ಆಮೇಲೆ ಎನ್ನುವ ಘಾತಕ ಶಬ್ದವನ್ನು ಶಬ್ದಕೋಶದಿಂದ ತೆಗೆಯಿರಿ

ಸಾಧಕರು ವ್ಯಷ್ಟಿ ಸಾಧನೆಯ ಅಂತರ್ಗತ ಬರುವ ನಾಮಜಪ, ಎಲ್ಲ ಆಧ್ಯಾತ್ಮಿಕ ಉಪಾಯಗಳು, ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ತಖ್ತೆ ಬರೆಯುವುದು ಮತ್ತು ಸ್ವಯಂ ಸೂಚನೆ ಅಭ್ಯಾಸಸತ್ರ ಮಾಡುವುದು, ಇವುಗಳನ್ನು ಮಾಡಲು ಯಾವಾಗಲೂ ರಿಯಾಯತಿ ಪಡೆದುಕೊಳ್ಳುತ್ತಾರೆ. ಆಯಾಯ ವಿಷಯಗಳ ನೆನಪಾದರೂ ಅಥವಾ ಸಂಚಾರಿವಾಣಿಯಲ್ಲಿ ಅಲರಾಂ ಇಟ್ಟರೂ, ಸಾಧಕರು ‘ಆಮೇಲೆ ಮಾಡೋಣ’, ಎಂದು ವಿಚಾರ ಮಾಡುತ್ತಾರೆ ಮತ್ತು ತಾವು ಮಾಡುತ್ತಿರುವ ಸೇವೆಯನ್ನೇ ಮುಂದುವರಿಸುತ್ತಾರೆ. ಅದನ್ನು ಮಾಡುತ್ತಿರುವಾಗ ಅವರಿಗೆ ಮೇಲಿನ ವಿಷಯಗಳು ಮರೆತು ಹೋಗುತ್ತವೆ ಮತ್ತು ಅವುಗಳು ಬಾಕಿ ಉಳಿಯುತ್ತವೆ. ಸಾಧಕರು ದಿನವಿಡಿ ಹೀಗೆ ಮಾಡುತ್ತಿರುತ್ತಾರೆ ಮತ್ತು ರಾತ್ರಿ ಅವರಿಗೆ ಈ ಎಲ್ಲ ವಿಷಯಗಳಿಂದ ಒತ್ತಡವಾಗುತ್ತದೆ.

ಈಗ ಪರಾತ್ಪರ ಗುರು ಡಾಕ್ಟರರು ವ್ಯಷ್ಟಿ ಸಾಧನೆಯ ಅಂತರ್ಗತ ಸಾಧಕರಿಗೆ ಕಾಲಾನುಸಾರ ಸ್ವಯಂಸೂಚನೆ ಸತ್ರಗಳನ್ನು ಹೆಚ್ಚಿಸಲು ಹೇಳಿದ್ದಾರೆ. ಇದರಲ್ಲಿ ಒಂದು ಸಮಯ ಬಿಟ್ಟು ಹೋದರೂ, ಅದರ ಸಂಖ್ಯೆಯಲ್ಲಿ ಪರಿಣಾಮವಾಗುತ್ತದೆ. ಹಾಗಾಗಿ ಸಾಧಕರು ‘ಆಮೇಲೆ’ ಎನ್ನುವ ಶಬ್ದವನ್ನೇ ಶಬ್ದಕೋಶದಿಂದ ಪ್ರಯತ್ನಪೂರ್ವಕವಾಗಿ ತೆಗೆಯಬೇಕು ಮತ್ತು ‘ಆಯಾಯ ಸಮಯಕ್ಕೆ ಆಯಾಯ ವಿಷಯಗಳು ಆಗುತ್ತಿವೆಯಲ್ಲ’, ಎಂದು ನೋಡಬೇಕು. ಆ ದೃಷ್ಟಿಯಿಂದ ‘ಆಮೇಲೆ’ ಎಂಬ ಘಾತಕ ಶಬ್ದಕ್ಕೆ ಪರ್ಯಾಯವೆಂದು ‘ಈಗಲೇ’ ಎಂಬ ಶಬ್ದವನ್ನು ಆಚರಣೆಯಲ್ಲಿ ತನ್ನಿರಿ.

ಸಾಧಕರೇ, ನಾವು ಆಪತ್ಕಾಲ, ವ್ಯಷ್ಟಿ ಸಾಧನೆಯ ವೇಗ ಮತ್ತು ಪರಾತ್ಪರ ಗುರುಗಳ ಆಜ್ಞಾಪಾಲನೆ ಇವುಗಳನ್ನು ಯೋಗ್ಯ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಅದನ್ನು ಅಂಗೀಕರಿಸಿ ಪರಾತ್ಪರ ಗುರು ಡಾಕ್ಟರರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಮಾಡಿದ ಸಂಕಲ್ಪದ ಲಾಭ ಪಡೆದುಕೊಳ್ಳಿರಿ ಮತ್ತು ಸಾಧನೆಯ ಆನಂದ ವನ್ನು ಅನುಭವಿಸಿರಿ !

– (ಪೂ.) ಶ್ರೀ. ಅಶೋಕ ಪಾತ್ರೀಕರ

Leave a Comment