ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಕಿರು ಪರಿಚಯ

ಬಾಲ್ಯ ಮತ್ತು ಶಿಕ್ಷಣ

೬ ಮೇ, ೧೯೪೨ ರಂದು ಶ್ರೀ. ಬಾಲಾಜಿ ಆಠವಲೆ ಮತ್ತು ಸೌ. ನಳಿನಿ ಆಠವಲೆ ಇವರಿಗೆ ಮೂರನೆಯ ಮಗುವಾಗಿ ಜನಿಸಿದರು. ೧೯೬೪ ರಲ್ಲಿ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನಂತರ ಮುಂಬಯಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ, ೧೯೭೧ ರಿಂದ ೧೯೭೮ರ ವರೆಗೆ ಇಂಗ್ಲೆಂಡ್ ನಲ್ಲಿ ಸಂಮೋಹನ ಉಪಚಾರದಲ್ಲಿ ಸಂಶೋಧನೆಯನ್ನು ನಡೆಸಿ ಪ್ರಖ್ಯಾತಿ ಪಡೆದ ಮಾನಸೋಪಚಾರ ತಜ್ಞರು. ಭಾರತಕ್ಕೆ ಮರಳಿ ಇವರು ೫೦೦ ಕ್ಕೂ ಹೆಚ್ಚು ವೈದ್ಯರಿಗೆ ಸಂಮೋಹನ ಶಾಸ್ತ್ರ ಮತ್ತು ಸಂಮೋಹನ ಉಪಚಾರದಲ್ಲಿ ಮಾರ್ಗದರ್ಶನವನ್ನು ಮಾಡಿದ್ದಾರೆ, ಹಾಗೂ ಸಂತರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿ ಇಂದು ಪರಾತ್ಪರ ಗುರುವಿನ ಪದವಿಯನ್ನು ಕೂಡ ಪಡೆದಿದ್ದಾರೆ. Read more…

ಸಾಧನೆಯ ಪ್ರವಾಸ

ಸಂಮೋಹನ ಉಪಚಾರದಲ್ಲಿ ೧೫ ವರ್ಷಗಳ ಸಂಶೋಧನೆಯನ್ನು ನಡೆಸಿ, ನಂತರ ವೈದ್ಯಕೀಯ ಶಾಸ್ತ್ರಕ್ಕಿಂತ ‘ಅಧ್ಯಾತ್ಮಶಾಸ್ತ್ರ’ ಎಂಬ ಉನ್ನತ ಶಾಸ್ತ್ರ ಇದೆ ಎಂದು ಅರಿವಾಗಿ, ಅನೇಕ ಸಂತರ ಮಾರ್ಗದರ್ಶನ ಪಡೆದು, ಸ್ವತಃ ಸಾಧನೆಯನ್ನು ಪ್ರಾರಂಭಿಸಿದರು. ೧೯೮೭ ರಲ್ಲಿ ಇಂದೋರಿನ ಸಂತರಾದ ಪ.ಪೂ.ಭಕ್ತರಾಜ ಮಹಾರಾಜರು ಗುರುಮಂತ್ರವನ್ನು ನೀಡಿ ಅನುಗ್ರಹಿಸಿದರು. ಆದರ್ಶ ಶಿಷ್ಯ ಜೀವನವನ್ನು ನಡೆಸುವ ಪರಾತ್ಪರ ಗುರು ಡಾ. ಆಠವಲೆ, ತಮ್ಮ ಗುರು ನೀಡಿದ ಆಶೀರ್ವಾದಕ್ಕನುಸಾರ ದಿನವಿಡೀ ಗ್ರಂಥಗಳನ್ನು ಬರೆಯುವ ಸೇವೆ ಮಾಡುತ್ತಾರೆ. ಶಿಷ್ಯಭಾವ, ಜಿಜ್ಞಾಸೆ, ಆಧ್ಯಾತ್ಮಿಕ ಸಂಶೋಧನೆ, ವಿರಕ್ತಿ, ಸಮಯದ ಸದುಪಯೋಗ, ಇತರರ ವಿಚಾರ ಮಾಡುವುದು ಇತ್ಯಾದಿ ಇವರ ಕೆಲವು ವೈಶಿಷ್ಟ್ಯಗಳು. 

ರಾಷ್ಟ್ರಗುರು

‘ಕೇವಲ ಭಾರತದಲ್ಲಿ ಮಾತ್ರ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದರೆ ಧರ್ಮ ಸಂಸ್ಥಾಪನೆಯಾಗುವುದಿಲ್ಲ, ಬದಲಾಗಿ ಮನುಕುಲದ ಹಿತಕ್ಕಾಗಿ ವಿಶ್ವದಾದ್ಯಂತ ಹಿಂದೂ ಧರ್ಮವನ್ನು ಪ್ರಸ್ಥಾಪಿಸುವುದು ಆವಶ್ಯಕವಾಗಿದೆ’ ಎಂದು ಪ್ರತಿಪಾದಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆ, ಈ ಧ್ಯೇಯವನ್ನು ಸಾಧಿಸಲು ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ‘ಸನಾತನ ಸಂಸ್ಥೆ’, ‘ಸ್ಪಿರಿಚುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಆಗುವ ಅಧ್ಯಾತ್ಮ ಶಾಸ್ತ್ರದ ಪ್ರಸಾರ, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ಯ ಮಾಧ್ಯಮದಿಂದ ಆಗುವ ಹಿಂದೂ ಸಂಘಟನೆಯ ಕಾರ್ಯ ಇವೆಲ್ಲವುಗಳಿಗೆ ಪರಾತ್ಪರ ಗುರು ಡಾ. ಆಠವಲೆ ಪ್ರೇರಣಾಸ್ರೋತ. Read more…

ಪರಾತ್ಪರ ಗುರು ಡಾ. ಆಠವಲೆಯವರ ಅದ್ವಿತೀಯ ಕಾರ್ಯ

ಸಂಗೀತ

ಯಾವ ರಾಗವನ್ನು ಹಾಡುವಾಗ, ಆಧ್ಯಾತ್ಮಿಕ ದೃಷ್ಟಿಯಿಂದ ಏನು ಅನುಭವಿಸುತ್ತೇವೆ, ಸ್ವರ್ಗಲೋಕದ ಸಂಗೀತವು ಹೇಗಿರುತ್ತದೆ ಎಂಬುವುದು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಅಧ್ಯಯನದ ವಿಷಯಗಳಾದವು. ೨೦೧೬ ರಲ್ಲಿ ಸಂಗೀತ ಸಾಧನೆಯನ್ನು ಮಾಡುವ ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಅವರು ‘ನಾವು ಸಂಗೀತದ ತಾತ್ವಿಕ ಜ್ಞಾನದ ಅನುಭೂತಿಯನ್ನು ಕೂಡ ಪಡೆಯಬೇಕು. ಸಂಗೀತದ ಮಾಧ್ಯಮದಿಂದ ಸಾಧನೆಯನ್ನು ಮಾಡುವಾಗ ಜ್ಞಾನದಿಂದ ಅಜ್ಞಾನದೆಡೆಗೆ (ಫ್ರಮ್ ನೊನ್ ಟು ಅನ್ನೋನ್) ಪ್ರಯಾಣಿಸಬೇಕಾಗಿದೆ’ ಎಂದು ಹೇಳಿದರು. ಮುಂಬರುವ ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ ಸಂಗೀತ ಉಪಚಾರದ ಪದ್ಧತಿಯ ಬಗ್ಗೆ ಕೂಡ ಅಧ್ಯಯನ ನಡೆಯುತ್ತಿದೆ. ಹೀಗಾಗಿ, ಈಶ್ವರ ನಿರ್ಮಿತ ಪ್ರತಿಯೊಂದು ಕಲೆಯ ಗತ ವೈಭವವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ತೊಡಗಿಸಿಕೊಂಡಿದ್ದಾರೆ.

ನೃತ್ಯಕಲೆ

ದೇವಾಲಯಗಳಲ್ಲಿ ಉಪಾಸನೆಯ ಮಾಧ್ಯಮವಾಗಿ ರೂಪಗೊಂಡ ಕಲೆ ನೃತ್ಯಕಲೆ. ಇಂದು ಮನೋರಂಜನೆಯಾಗಿರುವ ನೃತ್ಯಕಲೆಯ ಬಗ್ಗೆ ಸಾಧನೆಯ ದೃಷ್ಟಿಕೋನ ಇಟ್ಟುಕೊಳ್ಳಲು ಕಲಿಸಿದವರು ಪರಾತ್ಪರ ಗುರು ಡಾ. ಆಠವಲೆ. ಸನಾತನದ ಸಾಧಕರು ನೃತ್ಯಕಲೆಯ ವಿವಿಧ ಭಂಗಿ, ಮುಂದ್ರೆಗಳಿಂದ ಕೇವಲ ನವರಸಗಳನ್ನು ಪ್ರದರ್ಶಿಸದೆ, ಅದರಲ್ಲಿರುವ ಆಧ್ಯಾತ್ಮಿಕ ಶಕ್ತಿ, ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿಯನ್ನು ಹೇಗೆ ಪಡೆಯಬಹುದು ಎಂಬುವುದನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಮೂಲಕ ನೃತ್ಯಕಲೆಯ ಶರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪರಿಣಾಮಗಳ ಅಧ್ಯಯನವು ನಡೆಯುತ್ತಿದೆ. ನೃತ್ಯಕಲೆಯನ್ನು ಒಂದು ಮನೋರಂಜನೆಯ ದೃಷ್ಟಿಯಿಂದ ನೋಡುವ ಸಮಾಜಕ್ಕೆ, ಸನಾತನದ ಸಾಧಕರು ಮಾಡುತ್ತಿರುವ ‘ಈಶ್ವರ ಪ್ರಾಪ್ತಿಗಾಗಿ ನೃತ್ಯಕಲೆಯ ಸಾಧನೆ’ ಒಂದು ಆದರ್ಶವಾಗಿದೆ.

ಶಿಲ್ಪಕಲೆ

ಸನಾತನದ ಸಾಧಕ ಶಿಲ್ಪಿಗಳು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಈಶ್ವರ ಸೇವೆಯೆಂದು ಭಾವಪೂರ್ಣವಾಗಿ ಸಾತ್ತ್ವಿಕ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಮೂರ್ತಿಯನ್ನು ತಯಾರಿಸುವಾಗ ಸ್ಪಂದನಶಾಸ್ತ್ರಕ್ಕನುಸಾರ ಪ್ರತಿಯೊಂದು ಆಕೃತಿಯಲ್ಲಿರುವ ಸತ್ವ, ರಜ ಮತ್ತು ತಮೋಗುಣಗಳ ಪ್ರಮಾಣದ ಅಧ್ಯಯನವನ್ನು ಮಾಡಿ, ಅದರ ಸೂಕ್ಷ್ಮ ಸ್ಪಂದನಗಳನ್ನು ಮೂಲ ತತ್ತ್ವಕ್ಕೆ ಹೊಂದಿಕ್ಕೊಳ್ಳುವಂತೆ ತಯಾರಿಸಲಾಗಿದೆ. ಏಕೆಂದರೆ ಆಕೃತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯಾದರೂ ಕೂಡ ಸ್ಪಂದನಗಳು ಬದಲಾಗುತ್ತವೆ. ಅದಲ್ಲದೆ ಸಮಾಜಕ್ಕೆ ಈ ಮೂರ್ತಿಯ ಲಾಭವಾಗಬೇಕು ಎಂಬ ಉದಾತ ಧ್ಯೇಯದಿಂದ ಈ ಸಾತ್ವಿಕ ಮೂರ್ತಿಯ ಆಯಾಮಗಳನ್ನು ಸಮಾಜದ ಶಿಲ್ಪಿಗಳಿಗೂ ನೀಡಲಾಗುತ್ತಿದೆ.

ಚಿತ್ರಕಲೆ

ಪರಾತ್ಪರ ಗುರು ಡಾ. ಆಠವಲೆಯವರು ಕಲೆಯನ್ನು ದೇವರಿಗೆ ಅರ್ಪಿಸುವಾಗ ಅಹಂ ತ್ಯಜಿಸಿ ‘ಈ ಸೇವೆಯು ನನ್ನನ್ನು ದೇವರೆಡೆಗೆ ಕರೆದೊಯ್ಯುವ ಮಾಧ್ಯಮವಾಗಿದೆ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಚಿತ್ರಕಲೆಯ ಸಾಧನೆಯನ್ನು ಮಾಡಲು ಕಲಿಸುತ್ತಿದ್ದಾರೆ. ೩೦ ವರ್ಷಗಳಿಂದ ಕಲಾಜಗತ್ತಿನ ವಿವಿಧ ಸಕಾರಾತ್ಮಕ ಮತ್ತು ನಕಾರಾತ್ಮಕ ಅತೇಂದ್ರಿಯಃ ಶಕ್ತಿಗಳ ಅಧ್ಯಯನ ಮಾಡಿ, ಜನರಿಗೆ ಕಲೆಯ ಮಾಧ್ಯಮದಿಂದ ಅಧ್ಯಾತ್ಮದ ಹೇಳಿಕೊಡುವ ಅಮೂಲ್ಯ ಕಾರ್ಯ ನಡೆಯುತ್ತಿದೆ. ಚಿತ್ರಕಲೆಯ ಪ್ರತಿಯೊಂದು ಸೂಕ್ಷ್ಮ ಸೂತ್ರಗಳನ್ನು ಕಲಿಯುವುದಲ್ಲದೆ, ಚಿತ್ರ ಆಕರ್ಷಕ ಮಾತ್ರವಲ್ಲ ಅದು ಹೇಗೆ ಸಾತ್ವಿಕವಾಗಿ ಕೂಡ ಇರಬೇಕು ಎಂಬುವುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಕಲಿಸಿಕೊಡುತ್ತಿದ್ದಾರೆ.

ಸೂಕ್ಷ್ಮ-ಚಿತ್ರಕಲೆ

ಕಣ್ಣಿಗೆ ಕಾಣಿಸದ ಅದೃಶ್ಯ ವಿಷಯಗಳ ಬಗ್ಗೆ ಸೂಕ್ಷ್ಮ ದೃಷ್ಟಿಯಿಂದ ನೋಡಿ ಬಿಡಿಸಿದ ಚಿತ್ರಗಳು ಎಂದರೆ ಸೂಕ್ಷ್ಮ ಚಿತ್ರಗಳು. ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮ- ಚಿತ್ರಕಲೆಯ ಮಾಧ್ಯಮದಿಂದ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುತ್ತಿದ್ದಾರೆ. ಸೂಕ್ಷ್ಮ ದೃಷ್ಟಿಯಿಂದ ನೋಡುವಾಗ ಸ್ಪಂದನಗಳು, ವಲಯಗಳು, ಅಲೆಗಳು, ಲಹರಿ, ಕಿರಣಗಳು, ಪ್ರಕಾಶ ಇತ್ಯಾದಿ ಗೋಚರಿಸುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸೂಕ್ಷ್ಮ ಚಿತ್ರಗಳಲ್ಲಿ ಕಾಣಿಸುವ ಸ್ಪಂದನಗಳ ಅರ್ಥ ಮತ್ತು ಕಾರ್ಯವನ್ನು, ಸೂಕ್ಷ್ಮದಲ್ಲಿ ನಡೆಯುವ ಪ್ರಕ್ರಿಯೆಯನ್ನು ಕಲಿಸಿದರು. ಈ ಮಾಧ್ಯಮದಿಂದ ಬುದ್ಧಿಗೆ ನಿಲುಕದ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ಸ್ತರದಲ್ಲಿರುವ ಸೂಕ್ಷ್ಮ ಚಿತ್ರಗಳನ್ನು ಬಿಡಿಸಲು ಕಲಿಸಿದರು.

ಪುಷ್ಪರಚನೆ

೬೪ ವಿದ್ಯೆಗಳಲ್ಲಿ ಹೂವುಗಳ ವಿನ್ಯಾಸವು ಒಂದು ಕಲೆಯಾಗಿದೆ. ಸನಾತನದ ಸಾಧಕರಾದ ಶ್ರೀ. ಪ್ರಶಾಂತ ಚಂದರಗಿಯವರು ಪೂಜೆಗೆ ಬೇಕಾಗುವ ಹೂವುಗಳನ್ನು ತರುವಾಗ, ಅವುಗಳನ್ನು ಬುಟ್ಟಿಯಲ್ಲಿ ವಿವಿಧ ಆಕರ್ಷಕ ವಿನ್ಯಾಸಗಳಲ್ಲಿ ಜೋಡಿಸಿ ಇಡುತ್ತಾರೆ. ಈ ವಿನ್ಯಾಸಗಳು ನೋಡಲು ಸುಂದರವಾಗಿರುತ್ತವೆ ಹಾಗೂ ಮಾರಾಟಕ್ಕೆ ಇಡುವ ಪುಷ್ಪಗುಚ್ಛಗಳ ತುಲನೆಯಲ್ಲಿ ಸಾತ್ವಿಕವಾಗಿರುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕರಿಗೆ ಜೀವನದ ಪ್ರತಿಯೊಂದು ಕೃತಿಯನ್ನು ಕೂಡ ಕಲಾತ್ಮಕವಾಗಿ ಅಂದರೆ ‘ಸತ್ಯಂ, ಶಿವಂ, ಸುಂದರಂ’ ಮಾಡುವ ಅಭ್ಯಾಸವೇ ಆಗಿದೆ ಎಂದು ಇದರಿಂದ ತಿಳಿದು ಬರುತ್ತದೆ.

ಧ್ವನಿಚಿತ್ರೀಕರಣ

ಆಧುನಿಕ ಯುಗದಲ್ಲಿ ದೂರದರ್ಶನ ಮತ್ತು ಗಣಕಯಂತ್ರಗಳ ಜನಮನದಲ್ಲಿ ಹೆಚ್ಚುತ್ತಿರುವ ಪ್ರಭಾವವನ್ನು ಗುರುತಿಸಿ ಪರಾತ್ಪರ ಗುರು ಡಾ. ಅಠವಲೆಯವರು ತಮ್ಮ ಗುರುಗಳಾದ ಪ. ಪೂ. ಭಕ್ತರಾಜ ಮಹಾರಾಜರು ಸ್ವತಃ ರಚಿಸಿ ಹಾಡಿದ ಭಜನೆಗಳ ಧ್ವನಿಸುರುಳಿಗಳಿಂದ ಪ್ರಾರಂಭಗೊಂಡು ಮುಂದೆ ಮನೆಮನೆಗೆ ಅಧ್ಯಾತ್ಮಶಾಸ್ತ್ರ ತಲುಪಿಸಲು ವಿವಿಧ ವಿಷಯಗಳ ಧ್ವನಿಚಿತ್ರ CD ಮತ್ತು ಡಿವಿಡಿಗಳನ್ನು ತಯಾರಿಸಲು ಸಾಧಕರಿಗೆ ಮಾರ್ಗದರ್ಶನ ಮಾಡಿದರು. ಈ ಸೇವೆಯ ಮುಖಾಂತರ ಸರ್ವೇಸಾಮಾನ್ಯ ಜನರಿಗೆ ಸುಲಭ ಭಾಷೆಯಲ್ಲಿ ಅಧ್ಯಾತ್ಮ, ಸಾಧನೆ ಮತ್ತು ಧರ್ಮಶಾಸ್ತ್ರವನ್ನು ತಿಳಿಸಿಕೊಡುವುದಲ್ಲದೆ, ಸೇವೆಯನ್ನು ಮಾಡುವ ಪ್ರತಿಯೊಬ್ಬರ ಆಧ್ಯಾತ್ಮಿಕ ಉನ್ನತಿಯಾಗಬೇಕು ಎಂಬ ಉದಾತ್ತ ಧ್ಯೇಯವಿದೆ. Read more…

ಕೃತಿಗಳಿಂದ ಕಲಿಸುವುದು

ಪರಾತ್ಪರ ಗುರು ಡಾ. ಆಠವಲೆಯವರು ಕಟ್ಟಡ ನಿರ್ಮಾಣದ ಸೇವೆಯನ್ನು ಮಾಡುವ ಸನಾತನದ ಸಾಧಕರಿಗೆ ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಹೇಗೆ ಮಾಡುವುದು, ಸಾಹಿತ್ಯದ ಯೋಗ್ಯ ಸ್ಥಳದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಹೇಗೆ ಉಪಯೋಗ ಮಾಡುವುದು, ಅಲ್ಪ ವೆಚ್ಚದಲ್ಲಿ ಒಳ್ಳೆಯ ಸೇವೆಯನ್ನು ಹೇಗೆ ಮಾಡುವುದು, ವ್ಯಾಪಕ ದೃಷ್ಟಿಕೋನ ಇಟ್ಟುಕೊಂಡು ಹೇಗೆ ಅಧ್ಯಯನ ಮಾಡುವುದು ಮುಂತಾದ ವ್ಯಾವಹಾರಿಕ ಮತ್ತು ವಸ್ತುಗಳ ಬಗ್ಗೆ ಕೃತಜ್ಞತೆಯ ಭಾವ ಇಟ್ಟುಕೊಳ್ಳುವಂತಹ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ಕೃತಿಗಳಿಂದ ಕಲಿಸಿದರು. ಪಾಕಶಾಲೆ(ಅಡುಗೆಮನೆ) ಯಲ್ಲಿ ಸೇವೆ ಮಾಡುವ ಸಾಧಕರಿಗೂ ಕೂಡ ಇದೇ ರೀತಿಯಲ್ಲಿ ಅವರ ಅಮೂಲ್ಯ ಮಾರ್ಗದರ್ಶನ ಲಭಿಸಿದ ಕಾರಣ ಇಂದು ಸನಾತನದ ಆಶ್ರಮಗಳಲ್ಲಿ ಅನ್ನದ ರೂಪದಲ್ಲಿ ಚೈತನ್ಯಯುಕ್ತ ಪ್ರಸಾದ ಲಭಿಸುತ್ತಿದೆ.

ಸಾಧಕರ ಮತ್ತು ಹಿಂದುತ್ವವಾದಿಗಳು ನಡೆದುಬಂದ ಸಾಧನೆಯ ಹಾದಿ

ಸಾಧಕರ ಸಾಧನೆಯ ಹಾದಿ

ಸಾಧನೆ ಮಾಡುವವರಿಗೆ ‘ಗುರುಕೃಪಾ ಹಿ ಕೇವಲಂ ಶಿಷ್ಯ ಪರಮಮಂಗಲಂ |’ ಅಂದರೆ ಶಿಷ್ಯನ ಪರಮ ಮಂಗಳ (ಮೋಕ್ಷಪ್ರಾಪ್ತಿಯು) ಕೇವಲ ಗುರುಕೃಪೆಯಿಂದ ಮಾತ್ರ ಸಾಧ್ಯವಾಗುತ್ತದೆ. ಗುರುಕೃಪೆಯನ್ನು ಸಂಪಾದಿಸುವುದೇ ಆಧ್ಯಾತ್ಮಿಕ ಪ್ರಗತಿಯ ಬೀಗದ ಕೀಲಿ. ಸನಾತನದ ಮತ್ತು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಇತರ ಸಂಘಟನೆಗಳ ಸಾಧಕರು ‘ಗುರುಕೃಪೆ-ಯೋಗಾನುಸಾರ ಸಾಧನೆಯನ್ನು’ ಅನುಸರಿಸುತ್ತಾರೆ. ಸಾಧಕರ ಭಾಗ್ಯವೆಂಬಂತೆ ಅವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನ ಲಭಿಸುವುದಲ್ಲದೇ, ‘ಸಾಧನೆಯಲ್ಲಿ ನಾವು ಎಲ್ಲಿದ್ದೇವೆ’ ಎಂದು ಕೂಡ ತಿಳಿದುಬರುತ್ತದೆ. ಕೇವಲ ವ್ಯಷ್ಟಿ ಸಾಧನೆ ಮಾತ್ರವಲ್ಲ, ಸಮಾಜ-ರಾಷ್ಟ್ರ-ಧರ್ಮಗಳ ಉತ್ಥಾನಕ್ಕಾಗಿ ಸಮಷ್ಟಿ ಸಾಧನೆಯನ್ನು ಕೂಡ ಹೇಳಿಕೊಡುವುದು ಸನಾತನದ ಮಾರ್ಗದರ್ಶನದ ವೈಶಿಷ್ಟ್ಯ. ಇಂತಹ ವ್ಯಾಪಕ ವಿಚಾರ ಮತ್ತು ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಯ ಧ್ಯೇಯ ಇರುವುದರಿಂದಲೇ ಈಶ್ವರನ ಕೃಪಾಶೀರ್ವಾದವು ಗುರುಕೃಪೆಯಿಂದ ಲಭಿಸುತ್ತಿದೆ. ಇದುವೇ ಸಾಧಕರ ವೇಗವಾದ ಆಧ್ಯಾತ್ಮಿಕ ಪ್ರಗತಿಯ ರಹಸ್ಯ. ಈ ಹಾದಿಯಲ್ಲಿ ಮೊದಲ ಮುಖ್ಯ ಮೈಲಿಗಲ್ಲು ಎಂದರೆ ಸಾಧಕರ ಆಧ್ಯಾತ್ಮಿಕ ಸ್ತರ ೬೧% ತಲಪುವುದು. ಇಂದು ೧೦೦೦ಕ್ಕೂ ಹೆಚ್ಚು ಸಾಧಕರು ಈ ಸ್ತರವನ್ನು ತಲುಪಿ ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯದತ್ತ ದಾಪುಗಾಲು ಇಟ್ಟಿದ್ದಾರೆ.

ಹಿಂದುತ್ವವಾದಿಗಳ ಆಧ್ಯಾತ್ಮಿಕ ಪ್ರಗತಿ

ವಿಶ್ವಕಲ್ಯಾಣಕ್ಕಾಗಿ ಕಾರ್ಯರತವಾಗಿರುವ ಸತ್ವಗುಣಿ ಜನತೆ (ರಾಜಕಾರಣಿಗಳು ಮತ್ತು ಪ್ರಜೆಗಳು) ಇರುವ ರಾಷ್ಟ್ರವೇ ‘ಹಿಂದೂ ರಾಷ್ಟ್ರ’ ಎಂದು ಹಿಂದೂ ರಾಷ್ಟ್ರದ ಆಧ್ಯಾತ್ಮಿಕ ವ್ಯಾಖ್ಯೆಯನ್ನು ನೀಡಿದ ಪರಾತ್ಪರ ಗುರು ಡಾ. ಆಠವಲೆಯವರು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವಶ್ಯಕವಾಗಿರುವ ಸತ್ವಗುಣಿ ಜನರನ್ನು ನಿರ್ಮಿಸಲು ಸ್ವತಃ ಪ್ರಯತ್ನಿಸುತ್ತಿದ್ದಾರೆ. ೨೦೧೧ ಪರಾತ್ಪರ ಗುರು ಡಾ. ಆಠವಲೆಯವರು ‘ದೇಶಭಕ್ತರಿಂದ ಮತ್ತು ಹಿಂದುತ್ವನಿಷ್ಠರಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯ ಆಗಬೇಕೆಂದು, ಅದಕ್ಕೆ ಭಾರತದ ಉದ್ದಗಲದಿಂದ ರಾಷ್ಟ್ರಪ್ರೇಮಿ ಮತ್ತು ಹಿಂದುತ್ವವಾದಿ ಸಂಘಟನೆಗಳನ್ನು ಒಂದೇ ವ್ಯಾಸಪೀಠದಲ್ಲಿ (ವೇದಿಕೆ) ಸೇರಿಸುವ ವಿಚಾರವನ್ನು ಮಂಡಿಸಿದರು. ಈ ವಿಚಾರದಿಂದ ಪ್ರೇರಣೆ ಪಡೆದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ೨೦೧೨ ರಿಂದ ಪ್ರತಿವರ್ಷ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು, ಅಲ್ಲದೆ ರಾಜ್ಯ ಸ್ತರದಲ್ಲಿ ಮತ್ತು ಜಿಲ್ಲಾ ಸ್ತರದಲ್ಲಿ ಅಧಿವೇಶನಗಳನ್ನು ನಡೆಸುತ್ತಾ ಬಂದಿದ್ದಾರೆ. ಇದರಲ್ಲಿ ಸಹಭಾಗಿಯಾಗುವ ಕೆಲವು ಹಿಂದುತ್ವವಾದಿಗಳು ರಾಷ್ಟ್ರ ಮತ್ತು ಧರ್ಮದ ಉತ್ಥಾನದ ತೀವ್ರ ತಳಮಳದಿಂದ ಜನ್ಮ ಮತ್ತು ಮೃತ್ಯುವಿನ ಚಕ್ರದಿಂದ ಮುಕ್ತರಾಗಿ ಮಹರ್ಲೋಕದಲ್ಲಿ ಸ್ಥಾನ ಪಡೆದಿದ್ದರೆ. ‘ನಿಸ್ವಾರ್ಥ ಸೇವೆಯಿಂದ ಆಧ್ಯಾತ್ಮಿಕ ಪ್ರಗತಿಯನ್ನು ಕೂಡ ಹೊಂದಬಹುದು’ ಎಂದು ಸಾಧಿಸಿ ರಾಷ್ಟ್ರಹಿತದ ಕಾರ್ಯ ಮಾಡಲು ಇಚ್ಛಿಸುವವರ ಮುಂದೆ ಒಂದು ಆದರ್ಶವನ್ನು ನಿರ್ಮಿಸಿದ್ದಾರೆ.

ಸನಾತನದ ಸಂತರು

ಸ್ಥೂಲದಲ್ಲಿ ನಡೆಯುವಂತಹ ಪ್ರತಿಯೊಂದು ಘಟನೆಯು ಸೂಕ್ಷ್ಮದಲ್ಲಿ ಮೊದಲೇ ಘಟಿಸಿರುತ್ತದೆ. ಪೃಥ್ವಿಯ ಮೇಲೆ ಸನಾತನ ಧಾರ್ಮ ರಾಜ್ಯವನ್ನು ಸ್ಥಾಪಿಸಲು ನಡೆಯುತ್ತಿರುವ ಸೂಕ್ಷ್ಮ ಯುದ್ಧದಲ್ಲಿ ದೇವತೆಗಳು ಮತ್ತು ಸಂತರು ಭುವರ್ಲೋಕದಿಂದ ೬ನೇ ಪಾತಾಳದ ವರೆಗಿನ ಅಸುರೀ ಶಕ್ತಿಗಳನ್ನು ಪರಾಭವಗೊಳಿಸಿದ್ದಾರೆ. ಭಾರತದಲ್ಲಿ ಈಗ ಎಲ್ಲೆಡೆ ಕಾಣಸಿಗುವ ತಾಮಸಿಕ ರಾಜಕೀಯ ಪಕ್ಷಗಳ ಪರಾಭವ ಮತ್ತು ರಾಜಸಿಕ ರಾಜಕೀಯ ಪಕ್ಷಗಳ ವಿಜಯ ಇದರ ಸ್ಥೂಲ ಪರಿಣಾಮ. ಏಳನೆಯ ಪಾತಾಳದ ಅಸುರೀ ಶಕ್ತಿಗಳನ್ನು ಪರಾಭವಗೊಳಿಸುವ ಬ್ರಹ್ಮತೇಜ (ಆಧ್ಯಾತ್ಮಿಕ ಬಲ) ಉಳ್ಳ ೧೦೦ ಸಂತರ ಅವಶ್ಯಕತೆ ಇದೆ. ಇಂತಹ ಸಂತರನ್ನು ನಿರ್ಮಿಸಲು ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾರ್ಚ್ ೨೦೧೭ ರ ವರೆಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ೭೦ ಸಾಧಕರು ಸಂತರಾಗಿದ್ದು ಮುಂಬರುವ ೨-೩ ವರ್ಷಗಳಲ್ಲಿ ಈ ಸಂಖ್ಯೆ ೧೦೦ ದಾಟಲಿದೆ. ಈ ೧೦೦ ಸಂತರ ಮಾಧ್ಯಮದಿಂದ ಏಳನೇ ಪಟಲದ ಅಸುರೀ ಶಕ್ತಿಗಳ ಪರಾಭವ ಆದ ನಂತರವೇ ಅದರ ಸ್ಥೂಲ ಪರಿಣಾಮ ಗೋಚರಿಸಲಿದೆ, ಅಂದರೆ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ.

ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ

ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ ಎಂದು ಪರಾತ್ಪರ ಗುರು ಡಾ. ಆಠವಲೆ ಮತ್ತು ಅನೇಕ ಸಂತರ ಹೇಳಿದ್ದಾರೆ. ಹಿಂದೂ ರಾಷ್ಟ್ರವನ್ನು ನಡೆಸಲು ಸಾಧಕರಿಗೆ ಪಾತ್ರತೆ ಇರುತ್ತದೆ ಏಕೆಂದರೆ ಸಾಮಾನ್ಯ ಜನರ ತುಲನೆಯಲ್ಲಿ ಸಾಧಕರಲ್ಲಿ ಸತ್ವ ಗುಣವು ಅಧಿಕವಾಗಿರುತ್ತದೆ. ‘ಆಧ್ಯಾತ್ಮಿಕವಾಗಿ ಜನರ ಕಲ್ಯಾಣವಾಗಬೇಕು’ ಎಂಬ ವಿಚಾರ ಮತ್ತು ಕೃತಿಯನ್ನು ಕೇವಲ ಸಾಧಕರೇ ಮಾಡಬಲ್ಲರು. ಅವರಲ್ಲಿ ಭಾವ, ತಳಮಳ, ತ್ಯಾಗ, ಪ್ರೇಮಭಾವ ಇತ್ಯಾದಿ ಗುಣಗಳಿರುತ್ತವೆ. ಇವರು ನಿಷ್ಕಾಮ ಭಾವದಿಂದ ಸಾಧನೆಯೆಂದು ಅಂದರೆ ಈಶ್ವರಪ್ರಾಪ್ತಿಗಾಗಿ ಹಿಂದೂ ರಾಷ್ಟ್ರವನ್ನು ನಡೆಸುವರು. ಸಾಮಾನ್ಯ ಜನರಿಗಿಂತ ಉಚ್ಚ ಆಧ್ಯಾತ್ಮಿಕ ಸ್ತರವಿರುವ, ಅಂದರೆ ಹಿಂದಿನ ಜನ್ಮದ ಸಾಧನೆಯ ಬಲವಿರುವ ಅನೇಕ ಮಕ್ಕಳನ್ನು ದೇವರು ಸನಾತನಕ್ಕೆ ಪರಿಚಯಿಸಿದ್ದಾರೆ. ಇಂದಿನ ವರೆಗೆ ಉಚ್ಚ ಸ್ವರ್ಗ ಮತ್ತು ಮಹರ್ ಲೋಕಗಳಿಂದ ಪೃಥ್ವಿಯ ಮೇಲೆ ಜನ್ಮತಾಳಿರುವ ೧೦೦೦ಕ್ಕೂ ಹೆಚ್ಚು ಮಕ್ಕಳನ್ನು ಮತ್ತು ಯುವಕರನ್ನು ಸನಾತನ ಗುರುತಿಸಿದೆ. ಅದರಲ್ಲಿ ೯೬ ಜನರ ಆಧ್ಯಾತ್ಮಿಕ ಮಟ್ಟ ೬೧% ಅಥವಾ ಅದಕ್ಕಿಂತಲೂ ಹೆಚ್ಚಿದೆ.

ಸಂತರು ಗುರುತಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯ !

ಸಂತರ ಕಾರ್ಯವು ಆಧ್ಯಾತ್ಮಿಕ ಸ್ತರದಲ್ಲಿ ನಡೆಯುವುದರಿಂದ ಅವರಿಗೆ ಲೌಕಿಕ ಸನ್ಮಾನ ಮತ್ತು ಪುರಸ್ಕಾರಗಳ ಬಗ್ಗೆ ಒಲವಿರುವುದಿಲ್ಲ. ಮನೋಲಯ ಮತ್ತು ಅಹಂಲಯ ಆಗಿರುವುದರಿಂದ ಸಂತರು ಸಾಮಾಜಿಕ ಪ್ರತಿಷ್ಠೆ ಒದಗಿಸುವ ಸನ್ಮಾನ ಮತ್ತು ಪುರಸ್ಕಾರಗಳ ಆಚೆ ಹೋಗಿರುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರೂ ಇದಕ್ಕೆ ಹೊರತಲ್ಲ. ಹೀಗಿದ್ದರೂ ಸಂತರೇ ಸಂತರನ್ನು ಗುರುತಿಸಬಹುದು. ಅನೇಕ ಸಂತರು ಪರಾತ್ಪರ ಗುರು ಡಾ. ಆಠವಲೆಯವರು ಮಾಡುತ್ತಿರುವ ಆಧ್ಯಾತ್ಮಿಕ ಕಾರ್ಯದ ಮಹತ್ವವನ್ನು ಗುರುತಿಸಿ ಅವರನ್ನು ಸನ್ಮಾನಿಸಿದ್ದಾರೆ. ಪ. ಪೂ. ಭಾವು ಮಸೂರ್ಕರ್ (ಸಾವಂತವಾಡಿ), ಪ. ಪೂ. ತೊಡಕಾರ ಮಹಾರಾಜರು (ಕೊಲ್ಹಾಪುರ) ಪರಾತ್ಪರ ಗುರು ಡಾ. ಆಠವಲೆಯವರನ್ನು ಸನ್ಮಾನಿಸಿದ್ದಾರೆ. ಅಲ್ಲದೆ ಅವರು ಜಾಸೂಸಿ ನಜರೇ ಪ್ರಕಾಶನ (ಠಾಣೆ) ವತಿಯಿಂದ ಭಾರತ ಗೌರವ ರತ್ನ ಪುರಸ್ಕಾರ, ಸೋಲಾಪುರದ ಶನೈಶ್ವರ ದೇವಸ್ಥಾನದ ವತಿಯಿಂದ ಶನೈಶ್ವರ ಕೃತಜ್ಞತಾ ಧರ್ಮ ಪುರಸ್ಕಾರ, ಪರಮ ಪೂಜ್ಯ ಯೋಗತಜ್ಞ ದಾದಾಜಿ ವೈಶಂಪಾಯನ ಸತ್ಕರ್ಮ ಸೊಸೈಟಿ (ಮುಂಬೈ) ವತಿಯಿಂದ ಯೋಗತಜ್ಞ ದಾದಾಜಿ ವೈಶಂಪಾಯನ ಗುಣಗೌರವ ಪುರಸ್ಕಾರ ಇತ್ಯಾದಿಗಳಿಂದ ಸನ್ಮಾನಿತರಾಗಿದ್ದರೆ.