್.ಆರ್.ಎಫ್.ನ ವಾರ್ಷಿಕ ಸಾಧನಾ ಅಭ್ಯಾಸವರ್ಗಕ್ಕಾಗಿ ಬೋಸ್ನಿಯಾದಿಂದ ಡಾ. ದಿನಾ ಮಾನ್ಕೊ ಇವರು ಬಂದಿದ್ದರು. ಅವರು ವೃತ್ತಿಯಲ್ಲಿ ಹೋಮಿಯೋಪಥಿಕ್ ಡಾಕ್ಟರ್ ಆಗಿದ್ದಾರೆ. ಅವರ ಸಂಚಾರಿಗಣಕಯಂತ್ರದಲ್ಲಿ ಅವರು ವೈದ್ಯಕೀಯ ವೃತ್ತಿಗಾಗಿ ಬಳಸುತ್ತಿರುವ ‘ಇಲೆಕ್ಟ್ರೊಸೊಮೆಟೊಗ್ರಾಫಿಕ್ ಸ್ಕ್ಯಾನಿಂಗ್ ತಂತ್ರಾಂಶ’ ಇತ್ತು. ಈ ತಂತ್ರಾಂಶದ ಮಾಧ್ಯಮದಿಂದ ವ್ಯಕ್ತಿಯ ಕುಂಡಲಿನಿ ಚಕ್ರಗಳ ಕಾರ್ಯದ ಬಗ್ಗೆ ಮಾಹಿತಿ ಸಿಗುತ್ತದೆ, ಎಂದು ತಿಳಿದನಂತರ ಪರಾತ್ಪರ ಗುರು ಡಾ. ಆಠವಲೆಯವರು ಆ ಕುರಿತು ಅನೇಕ ಪ್ರಯೋಗಗಳನ್ನು ಮಾಡಿಸಿಕೊಂಡರು. ಆ ಸಾಧಕಿಯು ಆಶ್ರಮದಲ್ಲಿ ಸುಮಾರು ೧ ತಿಂಗಳು ವಾಸ್ತವ್ಯ ಮಾಡಿದರು. ಆ ಅವಧಿಯಲ್ಲಿ ಈ ತಂತ್ರಾಶದ ಅಕ್ಷರಶಃ ದಿನವಿಡಿ ಉಪಯೋಗವಾಗಲು ಕಟ್ಟುನಿಟ್ಟಾದ ಆಯೋಜನೆ ಮಾಡಲಾಯಿತು. ಆಚಾರಧರ್ಮ, ಕೆಟ್ಟ ಶಕ್ತಿಗಳ ತೊಂದರೆಯ ಮೇಲೆ ಉಪಾಯ ಇಂತಹ ಅನೇಕ ವಿಷಯಗಳ ಮೇಲೆ ಎಡಬಿಡದೇ ವಿವಿಧ ಪ್ರಯೋಗಗಳನ್ನು ಮಾಡಿ ಸಾವಿರಾರು ಎಣಿಕೆಗಳ ನೋಂದಣಿ (ರೀಡಿಂಗ್) ಮಾಡಲಾಯಿತು. ಅವರು ಮುಂದಿನ ವರ್ಷವೂ ೧ ತಿಂಗಳಿಗಾಗಿ ಬರುವರು, ಎಂದು ತಿಳಿದಾಗ. ಆ ಅವಧಿಯಲ್ಲಿ ಆ ತಂತ್ರಾಂಶದ ಆಧಾರದಿಂದ ಆಧ್ಯಾತ್ಮಿಕ ಸಂಶೋಧನೆಯ ಹೆಚ್ಚೆಚ್ಚು ಸಂಖ್ಯಾತ್ಮಕ ಮತ್ತು ಗುಣಾತ್ಮಕ ಫಲನಿಷ್ಪತ್ತಿ ಹೇಗೆ ಪಡೆಯಬಹುದು, ಎಂಬುವುದರ ಕುರಿತು ಅವರು ನಿಯೋಜನೆ ಮಾಡಿಸಿಕೊಂಡು ಅದರ ಪ್ರತ್ಯಕ್ಷ ಕಾರ್ಯಾಚರಣೆಯನ್ನೂ ಮಾಡಿಸಿಕೊಂಡರು.

೨. ವೈಜ್ಞಾನಿಕ ಉಪಕರಣಗಳನ್ನು ತೋರಿಸಲು ಬಂದ ಓರ್ವ ವ್ಯಾಪಾರಿಯ ಉಪಕರಣಗಳಿಂದ ಒಂದು ದಿನದಲ್ಲಿ ಹಲವಾರು ಸಂಶೋಧನೆಗನ್ನು ಮಾಡುವುದು

2008 ನೇ ಇಸವಿಯಲ್ಲಿ ಶ್ರೀ. ಥಾರ್ನಟನ್ ಸ್ಟ್ರೀಟರ್ ಹೆಸರಿನ ಮೂಲ ಇಂಗ್ಲೆಂಡಿನವರಾದ, ಪುಣೆಯಲ್ಲಿ ಒಂದು ಸಂಶೋಧನಾತ್ಮಕ ಉಪಕರಣಗಳ ವ್ಯಾಪಾರ ಮಾಡುವ ಉದ್ಯಮಿಯು ಆಶ್ರಮಕ್ಕೆ ತಮ್ಮ ಉಪಕರಣಗಳನ್ನು ತೋರಿಸಲು ಬರುವವರಿದ್ದರು. ಆ ಸಮಯದಲ್ಲಿ ಅವರು ‘ಇಲೆಕ್ಟ್ರೊಸೊಮೆಟೊಗ್ರಾಫಿಕ್ ಸ್ಕ್ಯಾನಿಂಗ್’, ‘ಇಲೆಕ್ಟ್ರೊಸೊಮೆಟೊಗ್ರಾಫಿಕ ಮೆಥಡ್’, ‘ಪಾಲಿಕಾಂಟ್ರಾಸ್ಟ ಇಂಟರಫೆರನ್ಸ ಫೊಟೊಗ್ರಾಫಿ’ ಮತ್ತು ‘ಗ್ಯಾಸ್ ಡಿಸ್ಚಾರ್ಜ್ ವಿಜುವಲೈಸೇಶನ್’, ಎಂಬ ಕೆಲವು ಆಧುನಿಕ ವೈಜ್ಞಾನಿಕ ಉಪಕರಣಗಳೊಂದಿಗೆ ಬರುವರಿದ್ದರು. ಈ ಉಪಕರಣಗಳ ಬಗ್ಗೆ ಅಥವಾ ಅವುಗಳನ್ನು ಉಪಯೋಗಿಸಿ ನಿಜವಾಗಿ ಯಾವ ಸಂಶೋಧನೆ ಮಾಡಬಹುದು, ಎಂದು ನಮಗೆ ಯಾವುದೇ ಖಚಿತ ಮಾಹಿತಿ ಗೊತ್ತಿರಲಿಲ್ಲ, ಆದರೂ ಪರಾತ್ಪರ ಗುರು ಡಾ. ಆಠವಲೆ ಇವರು, ‘ಸಾಧಕ ಮತ್ತು ಒಳ್ಳೆಯ ಹಾಗೂ ಕೆಟ್ಟ ಶಕ್ತಿಗಳ ಪರಿಣಾಮ ಆದ ವಸ್ತು ಇವುಗಳ ಮೇಲೆ ನಾವು ಯಾವ ಯಾವ ಪ್ರಯೋಗ ಮಾಡಬಹುದು’, ಎಂಬುದರ ನಮಗೆ ವಿಸ್ತೃತ ಪಟ್ಟಿಯನ್ನು ಸಿದ್ಧಪಡಿಸಲು ಹೇಳಿದರು. ಅದಕ್ಕನುಸಾರ ಮರುದಿನ ಶ್ರೀ. ಸ್ಟೀಟರ್ ಇವರು ಬಂದನಂತರ ಆಯೋಜಿಸಿದ ಎಲ್ಲ ಸಂಶೋಧನೆಗಳನ್ನು ಒಂದೇ ದಿನದಲ್ಲಿ ಮಾಡಲಾಯಿತು.

ಮೇಲಿನ ಉದಾಹರಣೆಯಿಂದ ಪರಾತ್ಪರ ಗುರು ಡಾ. ಆಠವಲೆ ಇವರ ಮಾನವಕಲ್ಯಾಣದ ತಳಮಳವು ಕಂಡುಬರುತ್ತದೆ. ಈ ತಳಮಳದಿಂದಾಗಿಯೇ ಕೈಯಲ್ಲಿ ಅವಶ್ಯಕವಿರುವ ಸಾಧನ ಸಂಪತ್ತು ಇಲ್ಲದಿರುವಾಗಲೂ ಲಭ್ಯವಿರುವ ಪ್ರತಿಯೊಂದು ಅವಕಾಶದ ಯೋಗ್ಯ ಆಯೋಜನೆ ಮತ್ತು ಕೃತಿ ಇವುಗಳ ಆಧಾರದಲ್ಲಿ ಜನಕಲ್ಯಾಣಕ್ಕಾಗಿ ಹೇಗೆ ಉಪಯೋಗಿಸಬಹುದು, ಎಂಬ ಆದರ್ಶ ಪರಿಪಾಠವನ್ನೇ ಅವರು ಹಾಕಿಕೊಟ್ಟರು !

– (ಸದ್ಗುರು) ಸೌ. ಅಂಜಲಿ ಗಾಡಗೀಳ, ಗೋವಾ

Leave a Comment