ದೋಷಗಳ ರಾಜ – ‘ಆಲಸ್ಯ’ !

                 (ಸದ್ಗುರು) ರಾಜೇಂದ್ರ ಶಿಂದೆ

೧. ‘ಆಲಸ್ಯ’ ಎಂಬ ದೋಷದಿಂದ ಅನೇಕ ದೋಷಗಳು ಹೆಚ್ಚಾಗುವುದು

‘ಆಲಸ್ಯ’ ಎಂಬ ದೋಷವು ಎಲ್ಲ ದೋಷಗಳ ರಾಜವಾಗಿದೆ. ಇದು ತಮೋಗುಣಿ ದೋಷವಾಗಿದೆ. ಅದು ಓರ್ವ ಗೂಂಡಾನಂತೆ ಅನೇಕ ದೋಷಗಳೊಂದಿಗೆ ತಿರುಗಾಡುತ್ತಿರುತ್ತದೆ ಉದಾ. ಆಲಸ್ಯವಿದ್ದರೆ ಕೆಲವೊಂದು ಕೃತಿಗಳನ್ನು ನಾವು ಸಮಯಕ್ಕೆ ಸರಿಯಾಗಿ ಮಾಡದೇ ‘ಆಮೇಲೆ ಮಾಡೋಣ’, ಎಂದು ವಿಚಾರ ಮಾಡುತ್ತೇವೆ. ಆದುದರಿಂದ ಮುಂದಿನಂತೆ ಅನೇಕ ದೋಷಗಳು ಹೆಚ್ಚಾಗುತ್ತವೆ ಮತ್ತು ಸಾಧನೆಯಲ್ಲಿ / ಜೀವನದಲ್ಲಿ ಭರಿಸಲಾಗದಷ್ಟು ಹಾನಿಯಾಗುತ್ತದೆ.

೧ ಅ. ಅವ್ಯವಸ್ಥಿತ : ಯಾವುದಾದರೊಂದು ವಸ್ತುವನ್ನು ತೆಗೆದುಕೊಂಡರೆ, ಅದರ ಕೆಲಸವಾದ ಮೇಲೆ ಆ ವಸ್ತುವನ್ನು ಅದರ ಸ್ಥಾನದಲ್ಲಿ ಇಡುವುದಿಲ್ಲ ಅಥವಾ ಇಟ್ಟರೂ ಅಯೋಗ್ಯ ಪದ್ಧತಿಯಲ್ಲಿ ಇಡುತ್ತೇವೆ.

೧ ಆ. ಮುಂದೂಡುವಿಕೆ : ಯಾವುದಾದರೊಂದು ಕೃತಿಯನ್ನು ಸಮಯಕ್ಕೆ ಸರಿಯಾಗಿ ಮಾಡದೆ ‘ಆಮೇಲೆ ಮಾಡೋಣ’ ಎಂಬ ವಿಚಾರ ಮಾಡಿ ಮುಂದೂಡುತ್ತೇವೆ. ಅದನ್ನು ಮಾಡಲು ಇನ್ನೊಬ್ಬರು ಬೆಂಬತ್ತಬೇಕಾಗುತ್ತದೆ ಹಾಗೂ ಸಮಯ ಕಳೆದಹೋದ ಮೇಲೆ ಆ ಕೃತಿ ಮಾಡಿದರೆ ಫಲ ಕಡಿಮೆಯಾಗುತ್ತದೆ.

೧ ಇ. ಮರೆವು : ಅನೇಕ ಬಾರಿ ‘ಕೆಲವೊಂದು ಕೃತಿಗಳನ್ನು ಆಮೇಲೆ ಮಾಡೋಣ’, ಎಂದು ಅನಿಸಿ ಅದನ್ನು ಹಾಗೆ ಇಡುತ್ತೇವೆ. ಆದುದರಿಂದ ಕೆಲವು ಬಾರಿ ಆ ಕೃತಿ ಮಾಡಲು ಮರೆತು ಹೋಗುತ್ತದೆ.

೧ ಈ. ಸಾತತ್ಯತೆ ಇಲ್ಲದಿರುವುದು : ಆಲಸ್ಯದಿಂದ ಯಾವುದೇ ವಿಷಯ ಮಾಡುವಾಗ ಅದರಲ್ಲಿ ಸಾತತ್ಯತೆ ಇರುವುದಿಲ್ಲ, ಉದಾ. ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡಲು ಹೇಳಿದರೆ, ಅದು ಆರಂಭದಲ್ಲಿ ಸರಿಯಾಗಿ ಆಗುತ್ತದೆ; ಆದರೆ ಕೆಲವು ದಿನಗಳ ನಂತರ ನಿಲ್ಲುತ್ತದೆ.

೧ ಉ. ಗಾಂಭೀರ್ಯದ ಅಭಾವ : ಆಲಸ್ಯದಿಂದ ವ್ಯಷ್ಟಿ ಸಾಧನೆ ಅಥವಾ ಸಾಧನೆಯ ಅಂತರ್ಗತ ಕೆಲವೊಂದು ಕೃತಿಗಳನ್ನು ಮಾಡಲು ಮಹತ್ವ ನೀಡುವುದಿಲ್ಲ. ಅದರ ಪರಿಣಾಮದಿಂದ ಆ ಕೃತಿಯನ್ನು ‘ಗಾಂಭೀರ್ಯತೆಯ ಅಭಾವ’ ಎಂಬ ದೋಷದಿಂದ ಮಾಡುವುದಿಲ್ಲ ಮತ್ತು ಮಾಡಿದರೂ ಅದು ಸರಿಯಾಗಿ ಆಗುವುದಿಲ್ಲ.

೧ ಊ. ಇತರರ ವಿಚಾರ ಆಗದಿರುವುದು : ಆಲಸ್ಯದಿಂದ ಇತರರ ವಿಚಾರ ಮಾಡುವುದು ಕಡಿಮೆಯಾಗುತ್ತದೆ. ಅಂದರೆ ಪ್ರೇಮಭಾವ ನಿರ್ಮಾಣವಾಗಲು ಅಡಚಣೆಯಾಗುತ್ತದೆ; ಏಕೆಂದರೆ ಪ್ರೇಮಭಾವ ನಿರ್ಮಾಣವಾಗಲು ನಮಗೆ ಇತರರಿಗಾಗಿ ಏನಾದರೂ ಕೃತಿ ಮಾಡಬೇಕಾಗುತ್ತದೆ. ಆಲಸ್ಯ ದೋಷದಿಂದ ಅದನ್ನು ಮಾಡುವುದರಿಂದ ಹಿಂದೆ ಉಳಿಯುತ್ತೇವೆ.

೧ ಏ. ಸಮಯ ವ್ಯರ್ಥವಾಗುವುದು : ಆಲಸ್ಯವಿರುವ ವ್ಯಕ್ತಿಯು ಹೆಚ್ಚು ಸಮಯ ಮಲಗುವುದು, ವಿಶ್ರಾಂತಿ ಪಡೆಯುವುದು, ಕುಳಿತುಕೊಂಡಿರುವುದು, ಹರಟೆ ಹೊಡೆಯುವುದು ಮುಂತಾದ ವಿಷಯಗಳಲ್ಲಿ ಸಮಯ ಕಳೆಯುತ್ತಾನೆ; ಅಂದರೆ ಸಮಯ ಹಾಳಾಗುತ್ತದೆ.

೧ ಐ. ಆಯೋಜನೆಯ ಅಭಾವ : ಆಲಸ್ಯವಿರುವ ವ್ಯಕ್ತಿಯು ಆಲಸ್ಯದಿಂದ ಆಯೋಜನೆ ಮಾಡದೆ ಹೇಗೆ ಆಗುತ್ತದೆಯೋ ಹಾಗೆ ಕಾರ್ಯ ಮಾಡುತ್ತಾನೆ ಮತ್ತು ಅದನ್ನು ಆಯೋಜನೆ ಮಾಡಿದರೂ ಆಲಸ್ಯದಿಂದ ಅವನಿಂದ ಅದರಂತೆ ಕೃತಿಯಾಗುವುದಿಲ್ಲ.

೧ ಓ. ಸಮಯಪಾಲನೆಯ ಅಭಾವ : ಆಲಸ್ಯ ಮಾಡುವ ವ್ಯಕ್ತಿಯು ಆಯೋಜನೆಗನುಸಾರ ಮತ್ತು ಸಮಯಕ್ಕನುಸಾರ ಕೃತಿ ಮಾಡುವುದಿಲ್ಲ. ಉದಾ : ಇಂತಹ ಸಾಧಕನು ಸೇವೆಗೆ ಮತ್ತು ಸತ್ಸಂಗಕ್ಕೂ ಸರಿಯಾದ ಸಮಯಕ್ಕೆ ತಲುಪುವುದಿಲ್ಲ ಅಥವಾ ಯಾರಾದರೂ ಹೇಳಿದ ಸಮಯದ ಪಾಲನೆ ಮಾಡುವುದಿಲ್ಲ.

೧ ಔ. ಸ್ವಂತ ವಿಚಾರ ಮಾಡುವುದು : ಆಲಸ್ಯವಿರುವ ವ್ಯಕ್ತಿಯು ತನ್ನದೇ ವಿಚಾರ ಹೆಚ್ಚು ಮಾಡುತ್ತಾನೆ. ಅವನು ಕಷ್ಟಪಡಲು ಸಿದ್ಧನಿರುವುದಿಲ್ಲ.

೧ ಅಂ. ನಿರಾಕರಿಸುವುದು ಮತ್ತು ಕೇಳುವವೃತ್ತಿ ಇಲ್ಲದಿರುವುದು : ಆಲಸ್ಯದಿಂದ ಅನೇಕ ವಿಷಯಗಳನ್ನು ಮಾಡಲು ಮೀನಮೇಷ ಎಣಿಸುವುದು. ಅದರಿಂದ ತಪ್ಪಿಸಿಕೊಳ್ಳುವುದು, ಕೇಳುವ ವೃತ್ತಿ ಇಲ್ಲದಿರುವುದು ಇಂತಹ ಅನೇಕ ದೋಷಗಳು ಇಂತಹ ಸಾಧಕರಲ್ಲಿ ನಿರ್ಮಾಣವಾಗುತ್ತವೆ.

೨. ವ್ಯವಹಾರದಲ್ಲಿಯೂ ಆಲಸ್ಯದಿಂದ ವ್ಯಕ್ತಿಗೆ ಸುಖ ಸಿಗುವುದಿಲ್ಲ ಮತ್ತು ಸಾಧನೆಯಲ್ಲಿ ಆನಂದವಂತೂ ದೂರದ ಮಾತಾಗಿರುವುದು

ಆಲಸಿ ವ್ಯಕ್ತಿಯ ಕುರಿತು ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ.

ಅಲಸಸ್ಯ ಕುತೋ ವಿದ್ಯಾ ಅವಿದ್ಯಸ್ಯ ಕುತೋ ಧನಮ್ |
ಅಧನಸ್ಯ ಕುತೋ ಮಿತ್ರಮ್ ಅಮಿತ್ರಸ್ಯ ಕುತಃ ಸುಖಮ್ ||

ಅರ್ಥ : ಆಲಸ್ಯವಿರುವ ವ್ಯಕ್ತಿಗೆ ವಿದ್ಯೆ ಹೇಗೆ ಸಿಗುವುದು ? ಅವಿದ್ಯಾವಂತನಿಗೆ ಧನ ಹೇಗೆ ಸಿಗುವುದು ? ಸಂಪತ್ತಿಹೀನ ಮನುಷ್ಯನಿಗೆ ಮಿತ್ರ ಎಲ್ಲಿಂದ ಸಿಗುವನು ಮತ್ತು ಮಿತ್ರ ಇಲ್ಲದಿರುವ ಸುಖ ಹೇಗೆ ಸಿಗುವುದು ?

ಈ ರೀತಿ ಮನುಷ್ಯನ ವೈಯಕ್ತಿಕ ಜೀವನದಲ್ಲಿಯೂ ಸುಖ ಪ್ರಾಪ್ತಿಯಾಗುವುದಿಲ್ಲ. ಸಾಧನೆಯಲ್ಲಿ ಆನಂದ ಸಿಗುವುದೆಂದರೆ ತುಂಬಾ ದೂರದ ಮಾತಾಗಿದೆ. ಆದ್ದರಿಂದ ಸಾಧಕರೇ, ನಮ್ಮಲ್ಲಿ ಆಲಸ್ಯ ಎಂಬ ದೋಷವಿದ್ದರೆ, ಅದನ್ನು ಹೋಗಲಾಡಿಸಲು ಇಂದಿನಿಂದಲೇ ಸಮರೋಪಾದಿಯಲ್ಲಿ ಪ್ರಯತ್ನಿಸಿರಿ.

‘ಸಾಧಕರಿಗೆ ಈ ದೋಷವನ್ನು ಎದುರಿಸಲು ಬುದ್ಧಿ ಬರಲೆಂದು ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’

– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ.

1 thought on “ದೋಷಗಳ ರಾಜ – ‘ಆಲಸ್ಯ’ !”

  1. ಈ ಬರವಣಿಗೆಯು ತುಂಬಾ ಅರ್ಥಗರ್ಭಿತವಾಗಿದೆ. ಇಂಥ ಲೇಖನಗಳು ಕಾಲಕಾಲಕ್ಕೆ ತಿದ್ದುವ ಗುರುಗಳಿದ್ದಂತೆ.

    Reply

Leave a Comment