ಜಾಲತಾಣದಲ್ಲಿ ಉಪಯೋಗಿಸಿದ ಕೆಲವು ಆಧ್ಯಾತ್ಮಿಕ ಪರಿಭಾಷೆಗಳ ಅರ್ಥ

ಸಂಕಲನಕಾರರ ವೈಜ್ಞಾನಿಕ ದೃಷ್ಟಿಕೋನ

ಈ ಜಾಲತಾಣದ ಬರವಣಿಗೆಯನ್ನು ವಾಚಕರಿಗೆ ‘ಸಂವಿಧಾನದ ಪರಿಚ್ಛೇದ ೫೧ಅಗನುಸಾರ ವೈಜ್ಞಾನಿಕ ದೃಷ್ಟಿಕೋನವನ್ನಿಡಲು’ ಅಡ್ಡಿಪಡಿಸಲು ಬರೆದಿಲ್ಲ. ಸಂವಿಧಾನವು ‘ಪರಿಚ್ಛೇದ ೨೫’ಕ್ಕನುಸಾರ ವ್ಯಕ್ತಿಗೆ ಧರ್ಮಪಾಲನೆಯ ಮತ್ತು ಧರ್ಮಪ್ರಸಾರದ ಅಧಿಕಾರವನ್ನು ಕೊಟ್ಟಿದೆ. ಧಾರ್ಮಿಕ ಭಾವನೆಗಳು ತೋರಿಕೆಗೆ ಹೇಗೆ ಕಂಡರೂ, ಅವುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರ ಅಥವಾ ನ್ಯಾಯಾಲಯಗಳಿಗಿಲ್ಲ ಎಂಬುದು ನ್ಯಾಯಾಲಯಗಳ ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ಈ ಹಸ್ತಕ್ಷೇಪವನ್ನು ಕೇವಲ ಸಾಮಾಜಿಕ ಶಾಂತತೆ, ನೈತಿಕತೆ ಮತ್ತು ಆರೋಗ್ಯಕ್ಕೆ ಅಪಾಯವಾಗುತ್ತಿದ್ದರೆ ಮಾತ್ರ ಮಾಡಬಹುದು. ಪ್ರಸ್ತುತ ಜಾಲತಾಣವನ್ನು ಈ ಮೂರೂ ವಿಷಯಗಳಿಗೆ ಅಪಾಯ ತಂದೊಡ್ಡಲು ಬರೆದಿಲ್ಲ. ಸಂವಿಧಾನಾತ್ಮಕ ಅಧಿಕಾರವನ್ನು ಉಪಯೋಗಿಸಿ ಅಧ್ಯಾತ್ಮದ ಅಧ್ಯಯನವನ್ನು ಮಾಡಲು ಮತ್ತು ಧರ್ಮಾಚರಣೆಯನ್ನು ಕಲಿಸಲು ಬರೆಯಲಾಗಿದೆ.

ಶ್ರದ್ಧೆಯಿಂದ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿದರೆ ಧರ್ಮದ ಬಗೆಗಿನ ವಿವಿಧ ಅನುಭವ (ಅನುಭೂತಿ) ಗಳು ಬರುತ್ತವೆ ಎಂಬುದು ಇಂದಿನ ವರೆಗಿನ ಇತಿಹಾಸವಾಗಿದೆ. ಧರ್ಮ ಮತ್ತು ಶ್ರದ್ಧೆಯು ವೈಯಕ್ತಿಕವಾಗಿರುವುದರಿಂದ ಪ್ರಸ್ತುತ ಜಾಲತಾಣದಲ್ಲಿ ಕೊಟ್ಟಿರುವ ಅನುಭವಗಳೂ ವೈಯಕ್ತಿಕವೇ ಆಗಿವೆ. ಆದುದರಿಂದ ಅವು ಸಾರಾಸಗಟಾಗಿ ಎಲ್ಲರಿಗೂ ಅನ್ವಯಿಸುತ್ತವೆ ಅಥವಾ ಎಲ್ಲರಿಗೂ ಅವು ಬರುತ್ತವೆ ಎಂದೇನಿಲ್ಲ. ಸಮಾಜದಲ್ಲಿ ಅಂಧಶ್ರದ್ಧೆಯನ್ನು ಹರಡಲು ಅಥವಾ ವೈದ್ಯಕೀಯ ಉಪಚಾರ ಗಳಿಗೆ ಅಥವಾ ವೈಜ್ಞಾನಿಕ ದೃಷ್ಟಿಕೋನವನ್ನು ವಿರೋಧಿಸಲು ಈ ಜಾಲತಾಣದಲ್ಲಿನ ಲೇಖನಗಳನ್ನು ಬರೆದಿಲ್ಲ. ವಾಚಕರು ಜಾಗರೂಕರಾಗಿದ್ದು ವಿಚಾರಪೂರ್ವಕವಾಗಿ ಈ ಜಾಲತಾಣದ ಅಧ್ಯಯನ ಮಾಡುವುದು ಅಪೇಕ್ಷಿತವಿದೆ ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಬೇಕು.
– ಸಂಕಲನಕಾರರು

ಜಾಲತಾಣದಲ್ಲಿ ಉಪಯೋಗಿಸಿದ ಕೆಲವು ಆಧ್ಯಾತ್ಮಿಕ ಪರಿಭಾಷೆಗಳ ಅರ್ಥ

ಆಧ್ಯಾತ್ಮಿಕ ಉಪಾಯಗಳು: ಯಾರಾದರೊಬ್ಬರ ಮನಸ್ಸಿನಲ್ಲಿ ತುಂಬಾ ವಿಚಾರಗಳು ಬರುತ್ತಿರುವಾಗ, ಮನಸ್ಸು ಏಕಾಗ್ರವಾಗದಿರುವಾಗ, ಮಾನಸಿಕ ದೃಷ್ಟಿಯಿಂದ ಅಸ್ವಸ್ಥ ಅಥವಾ ಅಶಾಂತವೆನಿಸುತ್ತಿದ್ದಾಗ ಜಪ, ಧ್ಯಾನ, ಪ್ರಾಣಾಯಾಮ, ಮಂತ್ರಜಪ, ಪ್ರಾರ್ಥನೆ ಮುಂತಾದ ಆಧ್ಯಾತ್ಮಿಕ ಕೃತಿಗಳನ್ನು ಮಾಡುವುದರಿಂದ ಅಥವಾ ಅವುಗಳನ್ನು ಮಾಡಲು ಯಾರಾದರೊಬ್ಬ ಉನ್ನತ ಸಾಧಕರು ಅಥವಾ ಸಂತರು ಸಹಾಯ ಮಾಡಿದ್ದರಿಂದ ಅಥವಾ ಅವರ ಸಾನ್ನಿಧ್ಯದಲ್ಲಿ ಜಪ ಮಾಡಿದ್ದರಿಂದ ಸಾಧಕನ ಮನಸ್ಸು ಸ್ಥಿರವಾಗುತ್ತದೆ ಅಥವಾ ಪ್ರಸನ್ನವಾಗುತ್ತದೆ. ಈ ಆಧ್ಯಾತ್ಮಿಕ ಕೃತಿಗಳಿಗೆ ‘ಆಧ್ಯಾತ್ಮಿಕ ಉಪಾಯ’ಗಳು ಎಂದು ಹೇಳುತ್ತಾರೆ.

ಜಾಲತಾಣದಲ್ಲಿರುವ ಶೇಕಡಾವಾರು ಭಾಷೆ: ಈ ಜಾಲತಾಣದಲ್ಲಿ ಅಲ್ಪ, ಮಧ್ಯಮ ಮತ್ತು ಹೆಚ್ಚು ಇವುಗಳನ್ನು ಅವುಗಳ ಪ್ರಮಾಣಕ್ಕನುಸಾರ ಕ್ರಮವಾಗಿ ಶೇ.೧ ರಿಂದ ಶೇ.೩೦, ಶೇ.೩೧ರಿಂದ ಶೇ.೬೦ ಮತ್ತು ಶೇ.೬೧ ರಿಂದ ಶೇ.೧೦೦ ಎಂದು ಹೇಳಿದ್ದಾರೆ.

‘ಕಪ್ಪು ಶಕ್ತಿ’ ಮತ್ತು ಅಂತಹ ಇತರ ಶಬ್ದಗಳು: ಈ ಜಾಲತಾಣದಲ್ಲಿ ‘ಕಪ್ಪು ಶಕ್ತಿ, ಹಾಗೆಯೇ ತ್ರಾಸದಾಯಕ/ ಮಾಯಾವಿ/ಅನಿಷ್ಟ ಶಕ್ತಿ’ಯಂತಹ ಎಲ್ಲ ಶಬ್ದಗಳನ್ನು ಧರ್ಮಗ್ರಂಥಗಳಲ್ಲಿ (ಉದಾ. ಶ್ರೀಮದ್ಭಗವದ್ಗೀತೆಯಲ್ಲಿ) ವರ್ಣಿಸಲಾಗಿರುವ ‘ತಮ’ ಅಥವಾ ‘ತಮೋಗುಣ’ ಎಂಬ ಅರ್ಥದಲ್ಲಿ ಮತ್ತು ‘ಕಪ್ಪು ಆವರಣ, ಹಾಗೆಯೇ ಕಪ್ಪು ಲಹರಿಗಳು/ಸ್ಪಂದನಗಳು/ಕಣ’ಗಳಂತಹ ಶಬ್ದಗಳನ್ನು ‘ತಮೋಗುಣದ ಆವರಣ, ಹಾಗೆಯೇ ತಮೋಗುಣಿ ಲಹರಿಗಳು/ಸ್ಪಂದನಗಳು/ಕಣಗಳು’ ಎಂಬ ಅರ್ಥದಲ್ಲಿ ಬಳಸಲಾಗಿದೆ. ‘ತಮ’ ಎಂಬ ಸಂಸ್ಕೃತ ಶಬ್ದದ ಅರ್ಥ ‘ಕತ್ತಲೆ’ ಎಂದಾಗಿದೆ. ಕತ್ತಲೆ ಕಪ್ಪಾಗಿರುವುದರಿಂದ ‘ತಮ’ ಅಥವಾ ‘ತಮೋಗುಣ’ ಕಪ್ಪಾಗಿರುವುದನ್ನು ವರ್ಣಿಸಲಾಗಿದೆ, ಹಾಗೆಯೇ ಚಿತ್ರಿಸಲಾಗಿದೆ.

ಸಾಧಕರಿಗೆ ಸಿಗುವ ಈಶ್ವರೀ ಜ್ಞಾನವು ಅವರ ಅಧ್ಯಾತ್ಮದಲ್ಲಿನ ಪ್ರತಿಭೆ ಜಾಗೃತವಾಗಿರುವುದರ ಅನುಭೂತಿ !

ಸನಾತನದ ಕೆಲವು ಸಾಧಕರು ಅನೇಕ ವರ್ಷಗಳಿಂದ ಸಾಧನೆಯನ್ನು (ತಪಸ್ಸು) ಮಾಡುತ್ತಿರುವುದರಿಂದ ಅವರ ಅಧ್ಯಾತ್ಮದಲ್ಲಿನ ಪ್ರತಿಭೆ ಜಾಗೃತವಾಗಿ ಅವರಿಗೆ ವಿವಿಧ ವಿಷಯಗಳ ಬಗ್ಗೆ ‘ಜ್ಞಾನ’ ಸಿಗುತ್ತಿದೆ. ಇದು ಅನುಭೂತಿಯೇ ಆಗಿದೆ. ಅನುಭೂತಿಗಳು ಬರುವುದರ ಬಗೆಗಿನ ಧರ್ಮಶಾಸ್ತ್ರೀಯ ಆಧಾರ ಮುಂದಿನಂತಿದೆ –

ತತಃ ಪ್ರಾತಿಭಶ್ರಾವಣವೇದನಾದರ್ಶಾಸ್ವಾದವಾರ್ತಾ ಜಾಯಂತೇ|
– ಪಾತಂಜಲಯೋಗದರ್ಶನ, ಪಾದ ೩, ಸೂತ್ರ ೩೬

ಅರ್ಥ : ಆತ್ಮದ ಸ್ಥಳದಲ್ಲಿ ಸಂಯಮವನ್ನು (ಯೋಗಾಭ್ಯಾಸ ಅಥವಾ ಧ್ಯಾನ) ಮಾಡುವುದರಿಂದ ಪ್ರತಿಭಾಸಾಮರ್ಥ್ಯದಿಂದ ಸೂಕ್ಷ್ಮ, ವ್ಯವಹಿತ (ಅಡಗಿದ) ಅಥವಾ ಅತಿದೂರದ ವಸ್ತುಗಳ ಜ್ಞಾನವಾಗುವುದು (ಅಂತರ್ದೃಷ್ಟಿ ಪ್ರಾಪ್ತವಾಗುವುದು), ದಿವ್ಯ (ದೈವೀ) ನಾದ ಕೇಳಿಸುವುದು, ದಿವ್ಯ ಸ್ಪರ್ಶದ ಅರಿವಾಗುವುದು, ದಿವ್ಯ ರೂಪ ಕಾಣಿಸುವುದು, ದಿವ್ಯ ರಸದ ರುಚಿಯನ್ನು ಅನುಭವಿಸಲು ಸಾಧ್ಯವಾಗುವುದು ಮತ್ತು ದಿವ್ಯ ಸುಗಂಧದ ಅರಿವಾಗುವುದು ಈ ಸಿದ್ಧಿಗಳು ಪ್ರಾಪ್ತವಾಗುತ್ತವೆ.

ವಿಶ್ಲೇಷಣೆ : ಸನಾತನದ ಕೆಲವು ಸಾಧಕರಿಗೆ, ಹಾಗೆಯೇ ಇತರ ಕೆಲವು ಸಾಧಕರಿಗೆ ಶ್ಲೋಕದಲ್ಲಿ ವರ್ಣಿಸಿದಂತೆ ಯಾವುದಾದರೊಂದು ವಿಷಯದ ಬಗ್ಗೆ ಚಿಂತನೆಯನ್ನು ಮಾಡದಿರುವಾಗಲೂ ಅದರ ಬಗ್ಗೆ ಪ್ರತಿಭೆ ಜಾಗೃತವಾಗಿ ಜ್ಞಾನ ಸಿಗುವುದು, ದಿವ್ಯ ನಾದ ಕೇಳಿಸುವುದು, ಸೂಕ್ಷ್ಮರೂಪ (ಸೂಕ್ಷ್ಮಚಿತ್ರ) ಕಾಣಿಸುವುದು ಮುಂತಾದ ವಿವಿಧ ರೀತಿಯ ಅನುಭೂತಿಗಳು ಬರುತ್ತಿವೆ. ಇದರಿಂದ ಸಾಧಕರಿಗೆ ಸಿಗುವ ಜ್ಞಾನವಿರಲಿ ಅಥವಾ ಯೋಗಾಭ್ಯಾಸದಿಂದ ಜಾಗೃತವಾಗುವ ಅಂತರ್ದೃಷ್ಟಿಯಿರಲಿ, ಇವೆರಡಕ್ಕೂ ಧರ್ಮಶಾಸ್ತ್ರೀಯ ಆಧಾರವಿದೆ ಎಂಬುದು ದೃಢವಾಗುತ್ತದೆ.

ಜ್ಞಾನ ಸಿಗುವ ಸಾಧಕರ ನಮ್ರತೆ !

ಈ ಸಂದರ್ಭದಲ್ಲಿ ‘ಈ ಜ್ಞಾನವು ನನ್ನ ಜ್ಞಾನವಾಗಿರದೇ ಸಾಕ್ಷಾತ್ ಈಶ್ವರನ ಜ್ಞಾನವಾಗಿದೆ’ ಎಂಬುದು ಸಂಬಂಧಿತ ಸಾಧಕರ ಭಾವವಾಗಿರುತ್ತದೆ. ಅಹಂಕಾರ ಹೆಚ್ಚಾಗಬಾರದೆಂದು ಅವರು ಜ್ಞಾನದ ಕೊನೆಯಲ್ಲಿ ತಮ್ಮ ಹೆಸರು ಬರೆಯದೇ ತಮ್ಮ ಶ್ರದ್ಧಾಸ್ಥಾನದ ಹೆಸರು ಬರೆಯುತ್ತಾರೆ ಮತ್ತು ಕಂಸದಲ್ಲಿ ತಾವು ಮಾಧ್ಯಮವಾಗಿರುವುದನ್ನು ಬರೆಯುತ್ತಾರೆ, ಉದಾ. ಸೂಕ್ಷ್ಮಜಗತ್ತಿನ ‘ಓರ್ವ ವಿದ್ವಾಂಸ’ [(ಪೂ.) ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ]. ಸೂಕ್ಷ್ಮಜಗತ್ತಿನ ‘ಓರ್ವ ವಿದ್ವಾಂಸರು’ ಅವರಿಗೆ ಜ್ಞಾನ ಕೊಡುತ್ತಾರೆ ಎಂಬುದು ಪೂ.(ಸೌ.)ಅಂಜಲಿ ಗಾಡಗೀಳರ ಭಾವವಾಗಿರುತ್ತದೆ.

ಯಾವುದಾದರೊಂದು ವಿಷಯದ ಬಗ್ಗೆ ಬರೆಯುವಾಗ ತ್ರಾಸದಾಯಕವೆನಿಸಿದರೆ ಅವರು ಜ್ಞಾನದ ಕೊನೆಯಲ್ಲಿ ತಮ್ಮ ಹೆಸರು ಬರೆಯದೇ ‘ಓರ್ವ ಮಾಂತ್ರಿಕ’ ಈ ರೀತಿಯಲ್ಲಿ ಬರೆಯುತ್ತಾರೆ ಮತ್ತು ಕಂಸದಲ್ಲಿ ಸ್ವತಃ ಮಾಧ್ಯಮವಾಗಿರುವುದನ್ನು ಬರೆಯುತ್ತಾರೆ.

‘ಕೆಟ್ಟ ಶಕ್ತಿಗಳಿಂದಾಗುವ ತೊಂದರೆ’ ಎಂಬ ಸಂಜ್ಞೆಯ ಅರ್ಥ

ವಾತಾವರಣದಲ್ಲಿ ಒಳ್ಳೆಯ ಶಕ್ತಿ ಮತ್ತು ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿಗಳು ಮನುಷ್ಯನಿಗೆ ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡುತ್ತವೆ ಮತ್ತು ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದೊಡ್ಡುತ್ತಿದ್ದ ಅನೇಕ ಕಥೆಗಳು ವೇದ-ಪುರಾಣಗಳಲ್ಲಿವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿಗಳನ್ನು, ಉದಾ.ಅಸುರರನ್ನು, ರಾಕ್ಷಸರನ್ನು, ಪಿಶಾಚಿಗಳನ್ನು, ಪ್ರತಿಬಂಧಿಸಲು ಮಂತ್ರಗಳನ್ನು ಕೊಡಲಾಗಿವೆ.’ (ಟಿಪ್ಪಣಿ ೧) ಅವುಗಳಲ್ಲಿನ ಒಂದು ಮಂತ್ರವನ್ನು ಮುಂದೆ ಕೊಡಲಾಗಿದೆ.

ಸ್ತುವಾನಮಗ್ನ ಆ ವಹ ಯಾತುಧಾನಂ ಕಿಮೀದಿನಮ್|
ತ್ವಂ ಹಿ ದೇವ ವಂದಿತೋ ಹಂತಾ ದಸ್ಯೋರ್ಬಭೂವಿಥ||
– ಅಥರ್ವವೇದ, ಕಾಂಡ ೧, ಸೂಕ್ತ ೭, ಖಂಡ ೧

ಅರ್ಥ : ಎಲ್ಲರಲ್ಲಿ ಜಠರಾಗ್ನಿಯ ರೂಪದಲ್ಲಿರುವ, ಮಿಂಚು ಇತ್ಯಾದಿಗಳ ರೂಪದಲ್ಲಿ ಎಲ್ಲ ಜಗತ್ತನ್ನು ವ್ಯಾಪಿಸುವ ಮತ್ತು ಯಜ್ಞದಲ್ಲಿ ಅಗ್ರಣಿಯಾಗಿರುವ ಹೇ ಅಗ್ನಿಯೇ, ನಾವು ಯಾವ ದೇವತೆಗಳ ಸ್ತುತಿಯನ್ನು ಮಾಡುತ್ತಿರುವೆವೋ, ಅವರಿಗೆ ನೀನು ಈ ಹವಿರ್ಭಾಗವನ್ನು ತಲುಪಿಸು. ನಾವು ಕೊಟ್ಟ ಹವಿರ್ಭಾಗವನ್ನು ಪ್ರಶಂಸಿಸುವ ದೇವತೆಗಳನ್ನು ನಮ್ಮ ಹತ್ತಿರ ಕರೆದುಕೊಂಡು ಬಾ ಮತ್ತು ನಮ್ಮನ್ನು ಸಾಯಿಸಲಿಚ್ಛಿಸುವ ಗುಪ್ತರೂಪದಲ್ಲಿ (ಸೂಕ್ಷ್ಮರೂಪದಲ್ಲಿ) ತಿರುಗಾಡುವ ಕಿಮೀದಿನನ್ನು (ದುಷ್ಟ ಪಿಶಾಚಿಗಳಲ್ಲಿನ ಒಂದು ವಿಧ) ನಮ್ಮಿಂದ ದೂರ ಕೊಂಡೊಯ್ಯು; ಏಕೆಂದರೆ ದಾನ ಮುಂತಾದ ಗುಣಗಳಿಂದ ಯುಕ್ತವಾಗಿರುವ ದೇವನೇ, ನಾವು ವಂದಿಸಿದ ನಂತರ ನೀನು ಪ್ರಾಣ ಹೀರುವ ಯಾತುಧಾನ (ರಾಕ್ಷಸ) ಮುಂತಾದವರನ್ನು ಸಂಹರಿಸುತ್ತೀಯ; ಆದುದರಿಂದ ನೀನು ಇವನನ್ನು (ಈ ರಾಕ್ಷಸನನ್ನು) ನಿನ್ನ ಬಳಿಗೆ ಕರೆದುಕೊ ಅಥವಾ ಹೇ ಸ್ತೂಯಮಾನ ಅಗ್ನಿಯೇ, ಈ ರಾಕ್ಷಸನಿಗೆ ಪ್ರತೀಕಾರ ಮಾಡಲು ನೀನು ಈ ಪುರುಷನಿಗೆ ಸಾಮರ್ಥ್ಯವನ್ನು ಕೊಡು.

ತಾತ್ಪರ್ಯ, ಕೆಟ್ಟ ಶಕ್ತಿಗಳು ಮನುಷ್ಯನಿಗೆ ವಿವಿಧ ರೀತಿಯ ತೊಂದರೆಗಳನ್ನು ಕೊಡುತ್ತವೆ ಮತ್ತು ಈ ತೊಂದರೆಗಳ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದಾದಿ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸನಾತನದ ಗ್ರಂಥಗಳಲ್ಲಿ ಕೆಲವೆಡೆ ‘ಕೆಟ್ಟ ಶಕ್ತಿ’ ಅಥವಾ ‘ಆಧ್ಯಾತ್ಮಿಕ ತೊಂದರೆ’ ಎಂಬ ಶಬ್ದಗಳನ್ನು ಉಪಯೋಗಿಸಲಾಗಿದೆ. ಅವು ಈ ವಿಷಯಕ್ಕನುಸಾರವಾಗಿಯೇ ಇವೆ. ಕೆಟ್ಟ ಶಕ್ತಿಗಳ ಅಸ್ತಿತ್ವ ಮತ್ತು ಅವುಗಳ ಬಗೆಗಿನ ಸಂಶೋಧನೆಯ ಮಾಹಿತಿಯು ಲಕ್ಷಗಟ್ಟಲೆ ಜಾಲತಾಣಗಳಲ್ಲಿ ಉಪಲಬ್ಧವಿದೆ.

ಟಿಪ್ಪಣಿ ೧ – ಆಧಾರ: ಮರಾಠಿ ವಿಶ್ವಕೋಶ ಖಂಡ ೧, ಪ್ರಕಾಶಕರು: ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಸಂಸ್ಕೃತಿ ಮಂಡಳ, ಸಚಿವಾಲಯ, ಮುಂಬೈ – ೪೦೦ ೦೩೨, ೧ನೇ ಆವೃತ್ತಿ (೧೯೭೬), ಪುಟ ಸಂ.೧೯೪

ವಾಚಕರಿಗೆ ಈ ಜಾಲತಾಣದಲ್ಲಿ ಕೊಟ್ಟಿರುವ ಯಾವುದಾದರೊಂದು ಆಧ್ಯಾತ್ಮಿಕ ಸಂಜ್ಞೆಯು ಗಮನಕ್ಕೆ ಬರದಿದ್ದರೆ ದಯವಿಟ್ಟು ಅದರ ಬಗ್ಗೆ ತಿಳಿಸಬೇಕು.

ಸೂಕ್ಷ್ಮ ಶಬ್ದದ ಸಂದರ್ಭದಲ್ಲಿನ ಕೆಲವು ಸಂಜ್ಞೆಗಳ ಅರ್ಥ

ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ ವಿಷಯವೆಂದರೆ ಸೂಕ್ಷ್ಮ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ, ಉದಾ.

ಭಗವತೋ ನಾರಾಯಣಸ್ಯ ಸಾಕ್ಷಾನ್ಮಹಾಪುರುಷಸ್ಯ ಸ್ಥವಿಷ್ಠಂ ರೂಪಮ್ ಆತ್ಮಮಾಯಾಗುಣಮಯಮ್ ಅನುವರ್ಣಿತಮ್ ಆದೃತಃ ಪಠತಿ ಶೃಣೋತಿ ಶ್ರಾವಯತಿ ಸ ಉಪಗೇಯಂ ಭಗವತಃ ಪರಮಾತ್ಮನಃ ಅಗ್ರಾಹ್ಯಮ್ ಅಪಿ ಶ್ರದ್ಧಾಭಕ್ತಿವಿಶುದ್ಧಬುದ್ಧಿಃ ವೇದ|
– ಶ್ರೀಮದ್ಭಾಗವತ, ಸ್ಕಂಧ ೫, ಅಧ್ಯಾಯ ೨೬, ಸೂತ್ರ ೩೮

ಅರ್ಥ : ಉಪನಿಷತ್ತುಗಳಲ್ಲಿ ವರ್ಣಿಸಲಾಗಿರುವ ಭಗವಂತನ ನಿರ್ಗುಣ ಸ್ವರೂಪವು ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿದೆ. ಹೀಗಿದ್ದರೂ ಯಾರು ಅವನ ಸ್ಥೂಲರೂಪದ ವರ್ಣನೆಯನ್ನು ಓದುತ್ತಾನೆಯೋ, ಕೇಳುತ್ತಾನೆಯೋ ಅಥವಾ ಹೇಳುತ್ತಾನೆಯೋ, ಅವನ ಬುದ್ಧಿಯು ಶ್ರದ್ಧೆ ಮತ್ತು ಭಕ್ತಿ ಯಿಂದ ಶುದ್ಧವಾಗಿ ಅವನಿಗೆ ಆ ಸೂಕ್ಷ್ಮರೂಪದ ಜ್ಞಾನವೂ ಆಗುತ್ತದೆ / ಅನುಭೂತಿ ಬರುತ್ತದೆ.

ಸಾಧನೆಯನ್ನು ಮಾಡುತ್ತಿರುವುದರಿಂದ ಸನಾತನದ ಸಾಧಕರಲ್ಲಿ, ಹಾಗೆಯೇ ಇತರ ಕೆಲವು ಸಾಧಕರಲ್ಲಿ ಶ್ರದ್ಧೆ ಮತ್ತು ಭಕ್ತಿ ಹೆಚ್ಚುತ್ತಿದೆ, ಆದ್ದರಿಂದ ಅವರಿಗೂ ಸೂಕ್ಷ್ಮರೂಪದ ಜ್ಞಾನವಾಗುತ್ತದೆ ಅಥವಾ ಸೂಕ್ಷ್ಮಕ್ಕೆ ಸಂಬಂಧಿಸಿದ ಅನುಭೂತಿಗಳು ಬರುತ್ತವೆ. ಒಟ್ಟಿನಲ್ಲಿ ಧರ್ಮಗ್ರಂಥಗಳಲ್ಲಿ ವರ್ಣಿಸಿದ ವಚನಗಳ ಸತ್ಯತೆಯ ಅನುಭವವನ್ನು ಸಾಧಕರು ಪಡೆಯುತ್ತಿದ್ದಾರೆ. ಸನಾತನದ ವಿವಿಧ ಗ್ರಂಥಗಳಲ್ಲಿ ಕೆಲವೆಡೆ ‘ಸೂಕ್ಷ್ಮ ಶಬ್ದದ ಸಂದರ್ಭದಲ್ಲಿನ ಸಂಜ್ಞೆಗಳನ್ನು ಉಪಯೋಗಿಸಲಾಗಿದೆ. ಅವುಗಳ ವಿವರಣೆ ಮುಂದಿನಂತಿದೆ.

೧. ಸೂಕ್ಷ್ಮ ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆಯನ್ನು ಮಾಡುವವರಿಗೆ ಬರುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಜಗತ್ತು ಎನ್ನುತ್ತಾರೆ.

೨. ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.

೩. ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ ಎಂದು ಹೇಳುತ್ತಾರೆ.

೪. ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

೫. ಸೂಕ್ಷ್ಮಜ್ಞಾನದ ಪ್ರಯೋಗ : ಕೆಲವು ಸಾಧಕರು ಸೂಕ್ಷ್ಮವನ್ನು ತಿಳಿಯುವ ಕ್ಷಮತೆಯ ಅಧ್ಯಯನವೆಂದು ‘ಯಾವುದಾದರೊಂದು ವಸ್ತು, ಕೃತಿ, ಧಾರ್ಮಿಕ ವಿಧಿ, ವ್ಯಕ್ತಿ ಮುಂತಾದವುಗಳ ಬಗ್ಗೆ ಮನಸ್ಸು ಮತ್ತು ಬುದ್ಧಿಯ ಆಚೆಗೆ ಏನು ಅರಿವಾಗುತ್ತದೆ, ಎಂಬುದರ ಅಧ್ಯಯನ ಮಾಡುತ್ತಾರೆ. ಇದಕ್ಕೆ ‘ಸೂಕ್ಷ್ಮಜ್ಞಾನದ ಪ್ರಯೋಗ ಎನ್ನುತ್ತಾರೆ.

ಜಾಲತಾಣದಲ್ಲಿ ‘ಸೂಕ್ಷ್ಮಜ್ಞಾನದ ಚಿತ್ರ / ಪರೀಕ್ಷಣೆ’
ಮತ್ತು ‘ಅನುಭೂತಿ’ಗಳನ್ನು ಮುದ್ರಿಸುವುದರ ಹಿಂದಿನ ಉದ್ದೇಶ

ಸೂಕ್ಷ್ಮಚಿತ್ರಗಳು / ಪರೀಕ್ಷಣೆಗಳು : ನಾವು ಸ್ಥೂಲದಲ್ಲಿ ಯಾವುದಾದರೊಂದು ಕೃತಿ ಮಾಡಿದರೆ, ಆ ಕೃತಿಯಿಂದ ಸೂಕ್ಷ್ಮದಲ್ಲಿ ಏನು ಪರಿಣಾಮವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕ್ಷಮತೆಯು ಹೆಚ್ಚಿನ ಜನರಲ್ಲಿ ಇರುವುದಿಲ್ಲ. ಸೂಕ್ಷ್ಮದಲ್ಲಿನ ಪರಿಣಾಮಗಳು ಗೊತ್ತಾದರೆ ಸ್ಥೂಲದಲ್ಲಿನ ಕೃತಿಗಳ ಬಗ್ಗೆ ಶ್ರದ್ಧೆಯು ನಿರ್ಮಾಣವಾಗುತ್ತದೆ, ಹಾಗೆಯೇ ಸೂಕ್ಷ್ಮಜ್ಞಾನದ ಚಿತ್ರಗಳಿಂದ ತಾತ್ತ್ವಿಕ ಜ್ಞಾನದಲ್ಲಿನ (ಮಾಹಿತಿಯಲ್ಲಿನ) ಕಠಿಣ ಭಾಗವನ್ನು ತಿಳಿದುಕೊಳ್ಳಲೂ ಸುಲಭವಾಗುತ್ತದೆ.

ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ.

ಸೂಕ್ಷ್ಮಜ್ಞಾನದ ಚಿತ್ರಗಳ ಪರಿಭಾಷೆ ಮತ್ತು ಇತರ ವಿಶ್ಲೇಷಣೆಗಳು

೧. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಅನುಭೂತಿಜನ್ಯ ಸ್ಪಂದನಗಳು : ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಶಕ್ತಿ, ಭಾವ, ಚೈತನ್ಯ, ಆನಂದ, ಶಾಂತಿ ಇತ್ಯಾದಿ ಸ್ಪಂದನಗಳು ಸೂಕ್ಷ್ಮಜ್ಞಾನದ ಚಿತ್ರಗಳ ವಿಷಯಕ್ಕೆ ಸಂಬಂಧಿಸಿರುತ್ತವೆ. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಘಟಕಗಳು ಈ ಸ್ಪಂದನಗಳಿಂದ ವ್ಯಕ್ತವಾಗುತ್ತವೆ.

೨. ಸೂಕ್ಷ್ಮಜ್ಞಾನದ ಚಿತ್ರಕಾರರಿಗೆ ಸೂಕ್ಷ್ಮದಲ್ಲಿ ಕಾಣಿಸುವುದು, ಅರಿವಾಗುವುದು ಮತ್ತು ಕಾರ್ಯಕಾರಣಭಾವ ತಿಳಿಯುವುದು

ಅ. ಸೂಕ್ಷ್ಮ ದರ್ಶನೇಂದ್ರಿಯಗಳಿಗೆ, ಅಂದರೆ ಸೂಕ್ಷ್ಮ ಕಣ್ಣುಗಳಿಗೆ ಸೂಕ್ಷ್ಮದಲ್ಲಿನ ಸ್ಪಂದನಗಳ ರೂಪ, ಬಣ್ಣ ಮತ್ತು ಆಕಾರವು ಕಾಣಿಸುತ್ತದೆ. ಸೂಕ್ಷ್ಮಕರ್ಮೇಂದ್ರಿಯಗಳಿಗೆ, ಉದಾ.ಮನಸ್ಸಿಗೆ ಸೂಕ್ಷ್ಮದಲ್ಲಿನ ಒಳ್ಳೆಯ/ತ್ರಾಸದಾಯಕ ಇತ್ಯಾದಿಗಳ ಅರಿವಾಗುತ್ತದೆ. ಸೂಕ್ಷ್ಮಬುದ್ಧಿಗೆ ಸೂಕ್ಷ್ಮದಲ್ಲಿನ ಸ್ಪಂದನಗಳ ಕಾರ್ಯಕಾರಣಭಾವದ ಅರಿವಾಗುತ್ತದೆ.

ಆ. ಪ್ರತಿಯೊಬ್ಬರಲ್ಲಿ ಈ ಕ್ಷಮತೆಯು ಬೇರೆಬೇರೆಯಾಗಿರುತ್ತದೆ.

ಇ. ಯಾವುದಾದರೊಂದು ವಸ್ತುವಿನ ಸೂಕ್ಷ್ಮ ಸ್ಪಂದನಗಳ ರೂಪ ಮತ್ತು ಬಣ್ಣವು ಕಾಣಿಸು ವುದು, ತೇಜತತ್ತ್ವಕ್ಕೆ ಸಂಬಂಧಿಸಿದೆ. ಒಳ್ಳೆಯ ಅಥವಾ ತ್ರಾಸದಾಯಕ ಇತ್ಯಾದಿಗಳು ಅರಿವಾಗು ವುದು, ವಿಶ್ವಮನಸ್ಸಿಗೆ ಸಂಬಂಧಿಸಿದೆ ಮತ್ತು ಆ ವಿಷಯದಲ್ಲಿ ಜ್ಞಾನವನ್ನು ಪಡೆದುಕೊಳ್ಳುವುದು, ವಿಶ್ವಬುದ್ಧಿಗೆ ಸಂಬಂಧಿಸಿದೆ.

ಕೆಲವು ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ

ಪ್ರಸ್ತುತ ಜಾಲತಾಣದಲ್ಲಿನ ಜ್ಞಾನ (ಮಾಹಿತಿ) ಅಥವಾ ಸೂಕ್ಷ್ಮಜ್ಞಾನದ ಚಿತ್ರಗಳಲ್ಲಿ ಆಗಾಗ ಬಳಸಲಾಗುವ ವಿಶಿಷ್ಟ ಆಧ್ಯಾತ್ಮಿಕ ಸಂಜ್ಞೆಗಳನ್ನು ಗುಂಪುಗಳಾಗಿ ವಿಂಗಡಿಸಿ ಆ ಸಂಜ್ಞೆಗಳ ಅರ್ಥವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. ಆಧ್ಯಾತ್ಮಿಕ ಸಂಜ್ಞೆಗಳನ್ನು ಏರಿಕೆಯ ಕ್ರಮದಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ಒಂದು ಗುಂಪಿನ ಸಂಜ್ಞೆಗಳಲ್ಲಿ ಕನಿಷ್ಟದಿಂದ ಉಚ್ಚ ಸ್ತರ ಹೇಗಿರುತ್ತದೆ ಎಂಬುದೂ ವಾಚಕರಿಗೆ ಗಮನಕ್ಕೆ ಬರುವುದು.

sanjne