ಸೂಕ್ಷ್ಮ ಜಗತ್ತಿನ ಘಟನಾವಳಿಗಳನ್ನು ಜಗತ್ತಿಗೆ ಪರಿಚಯಿಸಿ ಅದರ ಬಗ್ಗೆ ಆಧ್ಯಾತ್ಮಿಕ ಸಂಶೋಧನೆ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಸಾಧನೆಯ ಮೂಲಕ ದೊರಕುವ ಸೂಕ್ಷ್ಮ ಜ್ಞಾನದ ಆಧಾರದಲ್ಲಿ ಮಾಡಿದ ಸಂಶೋಧನೆಯು ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನಾ ಕಾರ್ಯದ ಅಡಿಪಾಯವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರು ಕಾಲದ ಆಚೆಗಿನದ್ದನ್ನು ತಿಳಿಯುವ ಕ್ಷಮತೆಯನ್ನು ಸಾಧಕರಲ್ಲಿ ನಿರ್ಮಿಸಿ ಆ ಕ್ಷೇತ್ರದಲ್ಲಿ ಹೇಗೆ ಮುಂದೆ ಮುಂದೆ ಹೋಗಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಾಧಕರಿಗೆ ಸಿಗುವಂತಹ ಜ್ಞಾನವು ಹೆಚ್ಚೆಚ್ಚು ಸತ್ಯ ಮತ್ತು ತಪ್ಪುರಹಿತವಾಗಲು ಅವರು ಪರಿಶ್ರಮಿಸಿದರು. ಇಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದಲ್ಲಿ ಸೂಕ್ಷ್ಮವನ್ನು ಅರಿಯುವ ಕ್ಷಮತೆಯುಳ್ಳ ಸಾಧಕರೂ ಸೇವೆ ಮಾಡುತ್ತಿದ್ದಾರೆ. ಕಾಲಕ್ಕನುಸಾರ ಸಮಾಜಕ್ಕೆ ತಿಳಿಯುವಂತಹ ವೈಜ್ಞಾನಿಕ ಸಂಶೋಧನೆಗಾಗಿಯೂ ಪರಾತ್ಪರ ಗುರು ಡಾಕ್ಟರರು ಕಾರ್ಯನಿರತರಾಗಿದ್ದಾರೆ. ಆಧ್ಯಾತ್ಮಿಕ ಸಂಶೋಧನೆಗಾಗಿ ಸದುಪಯೋಗ ವಾಗುವ ದೃಷ್ಟಿಯಿಂದ ಪರಾತ್ಪರ ಗುರು ಡಾ. ಆಠವಲೆಯವರು ‘ಸೂಕ್ಷ್ಮವನ್ನು ತಿಳಿಯುವುದು ಈ ಗುಣವನ್ನು ಹಂತಹಂತವಾಗಿ ವಿಕಾಸ ಮಾಡಿದ್ದನ್ನು ಈ ಲೇಖನದಲ್ಲಿ ಶಬ್ದಬದ್ಧ ಮಾಡಲಾಗಿದೆ. – ಕು. ಪ್ರಿಯಾಂಕಾ ಲೋಟಲೀಕರ

ಪ್ಯಾಕೇಟಿನ ಮೇಲೆ ಕೈಯಿಟ್ಟು ಸ್ಪಂದನಗಳ ಅಭ್ಯಾಸ ಮಾಡುವ ಪರಾತ್ಪರ ಗುರು ಡಾಕ್ಟರ (ವರ್ಷ 1999)

೧. ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನಾಕಾರ್ಯದ ‘ಸೂಕ್ಷ್ಮದಿಂದ ಸ್ಥೂಲದೆಡೆಗೆ’ ಪ್ರವಾಸ

ಸಾಮಾನ್ಯವಾಗಿ ಸಂಶೋಧನೆಯ ದಿಶೆ ‘ಜ್ಞಾತದಿಂದ ಅಜ್ಞಾತದೆಡೆಗೆ’, ಅಂದರೆ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ’ ಹೀಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ವಿಷಯದಲ್ಲಿ ಮಾತ್ರ ಮೊದಲು ಸೂಕ್ಷ್ಮ ದಲ್ಲಿನ ಸಂಶೋಧನೆ ಮತ್ತು ನಂತರ ಸ್ಥೂಲದಲ್ಲಿನ ಹೀಗೆ ಪ್ರಚಲಿತ ಸಂಶೋಧಕರಿಗಿಂತ ವಿರುದ್ಧ ದಿಶೆಯ ಪ್ರವಾಸವಾಗಿದೆ. ಸುಮಾರು 1987 ನೇ ಇಸವಿಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರಿಗೆ ಧ್ಯಾನದಲ್ಲಿ ಉತ್ತರಗಳು ಸಿಗುತ್ತಿದ್ದವು. ಈ ಉತ್ತರಗಳ ಸತ್ಯತೆಯನ್ನು ಪರೀಕ್ಷಿಸಲು ಅವರು ವಿವಿಧ ಪ್ರಯೋಗಗಳನ್ನು ಮಾಡಿದರು, ಉದಾ. ಓದದಿರುವ ಪುಸ್ತಕದಲ್ಲಿನ ಯಾವ ಪುಟದಲ್ಲಿ ಯಾವ ಬರಹವಿದೆ, ಎಂದು ಧ್ಯಾನದಲ್ಲಿ ನೋಡಿ ಅದರ ವರ್ಣನೆ ಮಾಡುವುದು ಮತ್ತು ನಂತರ ಪ್ರತ್ಯಕ್ಷ ಪುಸ್ತಕದಲ್ಲಿ ಆ ಪುಟದಲ್ಲಿ ಏನಿದೆ, ಎಂದು ನೋಡುವುದು, ಧ್ಯಾನದಲ್ಲಿ ಅಪರಿಚಿತ ವ್ಯಕ್ತಿಯ ಮನೆಗೆ ಹೋಗಿ ನಂತರ ಅಲ್ಲಿನ ವರ್ಣನೆ ಮಾಡುವುದು ಮತ್ತು ವರ್ಣನೆಯ ಸತ್ಯತೆಯನ್ನು ಆ ವ್ಯಕ್ತಿಗೆ ಕೇಳುವುದು ಇತ್ಯಾದಿ. ಇಂತಹ ಅನೇಕ ಪ್ರಯೋಗಗಳಲ್ಲಿನ ಉತ್ತರಗಳ ಸತ್ಯತೆ ಶೇ. ೯೫ ಕ್ಕಿಂತ ಹೆಚ್ಚು ಬರತೊಡಗಿದಾಗ ‘ತಮಗೆ ಧ್ಯಾನದಲ್ಲಿ ಸಿಗುವ ಉತ್ತರಗಳು ಸತ್ಯ ಇವೆ’, ಎಂದು ಪರಾತ್ಪರ ಗುರು ಡಾ. ಆಠವಲೆಯವರ ಗಮನಕ್ಕೆ ಬಂದಿತು. ಅದರ ನಂತರ ಒಂದು ಸಮಸ್ಯೆಯ ಹಿಂದಿನ ವಿವಿಧ ಕಾರಣಗಳ ತುಲನಾತ್ಮಕ ಮಹತ್ವವನ್ನು ಶೇಕಡಾವಾರಿನಲ್ಲಿ ಹೇಳುವುದು (ಉದಾ. ಒಬ್ಬನ ವಿವಾಹವಾಗದಿರುವ ಮೂಲಭೂತ ಕಾರಣಗಳ ಪೈಕಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು ಎಷ್ಟು ಪ್ರಮಾಣದಲ್ಲಿವೆ), ಸಮಸ್ಯೆಗಳಿಗೆ ಪರಿಹಾರವನ್ನು ಹೇಳುವುದು ಮುಂತಾದವುಗಳು ಅವರಿಗೆ ಸೂಕ್ಷ್ಮದಿಂದ ತಿಳಿಯತೊಡಗಿತು. ಸೂಕ್ಷ್ಮದಿಂದ ಜ್ಞಾನ ಸಿಗುವುದು ಇದು ಮನುಕುಲದ ಕಲ್ಯಾಣದ ದೃಷ್ಟಿಯಿಂದ ಒಂದು ಅಮೂಲ್ಯ ಕೊಡುಗೆಯಾಗಿದೆ; ಏಕೆಂದರೆ ಬುದ್ಧಿ ಮತ್ತು ಅನುಭವ ಇವುಗಳ ಮೂಲಕ ಉತ್ತರಗಳು ಸಿಗುವುದಕ್ಕೆ ಮಿತಿ ಇದೆ; ಆದರೆ ಸೂಕ್ಷ್ಮದಿಂದ ತಿಳಿಯುವುದು ಸೀಮಾತೀತವಾಗಿದೆ.

ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮದ ವೈಶಿಷ್ಟ್ಯಗಳನ್ನು ತೋರಿಸುವ ಚಿತ್ರದಲ್ಲಿನ ಸೂಕ್ಷ್ಮ ಸ್ಪಂದನಗಳನ್ನು ಪರಿಶೀಲಿಸುವಾಗ ಪರಾತ್ಪರ ಗುರು ಡಾ. ಆಠವಲೆ

೨. ಸೂಕ್ಷ್ಮವನ್ನು ತಿಳಿಯುವ ಪದ್ಧತಿಯಲ್ಲಿ ವಿಕಸಿತ ಮಾಡುವ ಬಗ್ಗೆ ಅದ್ವಿತೀಯ ಸಂಶೋಧನೆ

ಸ್ವತಃ ಪರಾತ್ಪರ ಗುರು ಡಾ. ಆಠವಲೆಯವರಿಗೆ ಸೂಕ್ಷ್ಮದ ಬಗ್ಗೆ ತಿಳಿಯುವುದು ಮತ್ತು ಸೂಕ್ಷ್ಮದಿಂದ ಜ್ಞಾನ ಸಿಗುವುದು ಸಾಧ್ಯವಾದಾಗ ಅವರು ಅಲ್ಲಿಯೇ ನಿಲ್ಲಲಿಲ್ಲ. ಇತರ ಸಾಧಕರಲ್ಲಿ ಈ ಸೂಕ್ಷ್ಮವನ್ನು (ಅಂದರೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ) ಅರಿಯುವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬಹುದು, ಎಂದು ಅವರು ಸತತವಾಗಿ ಸಂಶೋಧನಾತ್ಮಕ ಪ್ರಯತ್ನ ಮಾಡಿದರು. 2006 ನೇ ಇಸವಿಯಲ್ಲಿ ಪ್ರಾರಂಭವಾದ ಈ ಕ್ರಾಂತಿಕಾರಿ ಸಂಶೋಧನೆಯ ಅಂತರ್ಗತ ಅವರು ಮೊದಲಿಗೆ ಅಲ್ಪಸ್ವಲ್ಪ ಸೂಕ್ಷ್ಮವನ್ನು ತಿಳಿಯುವ ಸಾಧಕರಿಂದ ಮೇಲಿಂದ ಮೇಲೆ ಸೂಕ್ಷ್ಮ ಪರೀಕ್ಷೆ ಮಾಡಿಸಿಕೊಂಡರು. ಆ ಮಾಧ್ಯಮದಿಂದ ಸಾಧಕರ ಸೂಕ್ಷ್ಮವನ್ನು ತಿಳಿಯುವ ಕ್ಷಮತೆ ಜಾಗೃತ ಮತ್ತು ಕಾರ್ಯನಿರತವಾಯಿತು. ಕಾಲಾಂತರದಲ್ಲಿ ‘ಸೂಕ್ಷ್ಮವನ್ನು ತಿಳಿಯುವ ಸಾಧಕರ ಪೈಕಿ ಕೆಲವು ಸಾಧಕರಿಗೆ ಈ ಬುದ್ಧಿಗೆ ಮೀರಿದ ಜ್ಞಾನ ಶಬ್ದಗಳ ಮಾಧ್ಯಮದಿಂದ ಮತ್ತು ಕೆಲವು ಸಾಧಕರಿಗೆ ಚಿತ್ರರೂಪದಲ್ಲಿ ಸಿಗುತ್ತದೆ, ಎಂದು ಸ್ಪಷ್ಟವಾಯಿತು. ಇದರಿಂದಲೂ ಸಮಾಧಾನಗೊಳ್ಳದೇ ಅವರು ಈ ಬಗೆಗಿನ ಸಂಶೋಧನೆಯನ್ನು ನಿರಂತರವಾಗಿ ನಡೆಸಿದರು.

೩. ಸೂಕ್ಷ್ಮ ಜ್ಞಾನದ ಮೇಲಾಧಾರಿತ ಚಿತ್ರಗಳ ನಿರ್ಮಿತಿ

ಕೆಲವು ಸಾಧಕರು ತಮಗೆ ದೃಶ್ಯ ಸ್ವರೂಪದಲ್ಲಿ ದೊರಕುವ ಜ್ಞಾನವನ್ನು ಚಿತ್ರರೂಪದಲ್ಲಿ ತೋರಿಸ ತೊಡಗಿದರು. ಈ ಚಿತ್ರಗಳಿಗೆ ‘ಸೂಕ್ಷ್ಮ ಜ್ಞಾನದ ಮೇಲಾಧಾರಿತ ಚಿತ್ರ’ ಎಂಬ ಸಂಜ್ಞೆಯನ್ನು ನೀಡಲಾಯಿತು. ಇಲ್ಲಿಯವರೆಗೆ ಸಾಧಕರು ಬಿಡಿಸಿದ ಸೂಕ್ಷ್ಮ-ಚಿತ್ರಗಳು ಸೂಕ್ಷ್ಮದಲ್ಲಿನ ಒಳ್ಳೆಯ ಅಥವಾ ಕೆಟ್ಟ ಶಕ್ತಿ, ದೇವತೆಯ ಪ್ರಭಾಮಂಡಲ ಅಥವಾ ಸಜೀವ ಅಥವಾ ನಿರ್ಜೀವ ವಸ್ತುಗಳ ಸೂಕ್ಷ್ಮ ಸ್ಪಂದನಗಳು ಹಾಗೂ ಯಾವುದಾದರೊಂದು ಘಟನೆಯ (ಉದಾ. ಧಾರ್ಮಿಕ ವಿಧಿ ಅಥವಾ 31 ಡಿಸೆಂಬರ್‌ನ ಮಧ್ಯ ರಾತ್ರಿ ನೃತ್ಯ-ಗಾಯನ ಮಾಡಿದ ವ್ಯಕ್ತಿಯ ಮೇಲಾದ ಪರಿಣಾಮ) ಇಂತಹ ಅನೇಕ ವಿಧದ್ದಾಗಿವೆ.

೩ ಅ. ಸೂಕ್ಷ್ಮ ಚಿತ್ರಗಳ ಅಧ್ಯಯನಪೂರ್ಣ ವರ್ಗೀಕರಣ : ಈ ಚಿತ್ರಗಳ ವಿಧಗಳ ವರ್ಗೀಕರಣವು ಈ ಸೂಕ್ಷ್ಮ ಚಿತ್ರಗಳು ಜಗತ್ತಿಗೆ ಪರಾತ್ಪರ ಗುರು ಡಾ. ಆಠವಲೆ ಇವರು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಪ್ರಾರಂಭದಲ್ಲಿ ಎಲ್ಲ ಚಿತ್ರಗಳ ‘ಸೂಕ್ಷ್ಮ ಚಿತ್ರಗಳು’ ಎಂಬ ಒಂದೇ ಗುಂಪಿತ್ತು. ಅದರ ನಂತರ ಅವುಗಳ ‘ಯೋಗ್ಯ’ ಮತ್ತು ‘ತಪ್ಪಾಗಿದ್ದು’ ಎಂದು ವರ್ಗೀಕರಣ ಮಾಡಿದರು. ಅದರಲ್ಲಿಯೂ ನಂತರ ಮಾನಸಿಕ ಸ್ತರದಲ್ಲಿನ ಚಿತ್ರಕಲೆಯ ಭ್ರಾಮಾನತ್ಮಕ, ಕಾಲ್ಪನಿಕ, ಮಾಯಾವಿ ಮತ್ತು ಭಾವನಾತ್ಮಕ ಈ ೪ ವಿಧ ಮತ್ತು ಸೂಕ್ಷ್ಮ ದೃಶ್ಯದ ಮೇಲಾಧರಿಸಿದ ‘ಸತ್ಯ’ ಈ ೫ ನೇ ವಿಧ ಸೇರಿ ಎಲ್ಲ ಚಿತ್ರಗಳ ಅದಕ್ಕನುಸಾರ ವರ್ಗೀಕರಣ ಮಾಡಲಾಯಿತು.

೩ ಆ. ಸೂಕ್ಷ್ಮದಲ್ಲಿನ ಸ್ಪಂದನಗಳು ಮತ್ತು ಬಣ್ಣ ಇವುಗಳ ಪ್ರಮಾಣೀಕರಣ (Standardisation) : ಸೂಕ್ಷ್ಮ ಚಿತ್ರಗಳ ಸ್ಪಂದನಗಳು ಮತ್ತು ಬಣ್ಣ ಇವುಗಳ ಪ್ರಮಾಣೀಕರಣ ಇವುಗಳ ಬಗೆಗಿನ ಸಂಶೋಧನೆ ಇವು ಸೂಕ್ಷ್ಮ ಚಿತ್ರಗಳ ಸಂಶೋಧನೆಯಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ಒಂದು ಪ್ರಮುಖ ಯೋಗದಾನವಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಸೂಕ್ಷ್ಮ ಊರ್ಜಾ ವಲಯ, ಪ್ರವಾಹ, ಕಣ, ಸ್ಪಂದನಗಳು ಮತ್ತು ಕಿರಣಗಳ ಸ್ವರೂಪದಲ್ಲಿ ಪ್ರಕ್ಷೇಪಿತವಾಗುತ್ತದೆ. ಪ್ರತಿಯೊಂದು ಸ್ವರೂಪದ ವಿಶಿಷ್ಟ ಕಾರ್ಯ ಮತ್ತು ಗುಣಧರ್ಮವಿರುತ್ತದೆ. ಸೂಕ್ಷ್ಮದಲ್ಲಿನ ಬಣ್ಣ ಕಣ್ಣುಗಳಿಗೆ ಕಾಣಿಸುವುದಿಲ್ಲ, ಅದು ಕೇವಲ ಸೂಕ್ಷ್ಮ ದೃಷ್ಟಿಯಿಂದ ಕಾಣಿಸುತ್ತದೆ. ಅದು ಪಾರದರ್ಶಕ ಮತ್ತು ಸ್ವಯಂಪ್ರಕಾಶಿಯಾಗಿರುತ್ತದೆ. ಆದ್ದರಿಂದ ಅದರ ನೆರಳು ಬೀಳುವುದಿಲ್ಲ. ಸ್ಥೂಲ ಬಣ್ಣ ಪರಸ್ಪರ ಹೊಂದಿಕೊಂಡು ಮೂರನೇ ಬಣ್ಣ ತಯಾರಾಗುತ್ತದೆ; ಆದರೆ ಸೂಕ್ಷ್ಮ ಬಣ್ಣ ಪರಸ್ಪರ ಸೇರಿಕೊಳ್ಳುವುದಿಲ್ಲ, ಈ ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದರು.

೩ ಇ. ಸೂಕ್ಷ್ಮ-ಚಿತ್ರಗಳ ಸತ್ಯತೆಯ ಪರಿಶೀಲನೆ :

ಶೇ. ೯೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಂತರ ಅಥವಾ ಗುರುಗಳ ಮನಸ್ಸು ಮತ್ತು ಬುದ್ಧಿ ಅನುಕ್ರಮವಾಗಿ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುತ್ತದೆ ಆದ್ದರಿಂದ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿ ಇವುಗಳಿಂದ ಅವರು ಯಾವುದೇ ಉತ್ತರವನ್ನು ಪಡೆಯಬಹುದು ಅಥವಾ ಅವರಿಗೆ ಸೂಕ್ಷ್ಮದ ಬಗ್ಗೆ ಗೊತ್ತಾಗುವುದು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆಯ ವಿಭಾಗಾಂತರ್ಗತ ಸೂಕ್ಷ್ಮ ಚಿತ್ರಗಳನ್ನು ಬಿಡಿಸುವ ಎಲ್ಲ ಸಾಧಕರ ಪ್ರತಿಯೊಂದು ಚಿತ್ರದ ಸತ್ಯತೆಯನ್ನು ಸ್ವತಃ ಪರಾತ್ಪರ ಗುರು ಡಾ. ಆಠವಲೆಯವರು ಪರಿಶೀಲಿಸುತ್ತಾರೆ. ಸೂಕ್ಷ್ಮಚಿತ್ರದ ಸತ್ಯತೆಯು ನಿರ್ದಿಷ್ಟವಾಗಿ ಎಷ್ಟಿದೆಯೆಂದು, ಅವರು ಶೇಕಡಾವಾರಿನಲ್ಲಿ ಹೇಳುತ್ತಾರೆ, ಹಾಗೆಯೇ ಅದರಲ್ಲಿನ ಅಸತ್ಯ ಭಾಗವನ್ನು ತೋರಿಸಿ ಅದರ ಸುಧಾರಣೆ ಯನ್ನು ಮಾಡಿಸಿಕೊಳ್ಳುತ್ತಾರೆ.

೪. ಸಾಧಕರಲ್ಲಿ ಸ್ಥಳ ಮತ್ತು ಕಾಲ ಇವುಗಳ ಆಚೆಗೆ ಹೋಗಿ ಸೂಕ್ಷ್ಮ ಜ್ಞಾನವನ್ನು ಪಡೆಯುವ ಕ್ಷಮತೆ ನಿರ್ಮಾಣ ಮಾಡುವುದು

ಪ್ರಾರಂಭದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೂಕ್ಷ್ಮ ಚಿತ್ರಕಾರರಿಗೆ ಒಂದು ವಸ್ತು ಅಥವಾ ವ್ಯಕ್ತಿ ಎದುರಿಗಿರುವಾಗ ಅವರ ಬಗ್ಗೆ ಜ್ಞಾನವು ಸೂಕ್ಷ್ಮದಿಂದ ಸಿಗುತ್ತಿತ್ತು; ಆದರೆ ವಸ್ತು ಎದುರಿಗಿಲ್ಲದಾಗ ಮಾಡಿದ ಸೂಕ್ಷ್ಮ ಪರೀಕ್ಷೆಯ ಸತ್ಯತೆ ಕಡಿಮೆ ಇರುತ್ತಿತ್ತು. ಕಾಲಾಂತರದಲ್ಲಿ ಸೂಕ್ಷ್ಮ ಜ್ಞಾನಪ್ರಾಪ್ತ ಮಾಡಿಕೊಳ್ಳುವ ಸಾಧಕರ ಸಾಧನೆಯು ಹೆಚ್ಚಾದುದರಿಂದ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರ ಕೃಪಾಶೀರ್ವಾದದಿಂದಾಗಿ ಈಗ ಅವರಿಗೆ ಸ್ಥಳದ ಆಚೆಗೆ ಹೋಗಿಯೂ ಜ್ಞಾನ ಪಡೆಯಲು ಸಾಧ್ಯವಾಗುತ್ತಿದೆ, ಉದಾ ಜಗತ್ತಿನ ಯಾವುದೇ ಸ್ಥಳದಲ್ಲಿರುವ ಅಪರಿಚಿತ ವ್ಯಕ್ತಿಯ ಕೇವಲ ಛಾಯಾಚಿತ್ರ ಅಥವಾ ಧ್ವನಿಚಿತ್ರಮುದ್ರಿಕೆಯನ್ನು ನೋಡಿ ಅಥವಾ ಯಾವುದೇ ಮಾಧ್ಯಮ ಎದುರಿಗಿಲ್ಲದಿದ್ದರೂ ಅವನ ಬಗ್ಗೆ ಜ್ಞಾನ ಪ್ರಾಪ್ತಮಾಡಿಕೊಳ್ಳಲು ಬರುತ್ತದೆ.

ಯಾವುದೇ ಘಟನೆಯು ಘಟಿಸಿದ ನಂತರ ಕೆಲವು ಸಮಯದಲ್ಲಿ ಅದರ ಸೂಕ್ಷ್ಮ ಪರೀಕ್ಷೆ ಮಾಡಿದರೆ ಅದರ ಸತ್ಯತೆ ಕಡಿಮೆಯಿರುತ್ತದೆ; ಏಕೆಂದರೆ ಕಾಲದೊಂದಿಗೆ ಆ ಘಟನೆಯ ವಾತಾವರಣದಲ್ಲಿನ ಸ್ಪಂದನಗಳು ಕಡಿಮೆಯಾಗತೊಡಗುತ್ತವೆ. ಪರಾತ್ಪರ ಗುರು ಡಾ. ಆಠವಲೆ ಇವರ ಕೃಪಾಶೀರ್ವಾದದಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೂಕ್ಷ್ಮ ಚಿತ್ರಕಾರರಿಗೆ ಈಗ ಹತ್ತಿರದ ಭೂತಕಾಲ ಅಥವಾ ಭವಿಷ್ಯಕಾಲ ಮಾತ್ರವಲ್ಲದೇ ಒಬ್ಬ ವ್ಯಕ್ತಿಯ ಹಿಂದಿನ ಜನ್ಮದಲ್ಲಿನ ಘಟನೆಯ ಬಗ್ಗೆಯೂ ಸತ್ಯ ಜ್ಞಾನ ಪ್ರಾಪ್ತವಾಗಬಹುದು.

ಸೂಕ್ಷ್ಮ-ಚಿತ್ರಗಳ ಸಂಶೋಧನೆಯ ಸಂದರ್ಭ ದಲ್ಲಿ ಮೇಲಿನ ವಿಷಯಗಳಿಂದ ಸಂಶೋಧನೆಯ ವ್ಯಾಪ್ತಿ ಮತ್ತು ಆಳವು ಗಮನಕ್ಕೆ ಬರುತ್ತದೆ.

೫. ಸೂಕ್ಷ್ಮ ಜ್ಞಾನದ ಮೇಲಾಧರಿಸಿದ ಚಿತ್ರಗಳ ಮಹತ್ವ

ಒಟ್ಟು ಸೃಷ್ಟಿಯ ಪೈಕಿ ದೃಶ್ಯ ಜಗತ್ತು ಕೇವಲ ಶೇ.1 ರಷ್ಟಿದ್ದರೆ ಸೂಕ್ಷ್ಮದಲ್ಲಿನ ಜಗತ್ತು ಶೇ. 99 ರಷ್ಟಿದೆ. ಆದುದರಿಂದ ಈ ಸೂಕ್ಷ್ಮ ಜಗತ್ತಿನಿಂದ ಮನುಷ್ಯನ ಮೇಲಾಗುವ ಪರಿಣಾಮವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿರುತ್ತದೆ; ಆದರೆ ಆ ಜಗತ್ತು ಸೂಕ್ಷ್ಮವಿರುವುದರಿಂದ ಅದು ಅಥವಾ ಅದರ ಪರಿಣಾಮವು ನಮ್ಮ ತಿಳುವಳಿಕೆಯ ಆಚೆಗಿರುತ್ತದೆ. ಸೂಕ್ಷ್ಮ ಜಗತ್ತಿನ ಬಗ್ಗೆ ಮಾಹಿತಿ ನೀಡುವಲ್ಲಿ ಸೂಕ್ಷ್ಮ ಜ್ಞಾನದ ಮೇಲಾಧಾರಿತ ಚಿತ್ರಗಳು ಮುಂದಿನ ರೀತಿಯಲ್ಲಿ ಸಹಯೋಗ ನೀಡುತ್ತವೆ.

೫ ಅ. ಸೂಕ್ಷ್ಮ ಚಿತ್ರಗಳ ಮಾಧ್ಯಮದಿಂದ ನಮಗೆ ಸೂಕ್ಷ್ಮದಲ್ಲಿನ ಘಟನಾವಳಿಗಳನ್ನು ದೃಶ್ಯ ಸ್ವರೂಪದಲ್ಲಿ ತಿಳಿಯಲು ಸಹಾಯವಾಗುತ್ತದೆ.

೫ ಆ. ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಸ್ಥಿತಿಯನ್ನು ಗುರುತಿಸಲು ಈ ಚಿತ್ರಗಳ ಉಪಯೋಗ ಮಾಡಲು ಬರುತ್ತದೆ.

೫ ಇ. ಒಂದು ವಸ್ತು ಅಥವಾ ವ್ಯಕ್ತಿಯ ಸಂದರ್ಭ ದಲ್ಲಿನ ಸೂಕ್ಷ್ಮ ಸ್ಪಂದನಗಳು ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ಅಥವಾ ನಕಾರಾತ್ಮಕ ವಾಗಿದೆಯೋ ಎಂಬ ಬಗ್ಗೆ ಸೂಕ್ಷ್ಮ ಚಿತ್ರಗಳು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತವೆ. ಇದರಿಂದ ಆ ವಸ್ತು, ವ್ಯಕ್ತಿ ಅಥವಾ ಘಟನೆಯನ್ನು ತಪ್ಪಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಬರುತ್ತದೆ.

೫ ಈ. ಮಾನವನಿಗೆ ಸೂಕ್ಷ್ಮ ಜಗತ್ತಿನ ಬಗ್ಗೆ ಕುತೂಹಲವಿರುತ್ತದೆ. ಸೂಕ್ಷ್ಮ-ಚಿತ್ರಗಳು ಅವನ ಈ ಜಿಜ್ಞಾಸೆಗೆ ಕೆಲವು ಪ್ರಮಾಣದಲ್ಲಿ ಪರಿಹಾರ ನೀಡುತ್ತವೆ. ಹೀಗೆ ಮಾಡುತ್ತಾ ಮಾಡುತ್ತಾ ಒಂದು ದಿನ ಮಾನವನ ಮನಸ್ಸಿನಲ್ಲಿ ಎಲ್ಲಕ್ಕಿಂತ ಸೂಕ್ಷ್ಮವಾಗಿರುವ ಈಶ್ವರನ ಬಗ್ಗೆಯೂ ತಿಳಿದುಕೊಳ್ಳುವ ವಿಚಾರ ಬರುವುದು ಮತ್ತು ಅವನು ಆ ದಿಕ್ಕಿನಲ್ಲಿ ಪ್ರಯತ್ನಿಸ ತೊಡಗುತ್ತಾನೆ. ಆಗಲೇ ನಿಜವಾದ ಅರ್ಥದಲ್ಲಿ ಮಾನವನ ಆನಂದಪ್ರಾಪ್ತಿಯ ದಿಕ್ಕಿನಲ್ಲಿ ಪ್ರವಾಸವು ಆರಂಭವಾಗುವುದು.

– ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

Leave a Comment